ಗ್ರಾಪಂ ಚುನಾವಣೆ : ಕಾನೂನು ಸುವ್ಯವಸ್ಥೆ ಕಾಪಾಡಲು ಡಾಬಾ ಮಾಲೀಕರಿಗೆ ಸೂಚನೆ

ಕುಣಿಗಲ್ : 

      ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಾಲೂಕಿನ ಡಾಬಾಗಳು, ಹೈವೇ ಹೋಟೆಲ್‍ಗಳು ರಾತ್ರಿ ಎಂಟು ಗಂಟೆಗೆ ಮುಚ್ಚಬೇಕೆಂದು ಡಿವೈಎಸ್ಪಿ ಜಗದೀಶ್ ತಿಳಿಸಿದರು.

      ಕುಣಿಗಲ್ ಹುಲಿಯೂರುದುರ್ಗ ಅಮೃತೂರು ಭಾಗದ ಬಾರ್ ಡಾಬಾ ಹಾಗೂ ಹೈವೇ ಹೋಟೆಲ್ ಮಾಲೀಕರು ಸಭೆ ನಡೆಸಿ ಬರುವ ಗ್ರಾಮ ಪಂಚಾಯಿತಿ ಚುನಾವಣೆ ಡಿಸೆಂಬರ್ 22 ರಂದು ಜರುಗುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಬಾರು ಡಾಬಾ ಹಾಗೂ ಹೈವೇ ಹೋಟೆಲ್ ಮಾಲೀಕರುಗಳು ರಾತ್ರಿ ಎಂಟರ ನಂತರ ಮುಚ್ಚಬೇಕೆಂದು ತಿಳಿಸಿ, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

      ಬಾರ್ ಮಾಲೀಕರು ಹಳ್ಳಿಗಳಿಗೆ ಕಾನೂನುಬಾಹಿರವಾಗಿ ಮದ್ಯ ಸರಬರಾಜು ಮಾಡಬಾರದಾಗಿ ಸೂಚಿಸಿ, ಒಂದುವೇಳೆ ಗಡಿ ಮಧ್ಯದಲ್ಲಿ ಸಿಕ್ಕಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

      ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಗುರುಪ್ರಸಾದ್ ಪಿಎಸ್‍ಐಗಳಾದ ವಿಕಾಸ್ ಗೌಡ, ಮಂಜು, ವೆಂಕಟೇಶ್ ಅಪರಾಧ ವಿಭಾಗದ ಶೆಟ್ಟಳಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ