ರಾಯ್‌ಪುರ:
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳಿಗೆ ತಾವು ಮತ್ತಿನಲ್ಲಿ ಏನು ಮಾಡುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಕುಡಿದು ಮಾಡಿದ ಎಡವಟ್ಟು ತನ್ನ ಇದೀಗ ಅಂತಹದೊಂದು ಘಟನೆ ರಾಯ್‌ಪುರದ ವಿಐಪಿ ರಸ್ತೆಯಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ರಷ್ಯಾದ ಮಹಿಳೆಯೊಬ್ಬಳು ಕಾರು ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನರು ಕಾರನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ ಮಹಿಳೆ ದೊಡ್ಡ ಗಲಾಟೆಯನ್ನೇ ಮಾಡಿದ್ದಾಳೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಪೊಲೀಸರು ಮಹಿಳೆ ಮತ್ತು ಆಕೆಯ ಜೊತೆಗಿದ್ದ ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.ಕಾರಿನ ಮೇಲೆ ‘ಭಾರತ ಸರ್ಕಾರ’ ಎಂದು ಬರೆಯಲಾಗಿತ್ತು. ಪೊಲೀಸ್ ಮಾಹಿತಿಯ ಪ್ರಕಾರ, ಕಾರು ಡಿಆರ್‌ಐ ಪಬ್ಲಿಕ್ ಪ್ರಾಸಿಕ್ಯೂಟರ್ ಭವೇಶ್ ಆಚಾರ್ಯ ಅವರಿಗೆ ಸೇರಿದೆ ಎನ್ನಲಾಗಿದೆ. ಆದರೆ ಘಟನೆಯ ಸಮಯದಲ್ಲಿ, ಕಾರನ್ನು ಆತನ ಸ್ನೇಹಿತೆ ನೊಡಿರಾ ಓಡಿಸಿದ್ದಾಳೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಸರ್ಕಾರಿ ವಕೀಲ ಮತ್ತು ವಿದೇಶಿ ಮಹಿಳೆ ಅತಿಯಾಗಿ ಕುಡಿದಿದ್ದಳಂತೆ. ಇಬ್ಬರೂ ಪಬ್‍ನಿಂದ ಹೊರಬಂದು ಸಿಗರೇಟುಗಳನ್ನು ಖರೀದಿಸಲು ಹೋಗುವಾಗ ನೋಡಿರಾ ಕಾರನ್ನು ಅತಿ ವೇಗವಾಗಿ ಓಡಿಸಿ ಈ ಅಪಘಾತಕ್ಕೆ ಕಾರಣಳಾಗಿದ್ದಾಳಂತೆ. ವರದಿಗಳ ಪ್ರಕಾರ, ರಷ್ಯಾದ ಮಹಿಳೆ ವಕೀಲನ ತೊಡೆಯ ಮೇಲೆ ಕುಳಿತು ಕಾರನ್ನು ಓಡಿಸುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.
ಅಪಘಾತದಲ್ಲಿ ನೀಲಕಮಲ್ ಸಾಹು, ಲಲಿತ್ ಚಂದೇಲ್ ಮತ್ತು ಅರುಣ್ ವಿಶ್ವಕರ್ಮ ಎಂಬ ಮೂವರು ಯುವಕರು ಗಂಭಿರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಘಟನೆಯ ನಂತರ, ಹತ್ತಿರದಲ್ಲಿದ್ದ ಜನರು ಕಾರನ್ನು ನಿಲ್ಲಿಸಿದ್ದಕ್ಕೆ ವಿದೇಶಿ ಮಹಿಳೆ ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದಾಳಂತೆ. ಘಟನಾ ಸ್ಥಳದಲ್ಲಿ ತನ್ನ ಫೋನ್ ಅನ್ನು ಅಲ್ಲಿದ್ದವರು ಯಾರೋ ಕದ್ದಿದ್ದಾರೆ ಎಂದು ಆರೋಪಿಸಿದ್ದಾಳೆ.
ಪ್ರವಾಸಿ ವೀಸಾದ ಮೂಲಕ ರಾಯ್‌ಪುರಕ್ಕೆ ಬಂದಿದ್ದಳಂತೆ. ವೈದ್ಯಕೀಯ ವರದಿಯ ನಂತರ, ಡ್ರಿಂಕ್ ಅಂಡ್ ಡ್ರೈವ್‍ಗೆ ಸಂಬಂಧಿಸಿದ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಮತ್ತು ಅವರ ಕಾರನ್ನು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ.
