ಬೆಂಗಳೂರು
ದಿವಂಗತ ಎಲ್ ಜಿ ಹಾವನೂರು ರವರು ಅದ್ವಿತೀಯವಾದಂತಹ ಕಾನೂನು ಪಾಂಡಿತ್ಯವನ್ನು ಹೊಂದಿದಂತಹ ಮೇರು ರಾಜಕಾರಣಿ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಜಿ ಟಿ ಚಂದ್ರಶೇಖರಪ್ಪ ಹೇಳಿದರು
ಅವರು ಬೆಂಗಳೂರು ನಗರದ ಬಸವೇಶ್ವರ ನಗರದಲ್ಲಿರುವ ವಾಲ್ಮೀಕಿ ಮಹಾಸಭಾ ಕೇಂದ್ರ ಕಚೇರಿಯಲ್ಲಿ ದಿವಂಗತ ಎಲ್ ಜಿ ಹಾವನೂರು ರವರ ನೂರು ವರ್ಷದ ಜನ್ಮ ಶತಮಾನದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ
ಇವತ್ತು ವಾಲ್ಮೀಕಿ ಸಮಾಜದೊಂದಿಗೆ ಇತರೆ ಹಿಂದುಳಿದ ಜಾತಿಗಳ ಜನರು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ವಿಭಾಗಗಳಲ್ಲಿ ಸದೃಢರಾಗಿದ್ದಾರೆಂದರೆ.
ಅದಕ್ಕೆ ಎಲ್ ಜಿ ಹಾವನೂರ್ ಅವರು ಕಾರಣ ಅವರಿಗೆ ಕಾನೂನು ಪಾಂಡಿತ್ಯದಲ್ಲಿ ಅಗಾಧವಾದ ವಿದ್ವತ್ತಿತ್ತು ಭಾರತ ಸರ್ಕಾರದ ಸರ್ವೋಚ್ಚ ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿ ಉಚ್ಚ ನ್ಯಾಯಾಧೀಶರಿಗೆ ಪ್ರೀತಿ ಪಾತ್ರರಾಗಿದ್ದರು.
ಜೊತೆಗೆ ಶೋಷಿತರ ಬಡವರ ಮತ್ತು ಧ್ವನಿ ಇಲ್ಲದವರ ಜೊತೆ ನಿಲ್ಲುವಂತಹ ಔದಾರ್ಯ ಬೆಳೆಸಿಕೊಂಡಿದ್ದರು ಅವರ ಆದರ್ಶಗಳನ್ನ ಮತ್ತು ಅಶೋತ್ತರಗಳನ್ನ ಇಂದಿನ ಪೀಳಿಗೆಯ ಅನುಕರಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಹಾಜರಿದ್ದಂತ ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಮಾತನಾಡಿ ಅಂಬೇಡ್ಕರ್ ಮತ್ತು ದಿವಂಗತ ದೇವರಾಜ ಅರಸು ಇಬ್ಬರನ್ನು ಕೂಡ ಸಮಕಾಲಿನವಾಗಿ ನಾವು ನೋಡಬೇಕಾಗುತ್ತದೆ ದೇವರಾಜ ಅರಸುರವರು ತಮ್ಮ ಸಂಪುಟದಲ್ಲಿ ಚರಿತ್ರೆಯಲ್ಲಿ ಉಳಿಯುವಂತ ಕೆಲಸ ಮಾಡಿದ್ದಾರೆ.
ಎಂದರೆ ಅದು ಎಲ್ ಜಿ ಹಾವನೂರು ರವರ ಸಲಹೆ ಮತ್ತು ಸಾಂಗತ್ಯ ಸಮಾಜದಲ್ಲಿದ್ದಂತಹ ಜಾತಿ ಮತ್ತು ಅಸಮಾನತೆಯ ಗೋಡೆಯನ್ನು ಕೆಡವಿ ಮತ್ತು ಕಂದಕಗಳನ್ನು ಮುಚ್ಚಿ ಆ ವರ್ಗಗಳಿಗೆ ನ್ಯಾಯ ಕೊಡಿಸಬೇಕೆನ್ನುವ ಹಾವನೂರ್ ರವರ ಚಿಂತನೆ ಸರ್ವಕಾಲಿಕವಾದದ್ದು ಮೇಲ್ವರ್ಗದವರ ಅಸಹನೆ ನಡುವೆಯೂ ಕೂಡ ಹಿಂದುಳಿದ ವರ್ಗಗಳ ಇಂತಹ ವರದಿಯನ್ನು ಸರ್ಕಾರಕ್ಕೆ ಮಂಡಿಸಿ ಅನುಷ್ಠಾನಗೊಳಿಸು ವುದು ಅಂದು ಸುಲಭವಿರಲಿಲ್ಲ ಇತರೆ ವರ್ಗಗಗಳಿಗೂ ಮೀಸಲಾತಿ ದೊರೆಯುತ್ತದೆ ಎಂಬ ಆಲೋಚನೆಯೂ ಕೂಡ ಇಲ್ಲದೆ ಈ ವರ್ಗದವರು ಹಾವನೂರ್ ವರದಿಯನ್ನು ಹರಿದು ಬಿಸಾಕುತ್ತಾರೆ.
ಇದರಿಂದ ಹಾವನೂರ್ ಅವರು ತುಂಬಾ ಮನ ನೊಂದಿದ್ದರು ಇದೇನೇ ಇದ್ದರೂ ಕೂಡ ದೇವರಾಜ ಅರಸು ರವರ ದೂರ ದೃಷ್ಟಿಯಿಂದ ಸಾಧ್ಯವಾಯಿತು.
ಈ ಸವಲತ್ತನ್ನು ಪಡೆದಂತ ಈ ವರ್ಗದ ಜನರು ತಮ್ಮ ವೃತ್ತಿ ಪರತೆಯ ಹೊರತಾಗಿಯೂ ಕೂಡ ಅಗಾಧವಾದ ಬಡವರ ಮತ್ತು ಶೋಷಿತರ ಉದ್ಧಾರದ ಕನಸನ್ನು ಹೊಂದಿರಬೇಕೆಂದು ಹೇಳಿದರು.
ಪುಷ್ಪಾ ಲಕ್ಷ್ಮಣಸ್ವಾಮಿ, ನಾಗರಾಜು, ಗಾಣದ ಉಣಸೆ ನಾಗರಾಜು ಅನಂತಯ್ಯ ವಾಲ್ಮೀಕಿ ಸಂಘಟನೆಗಳ ಅಧ್ಯಕ್ಷರಾದ ಸಿಂಗಾಪುರ ವೆಂಕಟೇಶ್ ತುಳಸಿರಾಮ್ ಮುಂತಾದವರು ಹವನೂರ್ ಬಗ್ಗೆ ಮಾತನಾಡಿದರು ವಿವಿಧ ಭಾಗಗಳಿಂದ ಬಂದಿದ್ದಂತಹ ವಾಲ್ಮೀಕಿ ಸಮಾಜದ ಅಧಿಕಾರಿಗಳು ನಿವೃತ್ತ ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
