ಜಮ್ಮು ಕಾಶ್ಮೀರ:
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಲಡಾಖ್‍ನಲ್ಲಿ ಸೈನಿಕರೊಂದಿಗೆ ಆಚರಿಸಿಕೊಂಡಿದ್ದಾರೆ.
ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ಕರ್ನಲ್ ಹುದ್ದೆ ಪಡೆದಿರುವ ಧೋನಿ ಬುಧವಾರವೇ ಲಡಾಖ್ ತಲುಪಿದ್ದರು. ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಯೋಧರಿಂದ ಉತ್ತಮ ಸ್ವಾಗತ ದೊರಕಿತ್ತು.
#MSDhoni celebrating in independence day in army uniform @msdhoni pic.twitter.com/V0OhaUFfmC
— simbu Rakesh (@STRRakesh1) August 15, 2019
ಸ್ವಾತಂತ್ರ್ಯ ಸಂಭ್ರಮದ ದಿನ ಧೋನಿ ಸೈನಿಕರೊಂದಿಗೆ ಸಮಯ ಕಳೆಯುತ್ತಿದ್ದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
38 ವರ್ಷದ ಧೋನಿ ಬಿಸಿಸಿಐನಿಂದ ಎರಡು ತಿಂಗಳ ರಜೆ ಪಡೆದು ಜುಲೈ 30ರಿಂದ ಜಮ್ಮು ಕಾಶ್ಮೀರದಲ್ಲಿ 106 ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.