ಕುಂಭಮೇಳ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ….!

ಬೆಂಗಳೂರು

   ಕುಂಭಮೇಳ ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಬಂಧಿತ ಆರೋಪಿ. ಪಾಂಚಜನ್ಯ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್​ನಿಂದ ಅಯೋಧ್ಯೆ, ಕಾಶಿ, ಪ್ರಯಾಗ್​ರಾಜ್ , ವಾರಣಾಸಿ ಸೇರಿಂದತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಫೇಸ್​ಬುಕ್​ನಲ್ಲಿ ಜಾಹೀರಾತು ನೀಡಿದ್ದಾನೆ.

   ಕೆಲವರಿಗೆ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡಿದ್ದಾನೆ. ರದ್ದು ಮಾಡಿದ ಬಳಿಕ ವಾಪಸ್​ ಆದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ. ಇನ್ನು ಕೆಲವರಿಗೆ, ಪ್ರಯಾಗ್ ರಾಜ್​ಗೆ ಯಾತ್ರಿಕರು ತಲುಪಿದ ನಂತರ ಅವರ ರಿಟರ್ನ್ ಟಿಕೆಟ್ ರದ್ದು ಮಾಡಿದ್ದಾನೆ. ವಾಪಸ್​ ಆದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಟಿಕೆಟ್ ರದ್ದಾದ ಬಳಿಕ ರಾಘವೇಂದ್ರ ರಾವ್​ ಮೊಬೈಲ್ ಸ್ವಿಚ್​ ಆಫ್ ಮಾಡಿದ್ದಾನೆ. ಈ ಬಗ್ಗೆ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ 20 ಕ್ಕೂ ಹೆಚ್ಚು ಜನರು ದೂರು‌ ನೀಡಿದ್ದಾರೆ. 
 
   ಪ್ರಕರಣ ದಾಖಲಿಸಿಕೊಂಡು ಪೊಲೀಸರು ರಾಘವೇಂದ್ರ ರಾವ್​ನನ್ನು ಬಂಧಿಸಿದ್ದಾರೆ. ವಂಚಿಸಿ ಪಡೆದಿದ್ದ ಹಣದಲ್ಲಿ ರಾಘವೇಂದ್ರ ರಾವ್ ಬೆಟ್ಟಿಂಗ್ ಆಡಿ ಸೋತಿದ್ದಾನೆ. ರಾಂಘವೇಂದ್ರ ರಾವ್​ ಬೆಟ್ಟಿಂಗ್ ಆ್ಯಪ್​ನಲ್ಲಿ ಹಣ ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಗೋವಿಂದರಾಜನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Recent Articles

spot_img

Related Stories

Share via
Copy link