ಹೊಸಪೇಟೆ :
ಅಸಮಾನತೆ, ಗೊಡ್ಡು ಸಂಪ್ರದಾಯ, ಕೊಳಕು ಜಾತಿ ತಾರತಮ್ಯ, ಅಸ್ಪøಶ್ಯತೆ, ಶೋಷಣೆ ಇರುವ ಹಿಂದು ಧರ್ಮವನ್ನು ಬಿಟ್ಟು 65 ವರ್ಷಗಳ ಹಿಂದೆಯೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದು ಧರ್ಮವನ್ನು ಬಿಟ್ಟು ಬೌದ್ದ ಧರ್ಮ ಸ್ವೀಕರಿಸಿದರು. ಅವರಂತೆಯೇ ನಾವೆಲ್ಲರು ಸಮಾನತೆಯ ಮೂಲ ಮನೆಯಾದ ಬೌದ್ದ ಧರ್ಮವನ್ನು ಒಪ್ಪಿಕೊಂಡು ಗೌರಯುತವಾಗಿ ಬಾಳೋಣ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ನಡೆಯೋಣ ಎಂದು ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಪ್ರ.ಕಾರ್ಯದರ್ಶಿ ಬಣ್ಣದಮನೆ ಸೋಮಶೇಖರ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಂಜೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ದ ಧರ್ಮ ಸ್ವೀಕರಿಸಿ 65ನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮದಲ್ಲದ ಮನೆಯ ಮುಂದೆ ಹೋಗಿ ಅವಮಾನ ಎದುರಿಸಿದ್ದು ಸಾಕು. ಇನ್ನು ಮುಂದೆಯಾದರೂ ನಮ್ಮ ಮೂಲಮನೆ ಬೌದ್ದ ಧರ್ಮವನ್ನು ಒಪ್ಪಿಕೊಂಡು ನೆಮ್ಮದಿಯಾಗಿ ಗೌರಯುತವಾಗಿ ಬಾಳೋಣ. ಬಾಬಾಸಾಹೇಬರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡೆಯೋಣ ಎಂದರು.
ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ.ವೀರಸ್ವಾಮಿ ಮಾತನಾಡಿ, ನಮ್ಮ ಸ್ವಂತ ಮನೆ ಇರುವಾಗ ನಮಗೇಕೆ ಹಂಗಿನಮನೆ. ನಾವು ಅನುಭವಿಸಿದ ಜಾತಿ ದೌರ್ಜನ್ಯ, ಅವಮಾನ, ಅಸ್ಪøಶ್ಯತೆ, ಸಾಕು. ಇನ್ನು ಮುಂದೆಯಾದರೂ ನಮ್ಮ ಮಕ್ಕಳು ನೆಮ್ಮದಿಯಿಂದ ಬಾಳಬೇಕಾದರೆ ಸಮಾನತೆಯ ನಮ್ಮ ಮೂಲಮನೆಗೆ ಹೋಗಬೇಕಾಗಿದೆ ಎಂದರು.
ಡಿಎಚ್‍ಎಸ್‍ನ ಮರಡಿ ಜಂಬಯ್ಯನಾಯಕ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ರವರು, ಅಸಮಾನತೆ, ಮೂಢನಂಬಿಕೆಗಳ ತಾಣವಾದ ಹಿಂದು ಧರ್ಮವನ್ನು ಏಕೆ ಬಿಟ್ಟರು ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಿಂದು ಧರ್ಮದಲ್ಲಿ ಜಾತಿ ವ್ಯವಸ್ಥೆಯನ್ನು ಜೀವಂತವಾಗಿಟ್ಟು, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ, ತಮ್ಮ ಬೇಳೆ ಬೇಯಿಸಿಕೊಳ್ಳುವವರ ಬಗ್ಗೆ ನಾವು ಎಚ್ಚರವಹಿಸಬೇಕಾಗಿದೆ. ಇಲ್ಲಿನ ಅವ್ಯವಸ್ಥೆ ನೋಡಿಯೇ ಬಾಬಾಸಾಹೇಬರು ಬೇಸತ್ತು ಹಿಂದು ಧರ್ಮ ಬಿಟ್ಟು, ಬೌದ್ದ ಧರ್ಮ ಸ್ವೀಕರಿಸಿ ಇಂದಿಗೆ 65 ವರ್ಷಗಳಾದವು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬೌದ್ದ ಭಿಕ್ಕುಗಳಾದ ಟಿಬೆಟ್ ಮೂಲದ ಮುಂಡಗೋಡಿನ ತಾಶಿಕಲಡೆನ್, ಗಾಳೆಕ್, ನಾಗುಡೂಪ್, ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ವಾಸುದೇವ, ಬುದ್ದ ಬಸವ ಅಂಬೇಡ್ಕರ್ ಟ್ರಸ್ಟ್‍ನ ಅಧ್ಯಕ್ಷ ನಿಂಬಗಲ್ ರಾಮಕೃಷ್ಣ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಪೂಜಾರಿ ದುರ್ಗಪ್ಪ, ಎಚ್.ಶಬ್ಬೀರ್, ಜೆ.ಶಿವಕುಮಾರ್, ಮಾರೆಣ್ಣ, ಕೃಷ್ಣಪ್ಪ, ಬಸವರಾಜ, ಭರತಕುಮಾರ್, ಸ್ಲಂ ವೆಂಕಟೇಶ, ವಿಜಯ, ಜಯಪ್ಪ, ಅರುಣಕುಮಾರ್, ಯೋಹನ್, ಮುದುಕಪ್ಪ, ಸಜ್ಜಾದಖಾನ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ