ನೂತನ ತಹಶೀಲ್ದಾರ್‍ಗೆ ಸಮಸ್ಯೆ ಹೇಳಿಕೊಂಡ ನಾಗರೀಕರು

 ಕುಣಿಗಲ್ :

      ಪಟ್ಟಣದ ಕೆರೆಯ ಹಳೆಯ ನೀರನ್ನು ಮೊದಲು ಹೊರ ಹಾಕಿ ಹೊಸ ನೀರು ತುಂಬಿಸಿ ಜನರಿಗೆ ಕುಡಿಯಲು ಅನುಕೂಲ ಮಾಡಿಕೊಡಿ ಹಾಗೂ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಎಂದು ಹಿರಿಯ ಮುಖಂಡ ಬಿ.ಎಂ.ಹುಚ್ಚೇಗೌಡ ಅವರು ತಹಶೀಲ್ದಾರ್ ಮಹಾಬಲೇಶ್ವರ್ ಅವರನ್ನು ಒತ್ತಾಯಿಸಿದರು.

      ತಾಲ್ಲೂಕಿಗೆ ನೂತನವಾಗಿ ಬಂದಿರುವ ತಹಸೀಲ್ದಾರ್ ಮಹಾಬಲೇಶ್ವರ್ ಅವರಿಗೆ ಹಿರಿಯ ಮುಖಂಡರಾದ ಬಿ.ಎಂ.ಹುಚ್ಚೇಗೌಡ ಮತ್ತು ದಲಿತ ಮುಖಂಡರಾದ ಶಿವಶಂಕರ್, ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಶಂಕರ್, ಮುಖಂಡರಾದ ಜಯರಾಮ್, ಕಸಾಪ ಮಾಜಿ ಅಧ್ಯಕ್ಷ ದಿನೇಶ್‍ಕುಮಾರ್ ಸೇರಿದಂತೆ ಹಲವು ಮುಖಂಡರುಗಳು ಭೇಟಿಯಾಗಿ ಸನ್ಮಾನಿಸಿದ ಸಂದರ್ಭದಲ್ಲಿ ಈ ಕುರಿತು ಒತ್ತಾಯಿಸಿದ್ದಾರೆ.
ಆಮೆಗತಿಯ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ, ತಾಲ್ಲೂಕಿನ ಸಾಮಾನ್ಯ ಜನರಿಂದ ಮೆಚ್ಚುಗೆ ಗಳಿಸಿ ಇಡೀ ರಾಜ್ಯದಲ್ಲಿಯೆ ತಹಸೀಲ್ದಾರ್ ಅವರ ಸೇವೆ ಶ್ಲಾಘನೀಯವಾಗಿ ಸ್ಮರಿಸುವಂತಾಗಬೇಕೆಂದು ನೂತನ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.

ಹಿರಿಯರ ಮಾತುಗಳನ್ನು ಆಲಿಸಿದ ತಹಸೀಲ್ದಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಕೆರೆ ಒತ್ತುವರಿ ತೆರವುಗೊಳಿಸಲು ಸರ್ಕಾರದಿಂದ ನಿರ್ಧಿಷ್ಟವಾದ ಆದೇಶವಿದೆ. ಒತ್ತುವರಿದಾರರು ಎಷ್ಟೇ ಬಲಿಷ್ಠವಾಗಿದ್ದರು ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ದಿನೇಶ್‍ಕುಮಾರ್ ಮಾತನಾಡಿ ರಾಘವೇಂದ್ರಸ್ವಾಮಿ ಮಠದ ಪಕ್ಕದಲ್ಲಿರುವ ಜಾಗವನ್ನು ರಂಗಭೂಮಿ ಕಲಾಮಂದಿರಕ್ಕೆ ಮಂಜೂರು ಮಾಡಿಕೊಡಿ ಇದರಿಂದ ಕಲಾವಿದರಿಗೆ ಹಾಗೂ ನಾಗರೀಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ದಲಿತ ಮುಖಂಡ ಶಿವಶಂಕರ್ ಮಾತನಾಡಿ ಸರ್ಕಾರದಿಂದ ಬಾಬು ಜಗಜೀವನ್ ರಾಮ್ ಭವನಕ್ಕೆ ಮಂಜೂರಾಗಿರುವ ಎಂಟು ಗುಂಟೆ ಜಾಗ ಯಾವುದಕ್ಕೂ ಸಾಕಾಗುವುದಿಲ್ಲ, ಈ ಬಗ್ಗೆ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಿ ಕನಿಷ್ಠ 20 ಗುಂಟೆ ಜಾಗವನ್ನು ಮಂಜೂರು ಮಾಡಿ ಕೊಡಬೇಕೆಂದು ಮನವಿ ಮಾಡಿದರು.

     ಎಲ್ಲಾ ಸಮಸ್ಯೆಗಳನ್ನು ಆಲಿಸಿದ ತಹಸೀಲ್ದಾರ್ ಅವರು ಹಂತ ಹಂತವಾಗಿ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲಕರವಾಗುವಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಉತ್ತಮ ಆಡಳಿತಕ್ಕೆ ಒತ್ತು ನೀಡಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link