ಕಾಡಿನಿಂದ ಹೊರಬಿದ್ದ ಎರಡು ಆನೆಗಳು : ಗ್ರಾಮಸ್ಥರಿಗೆ ಎಚ್ಚರಿಕೆ ಸೂಚನೆ

ಕುಣಿಗಲ್ : 

       ಕುಣಿಗಲ್ ತಾಲ್ಲೂಕು ಹಾಗೂ ನಾಗಮಂಗಲ ಗಡಿಯ ಭಾಗದಲ್ಲಿ ಎರಡು ಕಾಡಾನೆಗಳು ಕಾಡು ಬಿಟ್ಟು ನಾಡಿನಕಡೆಗೆ ಆಗಮಿಸಿರುವ ಸುದ್ದಿಯಿಂದ ಆ ಭಾಗದ ಜನ ಭಯಬೀತರಾಗಿದ್ದಾರೆ.

      ಎರಡು ದಿನಗಳ ಹಿಂದೆಯೇ ತಾಲ್ಲೂಕಿನ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಾನೆಗಳ ಆಗಮನದ ಸುದ್ದಿತಿಳಿಯುತ್ತಿದ್ದಂತೆ ಆಭಾಗದಲ್ಲಿ ಬರುವ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡುವ ಮೂಲಕ ಕಾಡಾನೆಗಳ ಜಾಡು ಹಿಡಿದು ಬೆನ್ನತ್ತಿದ್ದಾರೆ. ಮಾರ್ಕೋನಹಳ್ಳಿ, ಯಡೆಯೂರು, ಅಮೃತೂರು, ಎಡವಾಣಿ, ನವಿಲೆ, ಕಂಪ್ಲಾಪುರ, ಹುಲಿಯೂರುದುರ್ಗ, ಕೆಂಚನಹಳ್ಳಿ, ತಾವರೇಕರೆ, ಬೆಸ್ತರಪಾಳ್ಯ ಈ ಮಾರ್ಗವಾಗಿ ಕೆಲವರ್ಷದ ಹಿಂದೆ ಸಂಚರಿಸಿ ಬೆಳೆ ಹಾನಿ ಮಾನವಹಾನಿ ಮಾಡಿದ್ದವು. ಆದ್ದರಿಂದ ಈಗಲೂ ಸಹ ಅಂತಹ ಸನ್ನಿವೇಶ ಮರುಕಳಿಸಬಹುದಾಗಿದ್ದರಿಂದ ಈ ಪ್ರದೇಶದ ಜನರು ಹಗಲು ರಾತ್ರಿ ಬಹಳ ಎಚ್ಚರಿಕೆ ವಹಿಸಬೇಕು ಹಾಗೂ ಒಂಟಿ ಸಂಚರಿಸಬಾರದು ಎಂದು ಇಲ್ಲಿನ ಅರಣ್ಯಾಧಿಕಾರಿಗಳಾದ ಮಂಜುನಾಥ್, ಶಿವಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಆನೆಗಳು ಕಂಡು ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link