ಕೊರಟಗೆರೆಗೆ 900 ಕೋಟಿ ಅನುದಾನ ತಂದಿರುವೆ – ಡಾ.ಜಿ.ಪರಮೇಶ್ವರ್

 ಕೊರಟಗೆರೆ :

     ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಪ್ರದೇಶದ ಬಡವರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 900ಕೋಟಿಗೂ ಅಧಿಕ ಅನುದಾನವನ್ನು ಕೊರಟಗೆರೆ ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

      ತಾಲೂಕಿನ ಹೊಳವನಹಳ್ಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಹಂಚಿಹಳ್ಳಿ, ದೊಡ್ಡಸಾಗ್ಗೆರೆ, ಕ್ಯಾಮೇನಹಳ್ಳಿ, ಹೊಳವನಹಳ್ಳಿ, ಬೈಚಾಪುರ ಗ್ರಾಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಸುಮಾರು 10ಕೋಟಿ ವೆಚ್ಚದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೇರವೆರಿಸಿ ಮಾತನಾಡಿದರು.

      ತುಂಬುಗಾನಹಳ್ಳಿಯ ಕೆಎಸ್‍ಆರ್‍ಪಿ ಘಟಕದ 12ನೇ ಬೆಟಾಲಿಯನ್‍ಗೆ 550ಕೋಟಿ, ಕೋಳಾಲ ಮತ್ತು ಸಿದ್ದರಬೇಟ್ಟ ವಸತಿ ಶಾಲೆಗೆ 60ಕೋಟಿ, ಏಕಲವ್ಯ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ 25ಕೋಟಿ, ಸರಕಾರಿ ಶಾಲೆ, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ರಸ್ತೆ ಕಾಮಗಾರಿ ಹಾಗೂ ವಿವಿಧ ಅಭಿವೃದ್ದಿ ಕೆಲಸಗಳಿಗೆ 300ಕೋಟಿಗೂ ಅಧಿಕ ಅನುಧಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ನಾನಾ ಕಾಮಗಾರಿಗೆ ಚಾಲನೆ:

      ಜಿ.ನಾಗೇನಹಳ್ಳಿ ರಸ್ತೆ-45ಲಕ್ಷ, ದೊಡ್ಡಸಾಗ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ-2ಕೋಟಿ 50ಲಕ್ಷ, ತೀತಾ ಪಶು ಆಸ್ಪತ್ರೆ-35ಲಕ್ಷ, ಆಂಜನೇಯ ದೇವಾಲಯ ಮತ್ತು ಹೈಮಾಸ್ಕ್ ದ್ವೀಪ-14ಲಕ್ಷ, ತಿಮ್ಮನಹಳ್ಳಿ ಶುದ್ದ ಕುಡಿಯುವ ನೀರಿನ ಘಟಕ-12ಲಕ್ಷ, ಹೊಳವನಹಳ್ಳಿ ವಿವಿಧ ಕಾಮಗಾರಿ-1ಕೋಟಿ, ಹೈಸ್ಕೂಲ್ ಕಟ್ಟಡ-45ಲಕ್ಷ, ಅಕ್ಕಿರಾಂಪುರದ ಗ್ರಾಪಂ ಕಟ್ಟಡ ಮತ್ತು ಸಿಸಿರಸ್ತೆ-1ಕೋಟಿ, ರಾಯವಾರ ನೀರಿನ ಘಟಕ-12ಲಕ್ಷ, ಸಿದ್ದನಹಳ್ಳಿ ವಿವಿಧ ಕಾಮಗಾರಿ-45ಲಕ್ಷ ಮತ್ತು ಕೊರಟಗೆರೆ ಕೃಷಿ ಇಲಾಖೆ ಕಟ್ಟಡ-50ಲಕ್ಷ ಸೇರಿ 10ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.

      ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಪ್ರೇಮಾ, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ನಾಜೀಮಾಭೀ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಡಿಎಚ್‍ಒ ನಾಗೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಮುಖಂಡರಾದ ವೆಂಕಟಚಲಯ್ಯ, ಜಯರಾಮು, ಕವಿತಾ, ರಾಜಣ್ಣ, ಜಯಮ್ಮ, ವಿನಯ್, ಶಿವರಾಮಯ್ಯ, ನಾರಾಯಣಪ್ಪ, ವೆಂಕಟೇಗೌಡ, ಅರವಿಂದ್ ಸೇರಿದಂತೆ ಇತರರು ಇದ್ದರು.

ಸಮಾನ ಪರಿಹಾರ ಕೊಟ್ಟರೆ ಮಾತ್ರ ಡ್ಯಾಂಗೆ ಜಮೀನು : ಪರಂ

      ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ 13ಸಾವಿರ ಕೋಟಿ ಮೀಸಲು ಇಡಲಾಗಿದೆ. ಬಿಜೆಪಿ ಸರಕಾರದಲ್ಲಿ ಈಗ ಅದರ ಮೊತ್ತ 20ಸಾವಿರ ಕೋಟಿಗೂ ಅಧಿಕ ದಾಟಿದೆ. ಕೊರಟಗೆರೆ ಕ್ಷೇತ್ರದ 13ಗ್ರಾಮದ ಜೊತೆ 5ಸಾವಿರ ಎಕರೆ ಜಮೀನಿನಲ್ಲಿ ಡ್ಯಾಂ ನಿರ್ಮಾಣ ಆಗಲಿದೆ. ದೊಡ್ಡಬಳ್ಳಾಪುರ ರೈತರ 1ಎಕರೆ ಜಮೀನಿಗೆ 32ಲಕ್ಷ ನೀಡುವಂತೆ ಕೊರಟಗೆರೆ ರೈತರ ಪ್ರತಿ ಎಕರೇಗೆ 32ಲಕ್ಷ ಪರಿಹಾರ ನೀಡಿದರೇ ಮಾತ್ರ ರೈತರು ಜಮೀನು ನೀಡ್ತಾರೇ ಇಲ್ಲವಾದರೇ ಇಂಚು ಭೂಮಿಯು ಸರಕಾರಕ್ಕೆ ನೀಡೊದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap