ತುಮಕೂರು :
ತಳ ಸಮುದಾಯದವರ ಅಭಿವೃದ್ದಿಗೆ ಎಲ್ ಜಿ ಹಾವನೂರು ತಮ್ಮದೆ ಆದಂತಹ ಕೊಡುಗೆಗಳನ್ನು ನೀಡಿದ್ದಾರೆಂದು ಸಹಕಾರ ಸಚಿವ ರಾದ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಹೊರಪೇಟೆಯಲ್ಲಿರುವ ವಾಲ್ಮೀಕಿ ಕನ್ವೆಷನ್ ಹಾಲ್ ನಲ್ಲಿ ವಾಲ್ಮೀಕಿ ಸಹಕಾರ ಸಂಘ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ- ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘ ಹಾಗೂ ಪ್ರಗತಿಪರ ವಕೀಲರ ಸಂಘ, ತುಮಕೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಮಾಜಿ ಸಚಿವರಾದ ಎಲ್. ಜಿ ಹಾವನೂರು ಇವರ 100 ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ ಜಿ ಹಾವನೂರು ರವರು ವಿದ್ಯಾಭ್ಯಾಸದಲ್ಲಿ ಮೊದಲು ಮೀಸಲಾತಿಯನ್ನು ನೀಡುವುದರ ಮೂಲಕ ವಿದ್ಯಾಭ್ಯಾಸಕ್ಕೆ ಹೆಚ್ಚು ಅವಕಾಶ ಮಾಡಿಕೊಟ್ಟರು.
ನಮ್ಮ ಜಿಲ್ಲೆಯ ಹಿರಿಯ ವಕೀಲರಾದ ರವಿವರ್ಮ ಕುಮಾರ್ ರವರು ಎಲ್ ಜಿ ಹಾವನೂರು ರವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ದೇವರಾಜು ಅರಸು ರವರ ಕಾಲದಲ್ಲಿ ರಾಜ್ಯಸಭೆಯಲ್ಲಿ ಕಾರ್ಯನಿರ್ವಹಿಸಿದ್ದು ಅವರು ಎಂದಿಗೂ ಅಧಿಕಾರದ ಹಿಂದೆ ಹೋದವರಲ್ಲಾ ಎಂದರು.
ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ ದೇವರಾಜು ಅರಸು ರವರು ಎಲ್ ಜಿ ಹಾವನೂರು ರವರನ್ನು ಸಮಾಜ ಕಲ್ಯಾಣ ಇಲಾಖೆಗೆ ಆಯುಕ್ತರನ್ನಾಗಿ ನೇಮಕ ಮಾಡಿದ್ದರು, ಹರಿ ಜನ ಗಿರಿ ಜನ ರ 101 ಜಾತಿಗಳನ್ನು ಗುರುತಿಸಿ ಮೀಸಲಾತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದೂ ಎಲ್ಲಾ ಸಮುದಾಯದವರು ಎಲ್ ಜಿ ಯವರನ್ನು ನೆನಪಿಸಿ ಕೊಳ್ಳ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ಹನುಮಂತರಾಯಪ್ಪ ,ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷರಾದ ಬಿಜಿ ಕೃಷ್ಣಪ್ಪ , ವಾಲ್ಮೀಕಿ ವಿದ್ಯಾವರ್ಧಕ ಸಂಘ ಅಧ್ಯಕ್ಷರಾದ ಪುರುಷೋತ್ತಮ ,ಪ್ರಗತಿಪರ ವಕೀಲರ ಸಂಘ ಅಧ್ಯಕ್ಷರಾದ ಸಿಂಗದಹಳ್ಳಿ ರಾಜಕುಮಾರ್ , ದನಿಯಾ ಕುಮಾರ್ ನಿವೃತ್ತ ಎ ಆರ್ ಸಿ ಎಸ್ ತಿಪ್ಪೇಸ್ವಾಮಿ. ಹಾಗೂ ಮತ್ತಿತರರು ಇದ್ದರು.
