ಬೆಂಗಳೂರು:
ವಿದೇಶದಿಂದ ಭಾರಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ತರುತ್ತಿದ್ದ ಇಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಮೂಲದ ವ್ಯಕ್ತಿಯೊಬ್ಬ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ತರುತ್ತಿದ್ದ 1.19 ಕೋಟಿ ರೂ. ಮೌಲ್ಯದ 3.678 ಕೆ.ಜಿ. ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಬೆಂಚ್ ವೈಸ್ ಎಂಬ ಕಬ್ಬಿಣದ ಸಾಧನದಲ್ಲಿ ಚಿನ್ನ ಅಡಗಿಸಿಟ್ಟಿದ್ದನು. ಚಿನ್ನದ ಸುತ್ತಲೂ 7.6 ಕೆಜಿ ಕಬ್ಬಿಣದ ಹಾಕಿ ಪ್ಯಾಕ್ ಮಾಡಿದ್ದನು. ಅನುಮಾನ ಬಂದು ನಿಲ್ದಾಣದ ಕಸ್ಟಮ್ಸ್ ಮತ್ತು ಏರ್ ಇಂಟಲಿಜೆನ್ಸ್ ತಂಡ ಪ್ರಶ್ನಿಸಿದಾಗ ಆರೋಪಿ ಬಲೆಗೆ ಬಿದಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ