ಮಧುಗಿರಿ : ಅಶ್ವಮೇಧ ಕ್ಲಾಸಿಕ್‌ ನೂತನ ಬಸ್‌ ಗಳಿಗೆ ಚಾಲನೆ ….!

ಮಧುಗಿರಿ :

   ರಾಜ್ಯದಲ್ಲಿ ನೂತನವಾಗಿ ಅಶ್ವಮೇಧ ಕ್ಲಾಸಿಕ್ 100 ಬಸ್ ಗಳ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು ಅದರಂತೆ ಮಧುಗಿರಿ ಉಪ ವಿಭಾಗಕ್ಕೆ ಐದು ಬಸ್ ಗಳನ್ನು ನೀಡಲಾಗಿದ್ದು ಇದರಿಂದ ನಮ್ಮ ಭಾಗದ ಜನತೆಗೆ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಗಮವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. 

 ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನೂತನ ಭಾರತ್ ಸ್ಟೇಜ್ 6ರ ಐದು ಅಶ್ವಮೇಧ ಕ್ಲಾಸಿಕ್ ಬಸ್ ಗಳಿಗೆ ಸ್ವಯಂ ಬಸ್ ಚಾಲನೆ ನೀಡಿ ಮಾತನಾಡಿದ ಅವರು ,

   ಗಡಿ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಶಾಲಾ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಈಗಾಗಲೇ ಕೆ.ಸಿ ರಪ್ಪ , ಹೊಸಕೋಟೆ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು ಪ್ರಸ್ತುತ ಕಡೆಗತೂರು ಪರ್ತಿಹಳ್ಳಿ ಮಲ್ಲನಾಯಕನಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳಿಗೆ ಸರ್ವೇ ನಡೆಸಲು ಸೂಚನೆ ನೀಡಲಾಗಿದೆ ಎಂದರು

   ಮುಂದಿನ ದಿನಗಳಲ್ಲಿ ಗಡಿ ಭಾಗ ಇತರೆ ಪ್ರದೇಶ ಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ನಮ್ಮ ಉಪವಿಭಾಗಕ್ಕೆ 5 ನೂತನ ಬಸ್ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಸಾರಿಗೆ ಸಚಿವರದ ರಾಮಲಿಂಗ ರೆಡ್ಡಿ ರವರಿಗೆ ಇದೇ ಸಂಧರ್ಭದಲ್ಲಿ ಅಭಿನಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap