ಹೊಸದುರ್ಗ:
ಅಧಿಕಾರಕ್ಕಿಂತ ಅಭಿವೃದ್ದಿ ಮುಖ್ಯ, ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಮಾಡುವುದು ನಮ್ಮ ಗುರಿ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಮಾತನಾಡಿದರು.ಪಟ್ಟಣದಲ್ಲಿ ಭಾನುವಾರ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಚಿತ್ರದುರ್ಗ ಅಭಿವೃದ್ದಿಯ ಕನಸು ಹೊತ್ತು ಬಂದಿದ್ದೆನೆ ಬಿಜೆಪಿ ಗೆಲ್ಲಿಸುವ ಮೂಲಕ ಜಿಲ್ಲೆಯ ಶಾಸಕರೊಂದಿಗೆ ಸೇರಿ ನಿಮ್ಮ ಸೇವೆ, ಜಿಲ್ಲೆಯ ಅಭಿವೃದ್ದಿ ಮಾಡಲು ಅವಕಾಶ ಕಲ್ಪಿಸಿ. ಚಿತ್ರದುರ್ಗ ಜಿಲ್ಲೆಯ 5 ಶಾಸಕರೊಂದಿಗೆ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಂಕಲ್ಪಿಸಲಾಗಿದೆ.
ದಲಿತರು ಹಾಗೂ ಹಿಂದುಳಿದ ವರ್ಗಗಳ ಕುರಿತು ಕಾಳಜಿ ಇಲ್ಲದ ಕಾಂಗ್ರೆಸ್ ಶನಿವಾರ ನಡೆದ ಸಭೆಯಲ್ಲಿ ದಲಿತ ನಾಯಕರಾದ ಹೆಚ್.ಅಂಜನೇಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡದೆ ವೇದಿಕೆಯ ಮೂಲೆಗೆ ಸರಿಸಿತು. ಮೋದಿ ಬಂದರೂ ದುರ್ಗದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದ ಸಂಸದ ಚಂದಪ್ಪ ರಾವುಲ್ ಗಾಂಧಿ ಇದ್ದ ವೇದಿಕೆಯಲ್ಲಿ ಕಾಣಿಸಲೆ ಇಲ್ಲ. ಇದು ಕಾಂಗ್ರೆಸ್‍ನ ನಿಜವಾದ ಮುಖವಾಗಿದೆ ದಲಿತರು ಕಾಂಗ್ರೆಸ್ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.
ಆರೋಗ್ಯ ವಿಮೆ, ಜನ್‍ಧನ್‍ನಂತಹ ಹಲವಾರು ಜನಪರ ಯೋಜನೆಗಳನ್ನು ನೀಡುವ ಮೂಲಕ ಬಡವರ, ದಲಿತರ ಉದ್ದಾರಕ್ಕೆ ಮೋದಿ ಪ್ರಯತ್ನಿಸುತ್ತಿದ್ದಾರೆ. ದೇಶ ವಿಶ್ವದಲ್ಲಿ ಅಗ್ರ ಗಣ್ಯ ಸ್ಥಾನದಲ್ಲಿರ ಬೇಕಾದರೆ ಹಾಗೂ ಮೋದಿ ಮತ್ತೋಮ್ಮೆ ಪ್ರಧಾನಿಯಾಗ ಬೇಕಾದರೆ ಬಿಜೆಪಿ ಬೆಂಬಲಿಸಿ. ನನಗೆ ನೀಡುವ ಮತ ಮೋದಿಗೆ ನೀಡಿದಂತೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯ ಮೂಲಕ ಸ್ಥಳಿಯರಿಗೆ ಉದ್ಯೋಗ, ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಟಾನ, ಚಿತ್ರದುರ್ಗವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ದಿ ಮಾಡುವ ಕನಸಿದೆ. ಯುಪಿಎ ಪ್ರಧಾನಿಯಾಗಿ 10 ವರ್ಷ ದೇಶವಾಳಿದ ಮನಮೋಹನ ಸಿಂಗ್ ಬಾಯಿ ಮುಚ್ಚಿಸಿದ ಕಾಂಗ್ರೆಸ್ ದೇಶದ ಬಾಯಿಯನ್ನು ಮುಚ್ಚಿಸಿತ್ತು. ಅದರೆ 5 ವರ್ಷದಲ್ಲಿ ನರೇಂದ್ರ ಮೋದಿ ವಿಶ್ವದ 150 ರಾಷ್ಟ್ರಗಳು ಬಾರತದ ನಾಯಕತ್ವ ಒಪ್ಪಿಕೊಳ್ಳುವಂತೆ ಆಡಳಿತ ನಡೆಸಿದ್ದಾರೆ ಎಂದರು.
ಬಿಜೆಪಿ ರಾಜ್ಯ ರೈತ ಮೊರ್ಚ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ ಪ್ರೀತಿ ಅಭಿಮಾನಕ್ಕೆ ತಲೆಬಾಗುವ ನಾರಾಯಣ ಸ್ವಾಮಿ ಅನ್ಯಾಯಕ್ಕೆ ಸಿಡಿಯುವ ಗುಣ ಹೊಂದಿದ್ದಾರೆ. ನರೇಂದ್ರ ಮೋದಿ ಅವರ ಸಂಪುಟದಲ್ಲಿ ಚಿತ್ರದುರ್ಗಕ್ಕೆ ಪ್ರಾತಿನಿಧ್ಯ ದೊರಕಿಸಲು ಬಿಜೆಪಿಗೆ ಮತ ನೀಡಿ. ಜಿಲ್ಲೆಯಲ್ಲಿ 5ಜನ ಬಿಜೆಪಿ ಶಾಸಕರಿದ್ದು ಸಂಸದರು ಗೆದ್ದರೆ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರದಲ್ಲಿ ಮತ್ತೋಮ್ಮೆ ಮೋದಿ ಸರ್ಕಾರ ಬರುವುದು ಖಚಿತವಾಗಿದೆ ಎಂದರು.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ ಕಾಂಗ್ರೆಸ್‍ನ ದಬ್ಬಾಳಿಕೆ ರಾಜಕಾರಣದಿಂದ ನನ್ನನ್ನು 25 ಸಾವಿರ ಮತಗಳ ಅಂತರದಿಂದ ವಿಧಾನಸಭೆಗೆ ಕಳುಹಿಸಿದ ನೀವು ಬಿಜೆಪಿಗೆ ತಾಲೂಕಿನಿಂದ 1 ಲಕ್ಷ ಕ್ಕೂ ಹೆಚ್ಚು ಮತ ನೀಡಿ ನಾರಾಯಣ ಸ್ವಾಮಿಯನ್ನು ಗೆಲ್ಲಿಸಬೇಕು.
ಆರ್‍ಎಸ್‍ಎಸ್ ಮೂಲದಿಂದ ರಾಜಕಾರಣಕ್ಕೆ ಬಂದಿರುವ ನಾರಯಣ ಸ್ವಾಮಿ ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಜನಸಮಾನ್ಯರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ವ್ಯಕ್ತಿತ್ವ ಹೊಂದಿರುವ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗುವುದು ಖಚಿತ. ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ನಾರಾಯಣ ಸ್ವಾಮಿ ಗೆಲ್ಲ ಬೇಕಾಗಿದೆ ಎಂದರು.ಬಿಜೆಪಿ ತಾಲೂಕಾಧ್ಯಕ್ಷ ಡಿ.ಟಿ.ವಟ್ಟಿ ಲಕ್ಷ್ಮಣ್, ಜಿಲ್ಲಾ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್, ಜಿ.ಪಂ ಸದಸ್ಯ ಅಜ್ಜಪ್ಪ ಮಾಜಿ ಸದಸ್ಯ ಆರ್.ಹನುಮಂತಪ್ಪ, ದ್ವಾಮಪ್ಪ, ಪರಶುರಾಮಪ್ಪ, ಎಂ.ಲಕ್ಷ್ಮಣ್, ದಾಳಿಂಬೆ ಈಶ್ವರಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್ ಮತ್ತಿತರಿದ್ದರು.