ನಾಯಕನಹಟ್ಟಿ
ಒಳ ಮೀಸಲಾತಿಗಾಗಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಸಮೀಕ್ಷೆಗೆ ಮನೆಗಳ ಹತ್ತಿರ ಬಂದಾಗ ಜಾತಿ ಕಲಾಂನಲ್ಲಿ ಮಾದಿಗ ಎಂದು ಹೆಸರು ಹೇಳಬೇಕು ಎಂದು ದಲಿತ ಸಮುದಾಯ ಮುಖಂಡ ಕುದಾಪುರ ತಿಪ್ಪೇಸ್ವಾಮಿ ಹೇಳಿದ್ದಾರೆ.
ಪಟ್ಟಣದ ಹೊರ ಮಠದ ಯಾತ್ರಿ ನಿವಾಸದಲ್ಲಿ ಮಂಗಳವಾರ ೧೩೪ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ೧೧೮ನೇ ಜಗಜೀವನ್‌ರಾಮ್ ಜಯಂತಿಯ ಕಾರ್ಯಕ್ರಮ ಪೂರ್ವಭಾವಿ ಸಭೆ ನಡೆಯಿತು. ನಂತರ ಮಾತನಾಡಿದ ಅವರು ಸುಮಾರು ೪೦-೫೦ ವರ್ಷಗಳಿಂದ ಮಾದಿಗ ಸಮುದಾಯದವರು ಒಳ ಮೀಸಲಾತಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಒಳ ಮೀಸಲಾತಿಗಾಗಿ ಯಾವುದೇ ಸರ್ಕಾರ ಜನ ಸಂಖ್ಯೆ ಆಧಾರ ಮೇಲೆ ಮೀಸಲಾತಿ ನೀಡಿಲ್ಲ. ಪರಿಶಿಷ್ಟ ಜಾತಿಗಳಲ್ಲಿ ೧೦೧ ಜಾತಿಗಳಿವೆ ಸಮೀಕ್ಷೆ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಒಳಮೀಸಲಾತಿ ಸಮೀಕ್ಷೆಗೆ ನಮ್ಮ ಮಾದಿಗ ಸಮುದಾಯದವರು ಸಹಕಾರ ನೀಡಬೇಕು. ೬ ತಾರೀಖಿನಿಂದ ೨೫ರವರೆಗೆ ಸಮೀಕ್ಷೆ ನಡೆಯುತ್ತಿದೆ ಎಂದು ಅವರು ಮಾತನಾಡಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ಇದೇ ತಿಂಗಳು ೨೮ರಂದು ೧೩೪ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ೧೧೮ನೇ ಜಗಜೀವನ್‌ರಾಮ್ ಜಯಂತಿ ಹಮ್ಮಿಕೊಂಡಿದ್ದು ಹೆಚ್ಚಿನ ಜನ ಸಂಖ್ಯೆ ಅಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಹೋಬಳಿ ಮಟ್ಟದಿಂದ ಎಲ್ಲಾ ಸಮುದಾಯದ ಮುಖಂಡರು, ಪ್ರತಿನಿಧಿಗಳು, ಯುವಕರು, ಮಹಿಳೆಯರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ವಿನಂತಿಸಿದರು. ಮತ್ತು ಕಾರ್ಯಕ್ರಮವನ್ನು ಅಂಬೇಡ್ಕರ್ ವೃತ್ತದಿಂದ ಜಾಥವನ್ನು ಹಮ್ಮಿಕೊಳ್ಳಲಾಗುತ್ತದೆ. ಮಧ್ಯಾಹ್ನ ೧೨ ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಆದ್ದರಿಂದ ಎಲ್ಲಾರು ಬರಬೇಕೆಂದು ಮಾಧ್ಯಮದೊಂದಿಗೆ ಮಾತನಾಡಿದರು.
ಚಳ್ಳಕೆರೆ ಶಾಸಕ ರಘುಮೂರ್ತಿ ತಾಲ್ಲೂಕು ಮಟ್ಟದಲ್ಲಿ ಅದ್ಧೂರಿಯಾಗಿ ತಾಲ್ಲೂಕು ಆಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನ್‌ರಾಮ್ ಎಪ್ರಿಲ್ ೧೪ ರಂದು ಸರ್ಕಾರ ಕಾರ್ಯಕ್ರಮ ಇರುವುದರಿಂದ ಸುಮಾರು ೫ ಸಾವಿರದಿಂದ ೬ ಸಾವಿರ ಜನರನ್ನು ಕರೆಯಿಸಿ ಕಾರ್ಯಕ್ರಮವನ್ನು ಯಶಸ್ವಿಮಾಡಬೇಕು. ಆದರ್ಶ ಚಿಂತನೆಗಳನ್ನು ಜನರಿಗೆ ಮನವರಿಕೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ನೆಲಗೇತನಹಟ್ಟಿ ನಾಗರಾಜ್, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ಮರಿಪಾಲಯ್ಯ, ಯನ್ನಪ್ಪ, ಗೌರಿಪುರ ಬಸವರಾಜ್, ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿಯ ಸದಸ್ಯ ಉಪ್ಪಾರಹಟ್ಟಿ ಮಲ್ಲಿಕಾರ್ಜುನ, ಎನ್.ಮಾರುತಿ, ಹರೀಶ್, ರಮೇಶ್, ನಾಗರಾಜ್ ಮೀಸೆ, ಚೌಡಪ್ಪ, ಗೌರಿಪುರ ಬಸವರಾಜ್, ಶಂಕರಸ್ವಾಮಿ, ಬಸಣ್ಣ, ತೊರೆಕೋಲಮ್ಮನಹಳ್ಳಿ ಮಧು, ಹೊನ್ನೂರಪ್ಪ, ನಾಗರಾಜ್, ನೆಲಗೇತನಹಟ್ಟಿ ಓಬಳೇಶ್ ಪಿ.ವಿ., ಮಾರುತಿ, ಮಲ್ಲಿಕಾರ್ಜುನ, ಅಬ್ಬೇನಹಳ್ಳಿ ಮಲ್ಲಿಕಾರ್ಜುನ, ನಾಯಕನಹಟ್ಟಿ ಬಸಣ್ಣ ಹಾಗೂ ದಲಿತ ಸಮುದಾಯದ ಮುಖಂಡರು ಇದ್ದರು.
