ಕೊರಟಗೆರೆ :
ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿಗೆ ಜನ ಆಶೀರ್ವದಿಸಿದ್ದಾರೆ. ಪ್ರಧಾನಿ ಆಡಳಿತ ದುರ್ಬಳಕೆ ಮಾಡ್ಕೊಂಡು, ಕೇವಲ ಪ್ರಚಾರ ಗಿಟ್ಟಿಸಿಕೊಂಡು ಜನರಿಗೆ ಗಿಮಿಕ್ ಮೂಲಕ ಜನರನ್ನ ಯಾಮಾರಿ ಸುತ್ತಿದ್ದು, ಲೋಕಸಭೆಯಲ್ಲಿ ಇಂತಹ ನೀಚ ಸರ್ಕಾರವನ್ನು ನನ್ನ ಜೀವನದಲ್ಲಿ ಕಂಡೆ ಇರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ರಾಜೀವ ಭವನ ಲೋಕಾರ್ಪಣೆ ಮತ್ತು ಜಿಲ್ಲಾ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರದ ಇಡಿ-ಸಿಬಿಐ ಅಧಿಕಾರಿಗಳಿಂದ ಕಾಂಗ್ರೆಸ್ ನಾಯಕರ ಹೆದರಿಸಿ ಬಿಜೆಪಿ ಪಕ್ಷ ಚುನಾವಣೆ ಗೆಲ್ತಾರೆ. ಸಕ್ಕರೆ ಕಾರ್ಖಾನೆ ಮತ್ತು ಸಹಕಾರ ಸಂಘದ ಮಾಲೀಕರಿಗೆ ಅಮಿತ್ ಷಾ ಧಮ್ಕಿ ಹಾಕ್ತಾರೆ. ಭಾರತದಲ್ಲಿ 30 ಲಕ್ಷ ಮತ್ತು ಕರ್ನಾಟಕ ರಾಜ್ಯದಲ್ಲಿ 3 ಲಕ್ಷ ನೌಕರಿ ಖಾಲಿ ಇವೆ. ಕಪುö್ಪಹಣ ಇನ್ನೂ ಎಲ್ಲಿ ಬರ್ತಿದೆ ಎಂಬುದೇ ಮೋದಿಗೆ ಗೊತ್ತಿಲ್ಲ. ಮೋದಿ ಜನರಿಗೆ ನೀಡಿದ ಭರವಸೆ ಹುಸಿಯಾಗಿದೆ. ಬ್ರಿಟಿಷರಿಗೆ ಹೆದರದ ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕರಿಗೆ ಭಯ ಪಡುತ್ತಾ ಎಂದು ಗುಡುಗಿದರು.
ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಸರಕಾರ 40% ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟ್ಟಾಚಾರದ ಸಾಕ್ಷಿ ಕೇಳಿದ ಮುಖ್ಯಮಂತ್ರಿಗೆ ಲೋಕಾಯುಕ್ತ ಇಲಾಖೆ ಆಧಾರ ಸಮೇತ ಸಾಕ್ಷಿ ನೀಡಿದೆ. ಈಗಲಾದ್ರು ಸಿಎಂ ರಾಜಿನಾಮೆ ನೀಡಬೇಕಿದೆ. ಕೊಬ್ಬರಿ ಬೆಲೆ 20 ಸಾವಿರದಿಂದ 9 ಸಾವಿರಕ್ಕೆ ಇಳಿದಿದೆ. ಬಿಜೆಪಿ ಸರಕಾರದ ಭ್ರಷ್ಟ್ಟಾಚಾರದ ಪಾಪದ ಪತ್ರ ಬಿಡುಗಡೆ ಮಾಡ್ತೀನಿ. 16 ಸೀಟು ಇದ್ರು ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಮತ್ತು 38 ಸೀಟು ಇದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ನಾವು ಬೆಂಬಲ ನೀಡಿದ್ವಿ. ಆದರೆ ಅದನ್ನು ಅವರು ಉಳಿಸಿಕೊಂಡಿಲ್ಲ ಎಂದು ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣಬೀರ್‌ಸಿಂಗ್ ಸುರ್ಜೆವಾಲ ಮಾತನಾಡಿ, ಪ್ರಧಾನಿ ಮೋದಿ ಛತ್ರಿಯ ಕೆಳಗಡೆಯೇ ಭ್ರಷ್ಟ್ಟಾಚಾರದ ಸೈನ್ಯವೇ ಇದೆ. 40% ಕಮಿಷನ್ ಬಗ್ಗೆ ಕರ್ನಾಟಕದ 50 ಸಾವಿರ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಿಜೆಪಿ ಪಕ್ಷ ಆಡಳಿತ ನಡೆಸ್ತಿದೆ. ಭ್ರಷ್ಟ ಚೋರ್ ಬೊಮ್ಮಾಯಿ ಸಿಎಂ ಆಗಿದ್ದಾರೆ. 6 ಕೋಟಿ ಕನ್ನಡಿಗರ ಭವಿಷ್ಯ ವಿಧಾನಸಭಾ ಚುನಾವಣೆಯಲ್ಲಿ ಅಡಗಿದೆ. ಬಿಜೆಪಿ ಪಕ್ಷದ ವಿನಾಶ ಕೊರಟಗೆರೆ ಕ್ಷೇತ್ರದಿಂದಲೇ ಪ್ರಾರಂಭವಾಗಲಿ ಎಂದು ಕರೆ ನೀಡಿದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ ಬಿಜೆಪಿ ಸರಕಾರದ ಸಿಎಂನಿAದ ಹಿಡಿದು ಸಚಿವರು ಮತ್ತು ಶಾಸಕರೆಲ್ಲರೂ ಭ್ರಷ್ಟರು. ಸಿಎಂ ಬೊಮ್ಮಾಯಿ ನಿಮಗೆ ನಾಚಿಕೆ ಆಗೋದಿಲ್ವಾ. ಮಾನ ಮರ್ಯಾದೇ ಇದ್ರೇ ಮೊದ್ಲು ರಾಜಿನಾಮೇ ನೀಡಿ ಚುನಾವಣೆಗೆ ಬನ್ನಿ. ಚುನಾವಣೆ ಬಂದ್ರು ಸಹ ಪೇಟ್ರೊಲ್, ಡಿಸೇಲ್, ಗ್ಯಾಸ್ ಜಾಸ್ತಿ ಆಗ್ತೀದೆ. ವಾಮಮಾರ್ಗದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಕರೆದೊಯ್ದು ಬಿಜೆಪಿ ಪಕ್ಷವು ಸರಕಾರ ರಚನೆ ಮಾಡಿ ಭ್ರಷ್ಟಚಾರದ ಆಡಳಿತ ನಡೆಸ್ತೀದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಹೆಚ್.ಆಂಜನೇಯ, ಟಿ.ಬಿ.ಜಯಚಂದ್ರ, ಪರಮೇಶನಾಯ್ಕ, ರಾಣಿಸತೀಶ್, ಮಾಜಿ ಸಂಸದ ಉಗ್ರಪ್ಪ, ಚಂದ್ರಪ್ಪ, ಎಂಎಲ್‌ಸಿ ರಾಜೇಂದ್ರ, ಮಾಜಿ ಎಂಎಲ್‌ಸಿ ಬೇಮೆಲ್‌ಕಾಂತರಾಜು, ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಷಡಾಕ್ಷರಿ, ರಫಿಕ್ ಅಹಮ್ಮದ್, ಮಾಜಿ ನಗರಾಸಭಾ ಅಧ್ಯಕ್ಷ ವಾಲೇಚಂದ್ರಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕೊರಟಗೆರೆ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ವಿನಯ್, ಎಂಎನ್‌ಜೆ ಮಂಜುನಾಥ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








