ಮಧುಗಿರಿ
ವಕೀಲರ ರಕ್ಷಣಾ ಕಾಯ್ದೆಯನ್ನು ಶೀಘ್ರ ಅನುಷ್ಠಾನ ಗೊಳಿಸುವಂತೆ ತಾಲ್ಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಇ.ರಂಗನಾಥ್ ಮಾತನಾಡಿ, ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುವಾಗ ಹಾಗೂ ಮತ್ತಿತರ ಘಟನೆಗಳಲ್ಲಿ ವಕೀಲರ ಮೇಲೆ ಹಲ್ಲೆ ನಡೆಸುವಂತಹ ಘಟನೆಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.
ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರವು ವಕೀಲರ ರಕ್ಷಣಾ ಕಾಯಿದೆಯನ್ನು ಅನುಷ್ಠಾನಗೊಳಿಸಬೇಕು. ರಾಜ್ಯ ಸಂಘದ ಸೂಚನೆಯ ಮೇರೆಗೆ ನಮ್ಮ ಪದಾಧಿಕಾರಿಗಳೊಂದಿಗೆ ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ನಾವುಗಳು ಯಾರು ಭಾಗವಹಿಸದೆ ನೇರವಾಗಿ ಬೆಂಗಳೂರು ಚಲೋ ಜಾಥ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.
ವಕೀಲ ಮಹಮದ್ ಆದಿಲ್ ಮಾತನಾಡಿ, ಹಲವಾರು ಪ್ರಕರಣಗಳಲ್ಲಿ ವಕೀಲರ ಮೇಲೆ ಕಕ್ಷಿದಾರರು ಹಾಗೂ ಮತ್ತಿತರರಿಂದ ಹಲ್ಲೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಹಾಗೂ ವಕೀಲರ ಸಂರಕ್ಷಣೆಗೆ ರಾಜ್ಯ ಸರ್ಕಾರವು ಮುಂದಾಗಿ ವಿಶೇಷ ಕಾಯ್ದೆಯೊಂದನ್ನು ವಕೀಲರ ಪರವಾಗಿ ರೂಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನರಸಿಂಹಮೂರ್ತಿ, ಹಿರಿಯ ವಕೀಲ ಶೇಷಾದ್ರಿ, ಹಾಲಪ್ಪ, ರಘುನಾಥರೆಡ್ಡಿ, ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಟಿ.ತಿಮ್ಮರಾಜು, ರಂಗನಾಥ್, ವೀರಕ್ಯಾತಯ್ಯ, ಶಿವಣ್ಣ, ನಾಗರಾಜು, ಕೇಶವಮೂರ್ತಿ, ನರಸೇಗೌಡ, ಆನಂದ್, ಗೋಪಾಲಕೃಷ್ಣ, ನಾಗರಾಜು, ನರಸಿಂಹಮೂರ್ತಿ, ಮಹೇಶ್ ಹಾಗೂ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ