ರುವಾಂಡದಿಂದ ಭಾರತಕ್ಕೆ LET ಉಗ್ರನ ಹಸ್ತಾಂತರ….!

ನವದೆಹಲಿ: 

    ಬೆಂಗಳೂರು ಜೈಲು ಭಯೋತ್ಪಾದನೆ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ  ನೊಂದಿಗೆ ಸಂಪರ್ಕ ಹೊಂದಿರುವ ಮೋಸ್ಟ್‌ ವಾಂಟೆಡ್ ಉಗ್ರನನ್ನು  ರುವಾಂಡಾದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಉಗ್ರನನ್ನು ಸಲ್ಮಾನ್ ರೆಹಮಾನ್ ಖಾನ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

    ಕೇಂದ್ರೀಯ ತನಿಖಾ ದಳ   ರಾಷ್ಟ್ರೀಯ ತನಿಖಾ ಸಂಸ್ಥೆ  ಸಹಯೋಗದೊಂದಿಗೆ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ,  ಮೂಲಕ ರುವಾಂಡಾದಿಂದ ವಾಂಟೆಡ್ ಲಷ್ಕರ್-ಎ-ತೈಬಾ ಕಾರ್ಯಕರ್ತ ಸಲ್ಮಾನ್ ರೆಹಮಾನ್ ಖಾನ್‌ನನ್ನು ಭಾರತಕ್ಕೆ ಕರೆತರಲಾಗಿದೆ. ಆತ ನವೆಂಬರ್ 27 ರಂದು ರುವಾಂಡಾದ ಕಿಗಾಲಿಯಲ್ಲಿ ಸಲ್ಮಾನ್ ಬಂಧಿತನಾಗಿದ್ದ.

     ಹೈ ಪ್ರೊಫೈಲ್ ಪ್ರಕರಣವೊಂದರಲ್ಲಿ ಬೇಕಾಗಿದ್ದ ಸಲ್ಮಾನ್ ರೆಹಮಾನ್ ಖಾನ್ ಮತ್ತು ಅವರ ಸಹಚರ ಜುನೈದ್ ಅಹ್ಮದ್ ತಲೆಮರೆಸಿಕೊಂಡಿದ್ದರು.  ಕ್ರಿಮಿನಲ್ ಪಿತೂರಿ, ಭಯೋತ್ಪಾದಕ ಸಂಘಟನೆಯ ಸದಸ್ಯ, ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವುದು ಮತ್ತು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗೆ ಸಂಬಂಧಿಸಿದ ಇತರ ಅಪರಾಧಗಳಂತಹ ಅಪರಾಧಗಳಲ್ಲಿ ಖಾನ್ ಆರೋಪಿಯಾಗಿದ್ದಾನೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೂರೈಸಿದ್ದಕ್ಕಾಗಿ ಖಾನ್ ವಿರುದ್ಧ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಖಾನ್‌ ಮೇಲೆ ಪ್ರಕರಣ ದಾಖಲಾಗಿದೆ.

    ಸಿಬಿಐನ ಕೋರಿಕೆಯ ಮೇರೆಗೆ, NIA ಆಗಸ್ಟ್ 2 ರಂದು ಖಾನ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (RCN) ಅನ್ನು ಜಾರಿಗೊಳಿಸಿದ ನಂತರ ಪ್ರಕರಣ ವೇಗ ಪಡೆದುಕೊಂಡಿತು. ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧಾರವಾಗಿಸಿಕೊಂಡು ರುವಾಂಡದಲ್ಲಿ ಆತನ್ನು ಪತ್ತೆ ಮಾಡಲಾಗಿದೆ. ರುವಾಂಡಾ ಇನ್ವೆಸ್ಟಿಗೇಶನ್ ಬ್ಯೂರೋ ಆತನ್ನು ಹಸ್ತಾಂತರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

 

Recent Articles

spot_img

Related Stories

Share via
Copy link
Powered by Social Snap