ರಾಮನಗರ:
ಸುಳ್ಳು ಹೇಳುವುದು ಬಿಜೆಪಿಯವರ ಚಾಳಿ, ಹೇಗೆ ಎಂದರೆ ಪ್ರಧಾನಿ ನರೇಂದ್ರ ಮೋದಿಯವರು ಕಾಗೆ ಬೆಳ್ಳಗಿದೆ ಎಂದರೆ ಅವರ ಅನುಯಾಯಿಗಳೂ ಹೌದು ಬೆಳ್ಳಗಿದೆ ಅಂತಾರೆ ನಾಯಿಗೆ ಬಾಲ ಇಲ್ಲ ಅಂದರೆ ಹೌದು ಇಲ್ಲಾ ಅಂತ ವಾದ ಮಾಡ್ತಾರೆ, ಬಿಜೆಪಿಯವರು ನರೇಂದ್ರ ಮೋದಿಯವರು ಏನು ಹೇಳುತ್ತಾರೋ ಅದಕ್ಕೆ ತಮಟೆ ಹೊಡೆಯುವುದು ಅವರ ಅಭ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಾನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ, 2023-24ನೇ ಸಾಲಿನ ಬಜೆಟ್ ನಲ್ಲಿ ಏನು ಹೇಳಿದ್ದೀರಿ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೇಂದ್ರದಿಂದ ನೀಡುತ್ತೇವೆ ಎಂದು ಹೇಳಿದರು. ಅವರು ಕೇಂದ್ರದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದನ್ನು ಈ ಹಣಕಾಸು ವರ್ಷ ಮುಗಿಯುತ್ತಾ ಬಂದರೂ ಇದುವರೆಗೆ ಒಂದು ರೂಪಾಯಿಯೂ ಬಂದಿಲ್ಲ ಇದು ಸುಳ್ಳಾ, ನಿಜವೇ ನೀವೇ ಹೇಳಿ ನಿರ್ಮಲಾ ಸೀತಾರಾಮನ್ ಅವರೇ ಎಂದು ಕೇಳಿದರು.
ದೇವೇಗೌಡರು ಇನ್ನೊಬ್ಬ ಸುಳ್ಳುಗಾರ. ಮೇಕೆದಾಟು ಅಣೆಕಟ್ಟೆ ನಿರ್ಮಾಣ ವಿಚಾರದಲ್ಲಿಯೂ ಬಿಜೆಪಿ – ಜೆಡಿಎಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಅವರು ಯಾವತ್ತು ನುಡಿದಂತೆ ನಡೆದಿಲ್ಲ. ಅವರ ಮಾತುಗಳನ್ನು ನಂಬಿದರೆ ಮೋಸ ಹೋಗುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ