ಮಂಗಳೂರು
ಶಿವಮೊಗ್ಗದ ಬಿಜೆಪಿ ಶಾಸಕ ಹಾಗು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತಿಗೂ ಮತ್ತು ಬ್ರೈನಿಗೂ ಕನೆಕ್ಷನ್ ಇಲ್ಲ ಅನ್ನಿಸುತ್ತದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಆದ್ದರಿಂದ ಮೇಲಿನವರನ್ನು ಮೆಚ್ಚಿಸಲು ಏನೇನೋ ಹೇಳುತ್ತಾರೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಯು.ಟಿ. ಖಾದರ್, ಚುನಾವಣಾ ಸಂದರ್ಭದಲ್ಲಿ ಭಾವನಾತ್ಮಕ ಮಾತುಗಳು ಬೇಡ. ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಲಿ. ಪ್ರತಿ ಧರ್ಮಕ್ಕೂ ಮಹತ್ವ ಇದೆ. ಧರ್ಮವನ್ನು ಅಪಹಾಸ್ಯ ಮಾಡಿದರೆ ಅದು ಅವರ ನೀಚತನವನ್ನು ತೋರಿಸುತ್ತದೆ. ನಮ್ಮ ಕಾಲದಲ್ಲಿ ಗ್ಯಾರಂಟಿ ಇತ್ತು, ವಾರಂಟಿಯೂ ಇದೆ. ಬಿಜೆಪಿ ಶೇ.10ರಷ್ಟು ಭರವಸೆಯನ್ನು ಈಡೇರಿಸಿಲ್ಲ. ಆದರೆ ನಾವು ಮಾತ್ರ ಕೊಟ್ಟ ಮಾತನ್ನು ಈಡೇರಿಸುವುಸು ಗ್ಯಾರಂಟಿ ಎಂದರು.