ಕೊರಟಗೆರೆ : ಜೂಜು ಅಡ್ಡೆ ಮೇಲೆ ದಾಳಿ : ಐವರ ಬಂಧನ

 ಕೊರಟಗೆರೆ :

      ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಕೋಳಾಲ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 5 ಜನರನ್ನು ಬಂಧಿಸಿ. ಪಣಕ್ಕಿಟ್ಟಿದ್ದ 33,500 ನಗದು ವಶಪಡಿಸಿಕೊಂಡಿದ್ದಾರೆ.

      ಕೊರಟಗೆರೆ ತಾಲ್ಲೂಕಿನ ಸಂಕೇನಹಳ್ಳಿ ಗ್ರಾಮದ ಗೊಲ್ಲರಹಟ್ಟಿ ಕಟ್ಟೆಯ ಮೇಲೆ ಜೂಜಾಡುತ್ತಿದ್ದ ತುಮಕೂರಿನ ಮಂಜುನಾಥ್, ಗಿರೀಶ್, ಬೆಳಗುಂಬದ ಸಿದ್ದರಾಮಣ್ಣ, ನಾಗೇನಹಳ್ಳಿ ಗೊಲ್ಲರಹಟ್ಟಿ ರಂಗಸ್ವಾಮಿ, ಸಂಕೇನಹಳ್ಳಿ ಕಿರಣ್‍ರವರನ್ನು ಕೋಳಾಲ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 33,500 ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

      ದಾಳಿ ಸಮಯದಲ್ಲಿ ಕೋಳಾಲ ಪಿಎಸೈ ಮಹಾಲಕ್ಷ್ಮಮ್ಮ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಈ ಸಂಬಂಧ ಕೋಳಾಲ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link