ಎಂತಹಾ ಪರಿಸ್ಥಿತಿ ಬಂದರು ಸಿದ್ದರಾಗಿರಿ : ಲಕ್ಷ್ಮಣ್‌ ಸವದಿ

ಅಥಣಿ: 

   ಕೃಷ್ಣಾ ನದಿ ಪ್ರವಾಹ ಇಳಿಕೆಯಾಗದ ಕಾರಣ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧವಾಗಿರುವಂತೆ ಅಧಿಕಾರಿಗಳಿಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿಯವರು ಬುಧವಾರ ಸೂಚನೆ ನೀಡಿದರು.

   ಕೃಷ್ಣಾ ನದಿಯ ದಡದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಶಾಸಕರು ಬುಧವಾರ ತುರ್ತು ಸಭೆ ನಡೆಸಿದರು.

ಸಭೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧವಾಗಿರವಂತೆ ಹೆಚ್ಚುವರಿ ಪುನರ್ವಸತಿ ಕೇಂದ್ರಗಳು, ವೈದ್ಯಕೀಯ ಉಪಕರಣಗಳು, ಔಷಧಿಗಳು, ಆಹಾರ ಉತ್ಪನ್ನ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳ ನಡೆಸುವತೆ ಸೂಚನೆ ನೀಡಿದರು. 

ಯಾವುದೇ ಕ್ಷಣದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆಯಿರುವ ಗ್ರಾಮಗಳಲ್ಲಿ ಅಲ್ಲಿನ ಜನರನ್ನು ಮುಂಚಿತವಾಗಿ ಸ್ಥಳಾಂತರಿಬೇಕು. ಪ್ರತಿಯೊಬ್ಬ ನೋಡಲ್ ಅಧಿಕಾರಿ ಮತ್ತು ಇತರ ಸಂಬಂಧಪಟ್ಟ ಸಿಬ್ಬಂದಿಗಳು ಪ್ರವಾಹದ ಸಮಯದಲ್ಲಿ ನಿಯೋಜನೆಗೊಂಡ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಿರಬೇಕು ಎಂದೂ ಇದೇ ವೇಳೆ ಸೂಚಿಸಿದರು.

ಸಭೆ ಬಳಿಕ ಶಾಸಕರು ಶಿರಟ್ಟಿ, ನಂದೇಶ್ವರ, ಸಪ್ತಸಾಗರ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link