ಕೊರಟಗೆರೆ :
ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಭೂಸ್ವಾದೀನಕ್ಕಾಗಿ 122 ಕೋಟಿರೂಗಳನ್ನು ಸರ್ಕಾರ ಬಿಡುಗಡೆ ಗೊಳಿಸಿದ್ದು ಹೊಸ ಸ್ವಾದೀನ ನೀತಿಯಂತೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿವೈ.ಎಸ್.ಪಾಟೀಲ್‍ತಿಳಿಸಿದರು.
ಅವರು ಕೊರಟಗೆರೆ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಜಲಸಂಪಮ್ಮೂಲ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕ ಸಾದಿಸಿ ಹೊಸ ಸ್ವಾಧೀನ ನೀತಿಯೊಂದಿಗೆ ಭೂಸ್ವಾದೀನ ಪ್ರಕ್ರಿಯೆ ನಡೆಸಲಾಗುವುದು ಎಂದರು, ಪ್ರತಿ ಗ್ರಾಮಗಳಲ್ಲೂ ಸಾರ್ವಜನಿಕ ಸ್ಮಶಾನ ಅವಶ್ಯಕತೆಯನ್ನು ಮಾನ್ಯ ಸವೋರ್ಚ ಹಾಗೂ ಉಚ್ಚ ನ್ಯಾಯಾಲಗಳು ನಿರ್ದೆಶನ ನೀಡಿವೆ ಅದರಂತೆ ಕೊರಟಗೆರೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಸ್ಮಶಾನಕ್ಕಾಗಿ ಸರ್ಕಾರಿ ಭೂಮಿಗಳನ್ನು ಗುರುತಿಸಿ ಮೀಸಲಿಡಲು, ಸರ್ಕಾರಿ ಭೂಮಿ ಲಭ್ಯವಿಲ್ಲದ ಕಡೆ ಖಾಸಗಿ ಭೂಮಿ ಖರೀದಿಸಲು ಸೂಚನೆ ನೀಡಲಾಗಿದೆ ಕೊರಟಗೆರೆ ಪಟ್ಟಣದಲ್ಲಿ ಮುಖ್ಯ ರಸ್ತೆಯ ಕಾಮಗಾರಿ ಅತ್ಯಂತ ವಿಳಂಬವಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೋಂದರೆ ಯಾಗುತ್ತಿದ್ದು ಕಾಮಗಾರಿಯನ್ನು ಕಾಲಮಿತಿ ಒಳಗೆ ಪೂರ್ಣಗೊಳಿಸುವಂತೆ ಸಮಭಂದಿಸಿದಅಧಿಕಾರಿಗಳಿಗೆ ಆದೇಶಿಸುವುದಾಗಿ ತಿಳಿಸಿದರು.
ಈಗಾಗಲೆ ಕಂದಾಯ ಇಲಾಖೆಯಲ್ಲಿನ ಸಾರ್ವಜನಿಕ ಕೆಲಸಗಳನ್ನು ಕಾಲಮಿತಿಯೊಳಗೆ ಮುಗಿಸಲು ಆದೇಶಿಸಲಾಗಿದೆ, ಆದರೆ ಪಹಣಿ ತಿದ್ದುಪಡಿ ಕೆಲಸಗಳು ಕಂದಾಯ ಮತ್ತು ಭೂಮಾಪನಾ ಇಲಾಖೆಗಳಿಗೆ ರೈತರು ಅಲೆಯುವುದು ದೂರುಗಳು ಕೇಳಿಬಂದಿದ್ದು ಅಂತಹ ಪ್ರಕರಣಗಳಲ್ಲಿ ತಹಶೀಲ್ದಾರ್ ಮತ್ತು ಎ.ಡಿ.ಎಲ್.ಆರ್ ಒಟ್ಟುಗೊಡಿ ತಿಂಗಳ ಒಳಗಿನ ಕಾಲಮಿತಿಯಲ್ಲಿ ತಿದ್ದುಪಡಿ ಪ್ರಕರಣಗಳನ್ನು ಬಗೆಹರಿಸಿಕೊಡಲು ಅದೇಶಿಸಿರುವುದಾಗಿ ತಿಳಿಸಿದರು. ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಆದೇಶಿಸಿದ್ದು ಜಾತ್ರೆ, ನಾಟಕ, ಸಾರ್ವಜನಿಕ ಸಭೆಗಳನ್ನು ನಿರ್ಬಂದಿಸಲು ಸೂಚಿಸಲಾಗಿದೆ, ಅದೇ ರೀತಿಯಾಗಿ ಕೊರಟಗೆರೆ ಪಟ್ಟಣದಲ್ಲಿ ವಾಣಿಜ್ಯ ವಹಿವಾಟು, ಜನ ಸಂಪರ್ಕಗಳಲ್ಲಿ ಮಾಸ್ಕ್ ಧರಿಸದೆ ಇರುವುದನ್ನು ಕಂಡುಬಂದಿದ್ದು ಮೊದಲು ಅರಿವು ಮೂಡಿಸಿ ನಂತರ ದಿನಗಳಲ್ಲಿ ಆದೇಶಿಸಲಾಗಿದೆ, 45 ವರ್ಷದ ಮೇಲ್ಪಟ್ಟು ಎಲ್ಲರೂ ಯಾವುದೇ ಅನುಮನ ವಿಲ್ಲದೆ ಕೋವಿಡ್ ಲಸಿಕೆ ಪಡೆಯುವಂತೆ ಕೋರಿದರು. ಸರ್ಕಾರಿ ಬಸ್ ಸಿಬ್ಬಂದಿಗಳ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೋಂದರೆಯಾಗದಂತೆ ಜಿಲ್ಲಾದ್ಯಂತ 1580 ಖಾಸಗಿ ಬಸ್, ಮ್ಯಕ್ಸಿ ಕ್ಯಾಭ್‍ಗಳನ್ನು ವ್ಯವಸ್ಥೆಮಾಡಲಾಗಿದ್ದು ಆರ್.ಟಿ.ಎ. ನಿಯಮಕ್ಕಿಂತ ಹೆಚ್ಚು ಹಣವನ್ನು ಪ್ರಯಾಣಿಕರಿಂದ ಖಾಸಗಿ ವಾಹನದ ಸಿಬ್ಬಂದಿ ಪಡೆದಲ್ಲಿ ಪ್ರಯಾಣಿಕರ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜು, ಶಿರಸ್ಥೆದಾರ್ ಚಂದ್ರಪ್ಪ, ಪ.ಪಂ.ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಕಂದಾಯಾಧಿಕಾರಿ ಪ್ರತಾಪ್, ವಿ.ಎ.ಬಸವರಾಜು ಸೇರಿದಂತೆ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ