ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಗೆಲುವು ಸಾಧಿಸಿರುವ ಟಾಪ್ 4 ತಂಡಗಳ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳು ಕಣಕ್ಕಿಳಿದಿದ್ದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೆ ಸಂಪೂರ್ಣ ಟೂರ್ನಿ ಭಾರತದಲ್ಲಿಯೇ ನಡೆಯಲಿದ್ದು ಮಾರ್ಚ್ 26ರಿಂದ ಆರಂಭವಾಗಿ 65 ದಿನಗಳ ಕಾಲ ಕ್ರಿಕೆಟ್ ಜಾತ್ರೆ ನಡೆಯಲಿದೆ.ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡ ಸಜ್ಜಾಗುತ್ತಿದ್ದಾರೆ.

ವಿದ್ಯಾರ್ಥಿನಿಯರು `ಹಿಜಾಬ್’ ಧರಿಸಿ ಪರೀಕ್ಷೆ, ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ : ಸಚಿವ ಬಿ.ಸಿ.ನಾಗೇಶ್

ಇನ್ನು ಈ ಐಪಿಎಲ್ ಟೂರ್ನಿಯ ಇತಿಹಾಸವನ್ನು ಕೆದಕಿದರೆ ಅತೀ ಬಲಿಷ್ಠ ತಂಡವಾಗಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಕಾಣಿಸುತ್ತದೆ. ಎಂಐ ಒಟ್ಟಾರೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ಅದು ಬಿಟ್ಟರೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ 4 ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಹೆಚ್ಚು ಟ್ರೋಫಿ ಗೆದ್ದ ತಂಡಗಳನ್ನು ಬದಿಗಿಟ್ಟು ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳನ್ನು ನೋಡಿದಾಗಲೂ ಇದರಲ್ಲೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನವನ್ನು ಪಡೆಯುತ್ತದೆ. ಕುತೂಹಲಕಾರಿ ಅಂಶವೆಂದರೆ ಒಂದು ಬಾರಿಯೂ ಟ್ರೋಫಿಯೇ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈ ಟಾಪ್ 4 ಪಟ್ಟಿಯಲ್ಲಿದೆ.ಐಪಿಎಲ್‌ನಲ್ಲಿ ಹೆಚ್ಚು ಗೆಲುವಿನ ದಾಖಲೆ ಹೊಂದಿರುವ ತಂಡಗಳ ಪಟ್ಟಿ

ಹಳ್ಳಕ್ಕೆ ಬಿದ್ದ ಬಸ್ : 7 ವಿದ್ಯಾರ್ಥಿಗಳ ದುರ್ಮರಣ

ಅಗ್ರಸ್ಥಾನದಲ್ಲಿ ಮುಂಬೈ ಇಂಡಿಯನ್ಸ್:

ಈಗಾಗಲೇ ಹೇಳಿದಂತೆ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ತಂಡವಾಗಿದೆ. ಇನ್ನು ತಂಡದ ಗೆಲುವಿನ ವಿಚಾರದಲ್ಲಿಯೂ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ 2008- 2021ರ ಆವೃತ್ತಿಯವರೆಗೆ ಒಟ್ಟು 217 ಪಂದ್ಯಗಳನ್ನು ಆಡಿದೆ. ಇದರಲ್ಲಿ 125 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 88 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 4 ಪಂದ್ಯಗಳು ಟೈ ಆಗಿದೆ. ಹಾಗಾಗಿ ಮುಂಬೈ ಇಂಡಿಯನ್ಸ್ ತಾನು ಆಡಿದ ಪಂದ್ಯಗಳ ಪೈಕಿ 57.6 ಪ್ರತಿಶತ ಪಂದ್ಯಗಳನ್ನು ಗೆದ್ದು ಕೊಂಡಂತಾಗಿದೆ.

2ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್:

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಎರಡನೇ ಅತ್ಯಂತ ಯಶಸ್ವೀ ತಂಡ ಎನಿಸಿಕೊಂಡಿದೆ. ಈವರೆಗೆ 195 ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ 117 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 76 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಒಂದು ಪಂದ್ಯದಲ್ಲಿ ಟೈ ಫಲಿತಾಂಶ ಪಡೆದುಕೊಂಡಿದೆ.

Naveen ಮೃತದೇಹ ವೈದ್ಯಕೀಯ ಕಾಲೇಜಿಗೆ ದಾನ ನೀಡಲು ಕುಟುಂಬಸ್ಥರು ನಿರ್ಧಾರ

3ನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್:

ಅತಿ ಹೆಚ್ಚು ಗೆಲುವು ಸಾಧಿಸಿರಿವ ತಂಡಗಳ ಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್ ತಂಡವಾಗಿರುವ ಕೆಕೆಆರ್ ಈ ಬಾರಿ ಹೊಸ ನಾಯಕನ ಮುಂದಾಳತ್ವದಲ್ಲಿ ಮುನ್ನಡೆಯಲಿದೆ. ಐಪಿಎಲ್‌ನಲ್ಲಿ ಈವರೆಗೆ 212 ಪಂದ್ಯಗಳನ್ನಾಡಿರುವ ಕೆಕೆಆರ್ 107 ಗೆಲುವು ಸಾಧಿಸಿ ಈ ಸಾಧನೆ ಮಾಡಿದೆ. 98 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರೆ ನಾಲ್ಕು ಪಂದ್ಯಗಳಲ್ಲಿ ಟೈ ಕಂಡಿದೆ.

4ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಈವರೆಗೆ 212 ಪಂದ್ಯಗಳನ್ನು ಆಡಿದ್ದು 98 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 106 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು 3 ಟೈ ಪಂದ್ಯಗಳನ್ನು ಕಂಡಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link