ರೈತರಿಂದ ತರಕಾರಿ ಖರೀದಿಸಿ ಆಸ್ಪತ್ರೆಗೆ ಬರುವ ಬಡ ಜನರಿಗೆÉ ಊಟ

ಕೊರಟಗೆರೆ : 

      ಕೊರೊನಾ ಎರಡನೇ ಅಲೆಯ ಲಾಕ್‍ಡೌನ್‍ನಿಂದ ಕೈಗಾರಿಕಾ ವಲಯ, ಹತ್ತಾರು ದೇವಾಲಯ, ಮದುವೆ, ಶುಭಕಾರ್ಯ ಮತ್ತು ಸಭೆ ಸಮಾರಂಭ ರದ್ದಾಗಿವೆ. ತರಕಾರಿ ವಹಿವಾಟಿಗೆ ಮಾರುಕಟ್ಟೆ ಅಥವಾ ವಾರದ ಸಂತೆಯು ಇಲ್ಲದಿರುವ ಪರಿಣಾಮ ರೈತಾಪಿವರ್ಗ ಬೆಳೆದಿರುವ ಲಕ್ಷಾಂತರ ರೂ.ಮೌಲ್ಯದ ಬೆಳೆಗಳು ಭೂತಾಯಿಯ ಪಾಳಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗವು ರೈತರಿಂದ ತರಕಾರಿ ಖರೀದಿಸುವ ಪ್ರಯತ್ನಕ್ಕೆ ಮುಂದಾಗಿದೆ.

      ಗ್ರಾಮೀಣ ಪ್ರದೇಶದ ರೈತಾಪಿವರ್ಗ ಬೆಳೆದಿರುವ ಟೊಮೋಟೊ, ಹುರುಳಿಕಾಯಿ, ಈರುಳ್ಳಿ, ಮೆಣಸಿನಕಾಯಿ, ಕ್ಯಾರೇಟ್, ಬದನೆಕಾಯಿ ಸೇರಿದಂತೆ ಹತ್ತಾರು ರೀತಿಯ ತರಕಾರಿಯನ್ನು ರೈತರ ಜಮೀನಿಗೆ ಭೇಟಿ ನೀಡಿ ತಾವೇ ಖುದ್ದಾಗಿ ರೈತರ ಜೊತೆಗೂಡಿ ಕೊಯ್ಲುಮಾಡಿಕೊಂಡು ಬರುವಂತಹ ವಿಶೇಷ ಪ್ರಯತ್ನ ರೈತರಿಗೆ ಆತ್ಮಬಲ ನೀಡುವಂತಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿ ರೈತರ ತರಕಾರಿ ಬೆಳೆಯಿದ್ದರೇ ನಮ್ಮ ತಂಡಕ್ಕೆ ತಿಳಿಸಿದರೇ ನಾವು ಖರೀದಿಸುತ್ತೇವೆ ಎಂದು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

      ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್, ಮಾರುತಿ, ರೇಣುಕಾ ಆಸ್ಪತ್ರೆ ಹಾಗೂ ಹೊಳವನಹಳ್ಳಿ, ಅಕ್ಕಿರಾಂಪುರ, ಬೈರೇನಹಳ್ಳಿ ಮತ್ತು ಬುಕ್ಕಾಪಟ್ಟಣ ಆಸ್ಪತ್ರೆಗಳಿಗೆ ಆಗಮಿಸುವ ಗ್ರಾಮೀಣ ಜನತೆಗೆ ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದ ಯುವಕರತಂಡ ಪ್ರತಿನಿತ್ಯ 600 ರಿಂದ 700 ಜನರಿಗೆ ಉಚಿತವಾಗಿ ಮಧ್ಯಾಹ್ನದ ಊಟದ ಜೊತೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಳೆದ 18 ದಿನಗಳಿಂದ ನಿರಂತರವಾಗಿ ಮಾಡುತ್ತಿದೆ.

     ಕೊರೊನಾ ಲಾಕ್‍ಡೌನ್‍ನಿಂದ ಮಾರುಕಟ್ಟೆ ಇಲ್ಲದೆ ನಷ್ಟದಲ್ಲಿರುವ ರೈತರಿಂದ ತರಕಾರಿ ಖರೀದಿಸಿ ರೈತರಿಗೆ ಆಸರೆ ಆಗುವುದು ಒಂದಾದರೇ ಮತ್ತೇ ಅದೇ ಗ್ರಾಮೀಣ ಭಾಗದಿಂದ ಆರೋಗ್ಯದ ಸಮಸ್ಯೆಗಾಗಿ ಆಸ್ಪತ್ರೆಗೆ ಬರುವ ಅದೇ ರೈತರಿಗೆ ಮತ್ತು ಬಡಜನತೆಗೆ ಮಧ್ಯಾಹ್ನ ಊಟ ನೀಡುತ್ತೀರುವ ಎಂಎನ್‍ಜೆ ಮಂಜುನಾಥ್ ಅವರ ಸಮಾಜ ಸೇವೆಗೆ ಸಾರ್ವಜನಿಕ ವಲಯದಿಂದ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap