ಮಳೆಯಿಲ್ಲದೆ ಓಣಗುತ್ತಿದೆ ರೈತರ ಬದುಕು…..!

ಕೊರಟಗೆರೆ

     ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ರಾಗಿ ಬೆಳೆಗಾರರು ತೀವ್ರ ಕಂಗಾಲಾಗಿದ್ದಾರೆ ಬೆಳೆ ಒಣಗುತ್ತಿದ್ದು, ಪರಿಹಾರಕ್ಕೆ ಅಂಗಲಾಚುವ ಸ್ಥಿತಿಗೆ ತಲುಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಮಹತ್ವ ಹೊಂದಿದ ರಾಗಿ ಬೆಳೆಗೆ ಈ ವರ್ಷದ ಅನಾವೃಷ್ಠಿಯಿಂದ ತೀವ್ರ ನಷ್ಟ   ಸಾಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ಮಳೆ ಬಾರದ ಹಿನ್ನೆಲೆ ರಾಗಿ ಬೆಳೆಯಲ್ಲಿ ಕುಸಿತ ಕಂಡು ಉತ್ತಮ ಬೆಲೆ ಸಿಕ್ಕಂತಹ ಸಂದರ್ಭದಲ್ಲಿ ರೈತನಿಗೆ ರಾಗಿ ಬೆಳೆ ಕೈಕೊಟ್ಟು ನಷ್ಟ ಅನುಭವಿಸುವಂತಾಗಿರುವುದು ವಿಪರ್ಯಾಸ.

    ಅತ್ಯಂತ ಜನಪ್ರಿಯವಾದ ಆಹಾರ ಪ್ರಕಾರವಾದ ರಾಗಿ ಬೆಳೆಗೆ ಬೆಲೆ ದುಬಾರಿಯಾಗಿ ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಎಕರೆಗೆ 5/6 ಕ್ವಿಂಟಾಲ್‌ನಷ್ಟು ರಾಗಿ ಬೆಳೆಯಬೇಕಾದ ರೈತ ಕೇವಲ 1.5 ಕ್ವಿಂಟಾಲ್ ರಾಗಿ ಬೆಳೆದು ಕಂಗಲಾಗಿದ್ದಾನೆ.

    ತಾಲೂಕಿನ 24 ಗ್ರಾ.ಪಂಗಳಲ್ಲಿ 4 ಹೋಬಳಿಗಳಲ್ಲಿ 31.995 ಎಕ್ಟೇರ್‌ನಷ್ಟು ರಾಗಿ ಬೆಳೆ ಪ್ರದೇಶವಿದೆ. ಕಸಬಾ ಹೋಬಳಿ ಶೇ.69% ರಷ್ಟು ಬಿತ್ತನೆಯನ್ನು ರೈತರು ಮಾಡಿದ್ದರು. ಹೊಳವನಹಳ್ಳಿ ಹೋಬಳಿಯಲ್ಲಿ 58%, ಕೋಳಾಲ ಹೋಬಳಿಯಲ್ಲಿ 6 ರಿಂದ 6.5 ಎಕ್ಟೇರ್, ಸಿಎನ್ ದುರ್ಗಾ ಹೋಬಳಿ ಪ್ರದೇಶದಲ್ಲಿ 3530 ರಷ್ಟು ಎಕ್ಟೇರ್ ಸೇರಿ ಒಟ್ಟ ತಾಲೂಕಿನಲ್ಲಿ 22.985 ಎಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾ ಮುಂಗಾರು ಹಂಗಾಮಿನಲ್ಲಿ ಶೇ.71.84ರಷ್ಟು ಮಾತ್ರ ಬಿತ್ತನೆಯಾಗಿದ್ದು ಶೇ.80 ರಿಂದ 90 ರಷ್ಟು ರಾಗಿ ಬೆಳೆಯ ರೈತನು ನಷ್ಟವನ್ನು ಅನುಭವಿಸಿ ನಷ್ಟ ಕಂಡ ರೈತನಿಗೆ ಪರಿಹಾರ ನೀಡುವಂತೆ ರೈತ ಸಂಘವು ಮನವಿ ಮಾಡಿದೆ

     ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಬೆಳೆಯಲ್ಲೇ ಹಾನಿಗೆ ಒಳಗಾಯಿತು, ಈ ವರ್ಷವು ಸಹ ಕೊಟ್ಟಿದ್ದರಿಂದ ರಾಗಿ ಬೆಳೆಯು ಎಕರೆಗೆ 1.5 ಕ್ವಿಂಟಾಲ್  ಮಾತ್ರ ರಾಗಿಯಾಗಿದೆ, ಪ್ರತಿ ವರ್ಷ 5ರಿಂದ 6 ಕ್ವಿಂಟಾಲ್
ರಾಗಿಯಾಗುತ್ತಿತ್ತು, ಸಂಕಷ್ಟಕ್ಕೆ ಸಿಲುಕಿದ ನಮ್ಮಂತಹ ರೈತ ಪರಿಹಾರ ನೀಡಿ ರೈತರ ಹಿತವನ್ನು ಕಾಯಬೇಕಿದೆ ಎಂದು ಮಲ್ಲೇಶಪುರದ ರೈತ ಬಸವರಾಜು ಒತ್ತಾಯಿಸಿದ್ದಾರೆ.

    ರಾಜ್ಯ ಸೇರಿದಂತೆ ತಾಲೂಕಿನಲ್ಲಿ ವರಣನ ಆರ್ಭಟಕ್ಕೆ  ಬಂದಿದ್ದಂತಹ ಬೆಳೆ ಮಳೆಯಿಂದ ಹಾನಿಯಾಗಿ ರೈತನು ನಷ್ಟಕ್ಕೆ ಸಿಲುಕಿದ್ದನು, ಆದರೆ ಈ ವರ್ಷ ಮಳೆಯು ಇಲ್ಲಾ ಇತ್ತಾ ಬೆಳೆಯು ಇಲ್ಲಾವಂತಾಗಿದೆ, ಮಾರುಕಟ್ಟೆಯಲ್ಲಿ ಹಿಂದಿನ ವರ್ಷ 3578 ರೂ ಇತ್ತು ಈ ಬಾರಿ ರಾಗಿಗೆ ಬೆಲೆ ಹೆಚ್ಚಿದೆ ಕ್ವಿಂಟಾಲ್‌ಗೆ
3846ರೂ ಬೆಂಬಲ ಬೆಲೆ ಇದೆ. ಆದರೆ ಮಳೆ ಬಾರದೆ ಹಿನ್ನೆಲೆ ರೈತನು ರಾಗಿ ಬೆಳೆಯಲ್ಲಿ ಕುಸಿತವನ್ನು ಕಂಡು ರಾಗಿಯೇ  ಇಲ್ಲದಂತಾಗಿ ಸಂಕಷ್ಟಕ್ಕೆ ಸಿಲುಕಿರುವುದು ನಿಜಕ್ಕೂ ಬೇಸರದ ಸಂಗತಿ.

    ಇಲಾಖೆಯ ಬಿತ್ತನೆ ಗುರಿಗಿಂತ ಈ ವರ್ಷ ಕಡಿಮೆ ಬಿತ್ತನೆಯಾಗಿದೆ, ಮುಂಗಾರು ಮತ್ತು ಹಿಂಗಾರಿನ ಮಳೆ ಕೈ ಕೊಟ್ಟು ಬೆಳೆಗಳು ಕಮರಿ ಹೋಗಿದ್ದು ರೈತನು ಈ ಬಾರಿಸಾಕಷ್ಟು ನಷ್ಟವನ್ನು ಅನುಭವಿಸಿದ್ದಾನೆ, ತಾಲೂಕಿನಲ್ಲಿ ಶೇ.80- 85 ರಷ್ಟು ಮಳೆ ಕೊರತೆ ಕಂಡುಬಂದಿದೆ, ಬೆಳೆ ನಷ್ಟ ಹಾನಿಯ ಪರಿಹಾರವನ್ನು ನೀಡುವಂತೆ ರೈತರು ಮನವಿಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link