ಕುಣಿಗಲ್ : ಮತ ಎಣಿಕೆ, ಜನಜಾತ್ರೆಯಿಂದ ಗಿಜಿಗುಟ್ಟಿದ ಪಟ್ಟಣ

 ಕುಣಿಗಲ್ :

      ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿ ನಿಂತು ಸೆಣಸಾಡಿದವರ ುಬುಧವಾರ ಫಲಿತಾಂಶಕ್ಕಾಗಿ ಅವರ ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆಪಟ್ಟಣಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪಟ್ಟಣ ಜಾತ್ರೆಯಂತೆ ಜನಸ್ತೋಮದಿಂದ ಗಿಜುಗುಡುವಂತಾಗಿತ್ತು.

      ಮತಎಣಿಕೆ ಕಾರ್ಯ ನಡೆಯುವ ಕುಣಿಗಲ್ ಮಹಾತ್ಮಗಾಂಧಿ ಕಾಲೇಜು ಬಳಿ ಬೆಳಿಗ್ಗೆ ಆರು ಗಂಟೆಗೆ ಚಳಿಯನ್ನು ಲೆಕ್ಕಿಸದೆ ಆಗಮಿಸಿದ ಅಭ್ಯರ್ಥಿಗಳಪರ ಅಭಿಮಾನಿಗಳು, ಸ್ನೇಹಿತರು, ಸಂಬಂಧಿಗಳು, ಅಯಾಯ ಪಕ್ಷದ ಕಾರ್ಯಕರ್ತರು ಜಾತಕಪಕ್ಷಿಯಂತೆ ಫಲಿತಾಂಶಕ್ಕಾಗಿ ಕಾದು ಕೂತವರು ಗೆಲುವು ಸಾಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಕೇಕೆ ಹಾಕುತ್ತ ಹಾರತುರಾಯಿ ಹಾಕಿ ಸಂಭ್ರಮಾಚರಣೆ ಮಾಡಲು ಗೆದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರೆ ಸೋತವರು ಯಾಪೆÇ್ಮೀರೆ ಹಾಕಿಕೊಂಡು ಸಪ್ಪಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

     ಮುಂಜಾಗ್ರತ ಕ್ರಮವಾಗಿ ಪಟ್ಟಣದಾದ್ಯಂತ ಡಿವೈಎಸ್ಪಿ ಜಗದೀಶ್ ಹಾಗೂ ಸಿಪಿಐ ಗುರುಪ್ರಸಾದ ನೇತೃತ್ವದಲ್ಲಿ ಬಿಗಿಯಾದ ಬಂದೂಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಐದುನೂರು ಮೀಟರ್ ಅಂತರದಲ್ಲಿ ಯಾವುದೇ ಅಂಗಡಿ ಹೋಟೆಲುಗಳು ಜೆರಾಕ್ಸ್ ಅಂಗಡಿಗಳು ಸೇರಿದಂತೆ ಯಾವುದೇ ಅಂಗಡಿ-ಮುಂಗಟ್ಟುಗಳು ತೆರೆಯದಂತೆ ನಿರ್ಬಂಧ ವಿಧಿಸಲಾಗಿತ್ತು.

        ಬೆಳಿಗ್ಗೆ ಎಂಟು ಗಂಟೆಗೆ ಬಿಗಿಯಾದ ಭದ್ರತೆಯೊಂದಿಗೆ ಮತ ಎಣಿಕಾ ಕೇಂದ್ರಕ್ಕೆ ಸಿಬ್ಬಂದಿಗಳೊಂದಿಗೆ ಮತಪೆಟ್ಟಿಗೆಯನ್ನು ಕಳಿಸಲಾಯಿತ್ತು. ಎಣಿಕೆ ಕಾರ್ಯ ಪ್ರಾರಂಭದಲ್ಲಿ ಮಂದಗತಿಯಲ್ಲಿ ಜರುಗಿ ನಂತರ ಬಿರುಸಿನಿಂದ ನಡೆದರೂ ಸಹ ಸಂಪೂರ್ಣವಾಗಿ 36 ಪಂಚಾಯ್ತಿಯ ನೂತನ ಸದಸ್ಯರ ಗೆಲುವನ್ನು ಪ್ರಕಟಿಸಲು ರಾತ್ರಿ ಆಗುತ್ತದೆಂದು ಅರ್ಧ ಜನ ವಾಪಸ್ ಆದರು.

     ಗೆಲುವಿನ ಬಗ್ಗೆ ತಿಳಿಯಲು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿ ಮಾಧ್ಯಮದವರ ಮೊರೆಹೊಗುತ್ತಿದ್ದು ಕಂಡುಬಂದಿತು, ಆದರೆ ಮಾಧ್ಯಮದವರಿಗು ಸರಿಯಾದ ಮಾಹಿತಿ ದೊರೆಯದೆಹೋಯಿತು. ಸಂಜೆ 7ವರೆಗೂ ಆದರೂ ಸಂಪೂರ್ಣ ಫಲಿತಾಂಶದ ಮಾಹಿತಿ ಸಿಗದಂತಾಗಿ 467 ಸ್ಥಾದಲ್ಲಿ 250 ಸ್ಥಾನಗಳ ಫಲಿತಾಂಶ ಹೊರಬಿದ್ದಿದ್ದು ಉಳಿದ ಫಲಿತಾಂಶ ರಾತ್ರಿ 10 ಗಂಟೆಗೆ ಸಿಗುವ ಸೂಚನೆಯನ್ನು ಅಲ್ಲಿನ ಅಧಿಕಾರಿ ವರ್ಗದವರು ತಿಳಿಸಿದರು.

      ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗಿತ್ತು. ವಿಜೇತರಾದ ಅಭ್ಯರ್ಥಿಗಳು ಪಟ್ಟಣದಲ್ಲಿ ಜಯ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಕೆಲವು ಕಡೆ ಗೆಲುವಿನ ಅಭ್ಯರ್ಥಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಪಟ್ಟಣದಾದ್ಯಂತ 1 4 4 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಚುನಾವಣಾ ಅಧಿಕಾರಿಗಳು ಆದ ತಹಸಿಲ್ದಾರ್ ವಿಶ್ವನಾಥ್ ಅಲ್ಲಲ್ಲಿ ಲೋಪ ಕಂಡೊಡನೆ ಎಚ್ಚರಿಕೆ ನೀಡುವ ಮೂಲಕ ಸರಿಪಡಿಸುತ್ತಿದ್ದರು.

  ಎಣಿಕೆ ತಡವಾಗಿ ಆರಂಭ:

      ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗುವುದು ಸ್ವಲ್ಪ ತಡವಾಗಿ ಪ್ರಾರಂಭವಾಗಿದ್ದು 76 ಟೇಬಲ್ಲುಗಳ 18 ರೂಮುಗಳಲ್ಲಿ ಅವಕಾಶಕಲ್ಪಿಸಲಾಗಿತ್ತು ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯವನ್ನು ಕೈಗೊಂಡು ಎಣಿಕೆ ಕಾರ್ಯ 3 ಸುತ್ತಿನಲ್ಲಿ 467 ಅಭ್ಯರ್ಥಿಗಳು ಆಯ್ಕೆಗೊಳ್ಳಬೇಕಾಗಿದ್ದು ಸಂಪೂರ್ಣ ವಿಜೇತರಾದವರ ಪಟ್ಟಿ ಮಧ್ಯರಾತ್ರಿಗೆ ದೊರೆಯುವ ಸಾಧ್ಯತೆ ಇದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ, ಉಪವಿಭಾಗಾಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿ ತೆರಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap