ಸರ್ಕಾರಿ ಜಾಗದಲ್ಲಿ ವಸತಿ ರಹಿತರಿಗೆ ಮನೆ

 ಕೊರಟಗೆರೆ :

     ವಸತಿ ರಹಿತರಿಗೆ ಸರ್ಕಾರಿ ಜಾಗಗಳನ್ನು ಗುರುತಿಸಿ ಮನೆಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ತ್ವರಿತವಾಗಿ ಮಾಡ ಲಾಗುವುದು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

     ಅವರು ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬೆಳಧರ ಗ್ರಾಮದಲ್ಲಿ ಹಟ್ಟಿಮಾರಮ್ಮ ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಾಮದ ವಿವಿಧ ಸಮಸ್ಯೆಗಳ ಸ್ಥಳ ಪರಿಶೀಲಿಸಿ ಮಾತನಾಡಿದರು. ಈಗಾಗಲೆ ಕ್ಷೇತ್ರದ ಎಲ್ಲಾ ಗ್ರಾಮಪಂಚಾಯಿತಿಗಳಿಗೆ 100 ಆಶ್ರಯ ಮನೆಗಳನ್ನು ವಿಶೇಷವಾಗಿ ಮಂಜೂರು ಮಾಡಿಸಲಾಗಿದೆ. ನಿವೇಶನ ಇರುವ ಬಡ ಕುಟುಂಬಗಳಿಗೆ ಮನೆ ಮಂಜೂರಾಗುವುದು. ಅದೇ ರೀತಿಯಾಗಿ ನಿವೇಶÀನ ರಹಿತ ಕಡುಬಡವರಿಗೆ ಗ್ರಾಮಗಳಲ್ಲಿನ ಸರ್ಕಾರಿ ಭೂಮಿಗಳ ಗುರುತಿಸಿ ಅವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಆದರೆ ಇದರಲ್ಲಿ ಅಧಿಕಾರಿಗಳ ಪಾರದರ್ಶಕತೆ, ಗ್ರಾಪಂ,ಸದಸ್ಯರ ಬದ್ದತೆ ಅತಿಮುಖ್ಯವಾಗಿದೆ ಎಂದರು.

    ಬೆಳಧರ ಗ್ರಾಮದಲ್ಲಿ 5.28 ಎಕರೆ ಸರ್ಕಾರಿ ಜಮೀನು ಇದ್ದು ಇದರಲ್ಲಿ 1.28 ಎಕರೆ ಭೂಮಿಯನ್ನು ಸಾರ್ವಜನಿಕ ಆಸ್ಪತ್ರೆಗೆ ಮೀಸಲಿಟ್ಟು, ಉಳಿದ ಜಮೀನನ್ನು ನಿರಾಶ್ರಿತ ನಿವೇಶನ ವಸತಿ ಹೀನರಿಗೆ ಮನೆಯನ್ನು ನಿರ್ಮಿಸಿಕೊಡಲಾಗುವುದು. ಇದಕ್ಕೆ ಎಲ್ಲ್ಲರ ಸಹಕಾರ ಅಗತ್ಯ. ಅದೇ ರೀತಿ ಗ್ರಾಮಸ್ಥರ ಬೇಡಿಕೆಯಂತೆ, ಅಲ್ಪಸಂಖ್ಯಾತರ ಸಮುದಾಯ ಭವನ, ಕುಡಿಯುವ ನೀರಿನ ಓವರ್ ಟ್ಯಾಂಕ್, ಸುಸಜ್ಜಿತ ಚರಂಡಿ, ರಸ್ತೆ ಮಾಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಮುಖಂಡರಾದ ನ್ಯಾತೇಗೌಡ ಸೇರಿದಂತೆ ಇತರರು ಹಾರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap