500 ಹಳೆ ಬಸ್ಸುಗಳನ್ನು ನವೀಕರಿಸಿದ KSRTC…!

ಬೆಂಗಳೂರು:

     ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊಸ ಬಸ್‌ಗಳನ್ನು ಖರೀದಿಸಿ ಸೇವೆಗೆ ನಿಯೋಜಿಸುವ ಯೋಜನೆ ಹೊಂದಿದ್ದರೂ, ಹಳೆಯ ಬಸ್ಸುಗಳಿಗೆ ಮರುಜೀವ ನೀಡಲು ಮುಂದಾಗಿದೆ. ನಿಗಮದ ಹಳೆಯ ಬಸ್‌ಗಳನ್ನು ನವೀಕರಿಸಲು ತನ್ನ ಬಸ್ ಡಿಪೋಗಳಿಗೆ ಜವಾಬ್ದಾರಿ ವಹಿಸಿದೆ. 

     ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಟಿಎನ್‌ಐಇ ಜೊತೆಗೆ ಮಾತನಾಡಿ, 10 ಲಕ್ಷ ಕಿಮೀ ಕ್ರಮಿಸಿದ ಸುಮಾರು 500 ಬಸ್‌ಗಳನ್ನು ಈಗ ನವೀಕರಿಸಲಾಗಿದೆ. ಅವು ಈಗ ಹೊಚ್ಚಹೊಸ ಬಸ್‌ಗಳಾಗಿ ಕಾಣುತ್ತಿವೆ ಎಂದು ಹೇಳಿದ್ದಾರೆ.

    ‘ಹೊಸ ಬಸ್‌ನ ಬೆಲೆ ಸುಮಾರು 40 ಲಕ್ಷ ರೂಪಾಯಿ. ಆದರೆ, ನಮ್ಮ ಸಿಬ್ಬಂದಿ ಕೇವಲ 3 ಲಕ್ಷ ರೂಪಾಯಿಗಳಿಗೆ ಹಳೆಯ ಬಸ್‌ಗಳನ್ನು ನವೀಕರಿಸುತ್ತಿದ್ದಾರೆ. ಬಸ್‌ಗಳಿಗೆ ಹೊಸ ಅವತಾರ ಸಿಕ್ಕಿದೆ. ಕೋವಿಡ್ ಸಮಯದಲ್ಲಿ ನಿಗಮವು ಭಾರಿ ನಷ್ಟವನ್ನು ಅನುಭವಿಸಿತು ಮತ್ತು ಈಗ ಚೇತರಿಸಿಕೊಳ್ಳುತ್ತಿದೆ. ಕೋವಿಡ್ ಪ್ರಭಾವದಿಂದಾಗಿ, ಕೆಎಸ್‌ಆರ್‌ಟಿಸಿಗೆ ಯಾವುದೇ ಹೊಸ ಬಸ್‌ಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಹಳೆಯ ಬಸ್‌ಗಳನ್ನು ನವೀಕರಿಸುವ ಮತ್ತು ಹೊಚ್ಚ ಹೊಸ ಅವತಾರದಲ್ಲಿ ಸೇವೆಗೆ ತರುವ ಆಲೋಚನೆಯು ಬಂದಿತು. ಸುಮಾರು ಒಂದು ವರ್ಷದಿಂದ, ನಾವು ಸುಮಾರು 500 ಹಳೆಯ ಬಸ್‌ಗಳನ್ನು ನವೀಕರಿಸಿದ್ದೇವೆ ಮತ್ತು ಪ್ರತಿ ವಾರ ಇದರ ಸಂಖ್ಯೆ ಜಾಸ್ತಿಯಾಗುತ್ತಿದೆ’ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap