ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ : ಡಿಸಿಎಂ

ಕೊರಟಗೆರೆ:-

         ರಾಜ್ಯದ 100 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದುಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರಈವರೆಗೂರಾಜ್ಯ ಸರ್ಕಾರಕ್ಕೆ ಪರಿಹಾರ ಹಣ ಬಿಡುಗಡೆ ಮಾಡಿರುವುದಿಲ್ಲ, ಮುಂದಿನ ದಿನಗಳಲ್ಲಿ ತುರ್ತು ಬಿಡುಗಡೆಗೊಳಿಸಬೇಕು ಎಂದು ಡಿಸಿಎಂ ಪರಮೇಶ್ವರ್‍ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

        ಅವರು ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಬರ ನಿರ್ವಹಣೆಗೆಕೇಂದ್ರ ಸರ್ಕಾರದಿಂದಈವರೆಗೂಯಾವದೇ ಹಣ ಬಿಡುಗಡೆಗೊಂಡಿಲ್ಲ, ಬರ ನಿರ್ವಹಣೆಗೆ ಶೀಘ್ರ ಹಣ ಬಿಡುಗಡೆಗೊಳಿಸಬೇಕು ಎಂದರು.

        ರಾಜ್ಯದಎಲ್ಲಾಬರಪೀಡಿತ ಪ್ರದೇಶಕ್ಕೆಕೇಂದ್ರದ ಬರಅಧ್ಯಯನತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ನಾನು ಹಾಗೂ ಮುಖ್ಯಮಂತ್ರಿಗಳು ಬರ ನಿರ್ವಹಣೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಬೇಟಿ ಮಾಡಿ ಚರ್ಚಿಸಿದ್ದೇವೆ, ರಾಜ್ಯದ ನಿಯೋಗ ಸಹ ಕೇಂದ್ರದ ಗೃಹ ಸಚಿವರನ್ನುಎರಡು ಭಾರಿ ಬೇಟಿ ಮಾಡಿ ಬರಗಾಲಕ್ಕೆ ಸ್ಪಂಧಿಸುವಂತೆ ಮನವಿ ಮಾಡಲಾಗಿದೆ, ಕೇಂದ್ರದಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್‍ಅನುಧಾನ ಹೊರತು ಪಡಿಸಿ ವಿಶೇಷವಾಗಿ ಹೆಚ್ಚಿನಅನುಧಾನರಾಜ್ಯಕ್ಕೆ ನೀಡಬೇಕುಎಂದು ಆಗ್ರಹಿಸಿದರು.

        ಬರ ನಿರ್ವಹಣೆಗೆತುಮಕೂರುಜಿಲ್ಲೆಯ 10ತಾಲೂಕಿಗೂ ಬರಪೀಡಿತಕಾಮಗಾರಿ ಮತ್ತುಕುಡಿಯುವ ನೀರಿನ ಪೂರೈಕೆಯ ತುರ್ತು ಖರ್ಚಿಗಾಗಿ ರಾಜ್ಯ ಸರಕಾರದಿಂದ ಈಗಾಗಲೇ ತುಮಕೂರು ಜಿಲ್ಲಾಡಳಿತಕ್ಕೆ 7ಕೋಟಿಅನುಧಾನ ಬಿಡುಗಡೆ ಮಾಡಲಾಗಿದೆ, ಮುಂಗಾರು ಮಳೆ ಕುಂಠಿತವಾಗಿ ಕೇವಲ ಶೇ.30ರಷ್ಟು ಮಾತ್ರರೈತರು ಬಿತ್ತನೆ ಮಾಡಿಅದರಲ್ಲೂ ಬೆಳೆಯಲ್ಲಿ ಶೇ.75ರಷ್ಟು ನಷ್ಟವಾಗಿ ಶೇ.25ರಷ್ಟು ಮಾತ್ರ ಬೆಳೆಯಾಗಿದೆ, ಮೇವು ಹಾಗೂ ಕುಡಿಯುವ ನೀರಿನಆಹಾಕಾರಎದುರಾಗುವ ಸೂಚನೆಗಳಿದ್ದು, ರಾಜ್ಯದ ಮತ್ತು ತುಮಕೂರು ಜಿಲ್ಲೆಯ ಯಾವ ತಾಲೂಕಿನಲ್ಲಿ ಬರ ಎದುರಾದರೂ ಸಹ ನಾನೇ ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ನಡೆಸುತ್ತೇನೆಎಂದು ಭರವಸೆ ನೀಡಿದರು.

       ಕೊರಟಗೆರೆ ಕ್ಷೇತ್ರದಲ್ಲಿ 21ಸಾವಿರ ಹೇಕ್ಟರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದುಇದರಲ್ಲಿ 19ಸಾವಿರ ಹೇಕ್ಟರ್‍ಭೂಮಿಯಲ್ಲಿ ಬೆಳೆ ನಾಶವಾಗಿ ರೈತರು ನೂರಾರುಕೋಟಿರೂ ನಷ್ಟಅನುಭವಿಸುತ್ತಿದ್ದಾರೆ. ರೈತರ ನೀರಾವರಿ ಪ್ರದೇಶ 3ಸಾವಿರ ಹೇಕ್ಟರ್ ಭೂಮಿಯಲ್ಲಿ ಮಾತ್ರಉತ್ತಮವಾಗಿ ಬೆಳೆಯಾಗಿದ್ದು, ಒಂದು ತಿಂಗಳಿಗಷ್ಟು ಆಗುವಷ್ಟು ಮಾತ್ರ ಮೇವು ಸಂಗ್ರಹಇದ್ದು, ಪಶು ಇಲಾಖೆಯಿಂದ7ಸಾವಿರ ಸೀಡ್‍ಕೀಟ್ ರೈತರಿಗೆ ವಿತರಣೆ ಮಾಡಿ ಮೇವು ಬೆಳೆಯುವಂತೆ ವ್ಯವಸ್ಥೆ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಭೀಕರತೆಯನ್ನು ಸಂಭಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದುಎಚ್ಚರಿಕೆ ನೀಡಿದರು.

        ರಾಜ್ಯ ಸರ್ಕಾರಶೈಕ್ಷಣಿಕಗುಣಮಟ್ಟ ಹೆಚ್ಚಿಸಲು1ಸಾವಿರಕೋಟಿರೂ ಮೀಸಲಿಟ್ಟಿದ್ದು, ಕೊರಟಗೆರೆಕ್ಷೇತ್ರದ ಶಾಲೆಗಳ ನಿರ್ವಹಣೆಗೆ 53ಕೋಟಿ ಅನುಧಾನ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದ್ದು, ಶೈಕ್ಷಣಿಕಅಭಿವೃದ್ದಿಗೆ ಹೆಚ್ಚಿನ ಅನುಕೂಲ ಕಲ್ಪಿಸಲುಚಿಂತನೆ ನಡೆಸಿದ್ದು,. ಕೊರಟಗೆರೆಅಭಿವೃದ್ದಿದೃಷ್ಟಿಯಲ್ಲಿ ಸಾರ್ವಜನಿಕರಾಗಲಿ ಅಥವಾ ಸಂಭಂಧಪಟ್ಟ ಅಧಿಕಾರಿಗಳಾಗಲಿ ನಮ್ಮ ಗಮನಕ್ಕೆ ತಂದರೆ ಪರಿಹರಿಸಲಾಗುವುದುಎಂದು ಡಿಸಿಎಂ ಭರವಸೆ ನೀಡಿದರು.

      ಅಹವಾಲು ಸ್ವೀಕಾರ:- ಕೊರಟಗೆರೆ ಪಟ್ಟಣದ ಶಾಸಕರಕಚೇರಿಯಲ್ಲಿ ಡಿಸಿಎಂ ಡಾ,ಜಿ ಪರಮೇಶ್ವರ್, ಸಂಸದ ಮುದ್ದಹನುಮೇಗೌಡ, ಜಿಲ್ಲಾಧಿಕಾರಿರಾಕೇಶ್‍ಕುಮಾರ್ ಬರಗಾಲ ನಿರ್ವಹಣೆಯ ಬಗ್ಗೆ ಸತತ1 ತಾಸಿಗೂ ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ನೂರಾರುಜನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೆ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕ ತಂದುತಕ್ಷಣ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳ ಮುಖೇನ ಸೂಚಿಸಿದರು. ವಸತಿಯೋಜನೆ, ಕುಡಿಯುವ ನೀರು, ಲೀಡ್ಕರ್ ಮನೆಗಳು, ಸಮರ್ಪಕರಸ್ತೆ, ಶಾಲೆಗಳ ನಿರ್ಮಾಣ, ಗಂಗಾ ಕಲ್ಯಾಣಯೋಜನೆ ಸೇರಿದಂತೆಇನ್ನಿತರ ವಿಚಾರಗಳನ್ನು ಹೊತ್ತು ಸಾರ್ವಜನಿಕರು ಡಿಸಿಎಂ ಗೆ ಅಹವಾಲು ನೀಡಿದರು.

       ಈ ಸಂಧರ್ಬದಲ್ಲಿ ತುಮಕೂರು ಸಂಸದ ಮುದ್ದಹನುಮೇಗೌಡ, ಜಿಲ್ಲಾಧಿಕಾರಿರಾಕೇಶ್‍ಕುಮಾರ್, ಎಸ್‍ಪಿ ಡಾ.ದಿವ್ಯಾಗೋಪಿನಾಥ್ ,ಮಧುಗಿರಿ ಉಪವಿಭಾಗಾಧಿಕಾರಿ ವೆಂಕಟೇಶಯ್ಯ,ಡಿವೈಎಸ್‍ಪಿಧರಣೇಶ್ , ತಾಪಂಅಧ್ಯಕ್ಷಕೆಂಪರಾಮಯ್ಯ, ಉಪಾದ್ಯಕ್ಷ ನರಸಮ್ಮ, ಬ್ಲಾಕ್‍ ಕಾಂಗ್ರೇಸ್‍ ಅಧ್ಯಕ್ಷ ಅಶ್ವತ್ಥ ನಾರಾಯಣ್,ಅರಕೆರೆ ಶಂಕರ್, ತಹಶೀಲ್ದಾರ್ ನಾಗರಾಜು, ಇಓ ಶಿವಪ್ರಕಾಶ್, ಎಇಇ ಜಗದೀಶ್,ಜಿ,ಪಂ ಎಇಇರಂಗಪ್ಪ, ಕೃಷಿಇಲಾಖೆಯಅಶೋಕ್, ನಾಗರಾಜು, ನೂರುಆಜಾಂ ಸೇರಿದಂತೆಇತರರುಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link