ಹುಳಿಯಾರು:
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಲಾಗಿದೆ.ಗುರುಗಳು ಆತ್ಮವಂಚನೆ ಮಾಡದೇ ಶಿಷ್ಯರನ್ನು ತಮ್ಮ ಮಕ್ಕಳೆಂದು ಭಾವಿಸಿ ಅತ್ಯತ್ತಮ ಶಿಕ್ಷಣ ನೀಡುತ್ತಾರೊ ಅಂತಹ ಗುರುಗಳನ್ನ ಶಿಷ್ಯರು ಪೂಜ್ಯ ಭಾವದಿಂದ ಕಾಣುತ್ತಾರೆ ಎಂದು ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮಿಜಿ ತಿಳಿಸಿದರು.
ಹುಳಿಯಾರು ಸಮೀಪದ ತಿಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಮತ್ತು ನೇಗಿಲಯೋಗಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ರೈತ ಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರೈತರು ಭೂಮಿಗೆ ರಾಸಯನಿಕ ಗೋಬ್ಬರ ಬಳಸದೆ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು 2-3 ಎಕ್ಕರೆ ಜಮೀನಿನಲ್ಲಿ ಮಿಶ್ರ ಬೆಳೆ ಭೆಳೆಯುವ ಮೂಲಕ ಮಣ್ಣಿನ ರಕ್ಷಣೆ ಜೋತೆಗೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಸಲಹೆ ನೀಡಿದರು.
ಇಂದು ಒಟ್ಟು 1 ಲಕ್ಷ 35 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು ಸುಮಾರು 6000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆ ಶ್ರೀ ಮಠಕ್ಕಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗು ಅವರ ಪೋಷಕರನ್ನು ಸನ್ಮಾನಿಸಲಾಯಿತು.ಉತ್ತಮ ರೈತ ಪ್ರಶಸ್ತಿ ಪಡೆದ ಲಕ್ಕೇನಹಳ್ಳಿ ಗ್ರಾಮದ ಕುಮಾರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಭಾರತೀಯ ಬಾಹ್ಯಕಾಶ ಸಂಸ್ಥೆ ನಿವೃತ್ತ ವಿಜ್ಞಾನಿ ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿದರು.
ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸ.ಪ್ರಾ.ಶಾ.ಶಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹೆಚ್.ಎಸ್.ಪ್ರಕಾಶ್.ಜಿಪಂ ಸದಸ್ಯೆ ಮಂಜುಳ.ತಾಪಂ ಸದಸ್ಯೆ ಇಂದಿರಾಕುಮಾರಿ.ಗ್ರಾಪಂ ಅಧ್ಯಕ್ಷೆ ಉಮಾ ದೇವಿ.ವಕೀಲರಾದ ಶ್ರೀನಿವಾಸ ಮೂರ್ತಿ.ಗೋವಿಂದರಾಜ್.ವೈದ್ಯ ಹೊಯ್ಸಳಕಟ್ಟೆ ರಮೇಶ್.ದಿವಾಕರ್.ಗ್ರಾಪಂ ಸದಸ್ಯರಾದ ರಘುವೀರ್.ಗುರು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ