ತಿಪಟೂರು :
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನೆನನ್ನೆ ಸುರಿದ ಮಳೆಗೆ ಸಂಪೂರ್ಣವಾಗಿ ಸ್ಕೇಟಿಂಗ್ ಕ್ರೀಡಾಂಗಣವಾಗಿ ಮಾರ್ಪಟ್ಟು ಪ್ರಾಯಾಣಿಕರು ಜಾರಿ ಬೀಳುತ್ತಿದ್ದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹೊಂದಿಕೊAಡAತೆ ಇರುವ ರಾಜಕಾಲುವೆಯಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ರಾಜಾಕಾಲುವೆಯಲ್ಲಿ ಇದ್ದ ಕಲ್ಮಶವನ್ನೆಲ್ಲಾ ತೆಗೆದುಕೊಂಡು ಬಂದು ಬಸ್ ನಿಲ್ದಾಣಕ್ಕೆ ಸೇರಿಸುವ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತದೆ.
ಆದರೆ ಇಷ್ಟೆಲ್ಲಾ ಸಮಸ್ಯೆಗಳಿದ್ದರು ಕೆ.ಎಸ್.ಆರ್.ಟಿಸಿ ಅಧಿಕಾರಿಗಳು ನೀರು ನಮ್ಮ ಕಛೇರಿಗೆ ಏನು ಬರುವುದಿಲ್ಲ, ಬಸ್‌ನಿಲ್ದಾಣಕ್ಕೆ ಬಂದರೆ ಊರಿಗೆ ಹೋಗುವ ಪ್ರಯಾಣಿಕರು ಹೇಗೋ ಹೋಗುತ್ತಾರೆ ಎಂಬ ದಿವ್ಯ ನಿರ್ಲಕ್ಷö್ಯತಾಳೀರುವುದರಿಂದ ಮಳೆ ಬಂದರೆ ಬಸ್‌ನಿಲ್ದಾಣ ಗಬ್ಬದು ಹೋಗುತ್ತದೆ.
ಅದೇ ರೀತಿ ನೆನ್ನೆ-ಮೊನ್ನೆ ರಾತ್ರಿ ಸುರಿದ ಮಳೆಗೆ ಬಸ್‌ನಿಲ್ದಾಣವನ್ನು ಕೊಳಚೆ ನೀರು ಆಕ್ರಮಿಸಿದತ್ತು ಆದರೆ ಇಂದು ಬೆಳಗ್ಗೆ ಕೊಳಚೆ ಮಿಶ್ರಿತ ನೀರು ಬಸ್‌ನಿಲ್ದಾಣದಲ್ಲಿ ನಿಂತಿದ್ದು ಬೆಳಗ್ಗೆ ಬಸ್‌ನಿಲ್ದಾಣಕ್ಕೆ ಜನರು ಮಾತ್ರ ಬೀಳುತ್ತಾ ಏಳುತ್ತಿದ್ದರು ಇವರಲ್ಲಿ ಕೆಲವರು ಶೌಚಾಲಯದ ನೀರನಲ್ಲು ಇಲ್ಲು ಸಿಕ್ಕ ನೀರಿನಲ್ಲಿ ತಮ್ಮ ಬಟ್ಟೆ ಕೈಕಾಲನ್ನು ಶುಚಿಗೊಳಿಸಿಕೊಂಡರೆ ಇನ್ನುಕೆಲವರು ಬಸ್ ಸಿಕ್ಕಿದರೆ ಸಾಕೆಂದು ಬಸ್ ಹತ್ತುತ್ತಿದ್ದರು. ಈಗಲಾದರು ಸಂಬAದಪಟ್ಟ ಇಲಾಖೆಯೊಂದಿಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಚರ್ಚಿಸಿ ಬಸ್‌ನಿಲ್ದಾಣಕ್ಕೆ ಕೊಳಚೆ ನೀರು ಬರದಂತೆ ತಡೆದು ಸಾರ್ವಜನಿಕರಿಗೆ ಅನುಕೂಲಮಾಡಿಕೊಡುತ್ತಾರೋ ಇಲ್ಲ ಸಾರ್ವಜನಿಕರ ಶಾಪಕ್ಕೆ ಗುರಿಯಾಗುತ್ತಾರೋ ಕಾಯ್ದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ