ಎಡನೀರು
ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಶ್ರೀಪಾದಂಗಳವರ ಪಂಚಮ ವಾರ್ಷಿಕ ಆರಾಧನಾ ಮಹೋತ್ಸವವು ಸೆಪ್ಟೆಂಬರ್ 11, 2025, ಗುರುವಾರದಂದು ವೈದಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ. ಪೂಜ್ಯಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಆರಾಧನಾ ಸಮಾರಂಭದಂದು ಗಣ್ಯರ ಸಮ್ಮುಖದಲ್ಲಿ “ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಗೌರವ”ವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾಮಾಜಿಕ ಧುರೀಣರು ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಕೃಷ್ಣ ಬಾಬಾ ಪೈ ಅವರಿಗೆ ಪ್ರದಾನ ಮಾಡಲಾಗುವುದು. ಕೃಷ್ಣ ಬಾಬಾ ಪೈ ಅವರು ಸಲ್ಲಿಸುತ್ತ ಬಂದಿರುವ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಲಕ್ಷಿಸಿ, ಜೊತೆಗೆ ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಶ್ರೀಪಾದಂಗಳವರೊಂದಿಗೆ ಅವರೊಂದಿಗಿನ ಆತ್ಮೀಯ ಮತ್ತು ಗೌರವಪೂರ್ವಕ ಒಡನಾಟದಿಂದ ಈ ಗೌರವ ನೀಡಲಾಗಿದೆ ಎಂದು ತಿಳಿದುಬಂದಿದೆ.








