ಮಧುಗಿರಿ : ಕೌಟುಂಬಿಕ ಕಲಹ : ನಾಲೆಗೆ ಹಾರಿ ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಮಧುಗಿರಿ :

   ಸಾಂಸಾರಿಕ ಕಲಹದಿಂದ ಬೇಸತ್ತ ಮಹಿಳೆ ಯೊಬ್ಬಳು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿದ್ದಾಪುರ ಕೆರೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.

   ಮಧುಗಿರಿ ಪಟ್ಟಣದ ಒಂದನೇ ಬ್ಲಾಕ್ ನ ಆಲ್ಪಾ ಮೇಡಿಕಲ್ಸ್ ಸಮೀಪದ ವಾಸಿಗಳಾದ ಮಹಮ್ಮದ್ ಶಫಿ ಪತ್ನಿ ಹಸೀನಾ (25) ಅವರ (3) ವರ್ಷದ ಪುತ್ರಿ ಅಲ್ಪಿಯಾ ಕೊನೆನ್ ನರ್ಸರಿ ವಿಧ್ಯಾರ್ಥಿ, (8) ವರ್ಷದ ಅಫಿಯ ಕೊನೆನ್ 3 ನೇ ತರಗತಿ ಇಬ್ಬರು ಎಸ್.ಎಂ.ಶಾಲೆಯ ವಿಧ್ಯಾರ್ಥಿಗಳು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

   ಅಗ್ನಿಶಾಮಕ ದಳದವರು ಕೆರೆಯಿಂದ ಮೂರು ಶವಗಳನ್ನು ಹೊರೆ ತೆಗೆದಿದ್ದಾರೆ ಮಧುಗಿರಿ ಪೋಲಿಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap