ತಿಪಟೂರು
ಭತ್ತದ ಬೆಳೆಯಲ್ಲಿ ನೇರ ಕೂರಿಗೆ ಬಿತ್ತನೆ ತಾಂತ್ರಿಕತೆಯಿಂದ ರೈತರಿಗೆ ನೀರಿನ ಉಳಿತಾಯ ಹಾಗೂ ಭತ್ತದ ಸಾಗುವಳಿ ವೆಚ್ಚದಲ್ಲಿ ಗಣನೀಯವಾಗಿ ಉಳಿತಾಯವಾಗಲಿದ್ದು ರೈತರಿಗೆ ಬರಬಹುದಾದ ಲಾಭವು ಹೆಚ್ಚಾಗಲಿದೆ ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.
2018-19 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಆತ್ಮ ಯೋಜನೆಯಡಿ ನೊಣವಿನಕೆರೆ ಹೋಬಳಿಯ ಕೊನೇಗೌಡನಪಾಳ್ಯದ ಶ್ರೀ ಶ್ರೀನಿವಾಸ ಬಿನ್ ಕೊನೇಗೌಡರ ತಾಕಿನಲ್ಲಿ ಹಮ್ಮಿಕೊಂಡಿದ್ದ ಭತ್ತದ ಬೆಳೆಯಲ್ಲಿ ನೇರ ಕೂರಿಗೆ ಬಿತ್ತನೆ ಪ್ರಾತ್ಯಕ್ಷತೆ ಕಾರ್ಯಕ್ರಮದ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಸಿ ನಾಗೇಶ್ ಭತ್ತದ ಬೆಳೆಯಲ್ಲಿ ನೇರ ಕೂರಿಗೆ ಬಿತ್ತನೆ ತಾಂತ್ರಿಕತೆಯಿಂದ ರೈತರಿಗೆ ನೀರಿನ ಉಳಿತಾಯ ಹಾಗೂ ಭತ್ತದ ಸಾಗುವಳಿ ವೆಚ್ಚದಲ್ಲಿ ಗಣನೀಯವಾಗಿ ಉಳಿತಾಯವಾಗಲಿದ್ದು ರೈತರಿಗೆ ಬರಬಹುದಾದ ಲಾಭವು ಹೆಚ್ಚಾಗಲಿದೆ ಹಾಗೂ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಅಧಿಕ ಬಳಕೆ ಕೂಡ ಕಡಿಮೆಯಾಗಿ ಹೆಚ್ಚು ಪ್ರದೇಶವನ್ನು ನೀರಾವರಿ ಪದ್ದತಿಯಲ್ಲಿ ತರಲು ಸಹಕಾರಿಯಾಗಲಿದೆ ಎಂದು ರೈತರಿಗೆ ಕಿವಿ ಮಾತು ಹೇಳಿದರು ಅಲ್ಲದೆ ಈ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಈ ಪದ್ದತಿ ಮುಖೇನ ರೈತರು ಭತ್ತದ ಬೆಳೆ ಬೆಳೆಯಲು ಆಸಕ್ತಿ ವಹಿಸಬೇಕೆಂದು ಕರೆ ನೀಡಿದರು.
ತಿಪಟೂರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಸ್ವಾಮಿ ಮಾತನಾಡುತ್ತಾ ಸದರಿ ಪದ್ದತಿ ಅಳವಡಿಕೆ ಮುಖೇನ ಸಾಂಪ್ರದಾಯಿಕ ಪದ್ದತಿಯಲ್ಲಿ ಭತ್ತದ ಬೆಳೆ ಬೆಳೆಯಲು ತಗುಲುವ ವೆಚ್ಚ ಹಾಗೂ ಕೂಲಿ ಆಳಿನ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಿ ಅಧಿಕ ಲಾಭಗಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಭತ್ತದ ಬೆಳೆಯಲ್ಲಿ ನೇರ ಕೂರಿಗೆ ಬಿತ್ತನೆ ಮುಖೇನ ಶೇ 70 ರಷ್ಟು ನೀರಿನ ಉಳಿತಾಯದ ಮುಖೇನ ನೀರಿನ ಸದ್ಬಳಕೆ ಮಾಡಿ ಹೆಚ್ಚು ಪ್ರದೇಶವನ್ನು ನೀರಾವರಿಗೆ ತರಬಹುದಾಗಿದ್ದು ಮುಂದಿನ ದಿನಗಳಲ್ಲಿ ಈ ಪದ್ದತಿ ಮುಖೇನ ಭತ್ತದ ಬೆಳೆ ಬೆಳೆಯಲು ರೈತರಿಗೆ ಪ್ರೊತ್ಸಾಹಧನ ನೀಡಲು ಉದ್ದೇಶಿಲಾಗಿದೆ ಎಂದು ತಿಳಿಸಿದರು, ಹಾಗೂ ಸದರಿ ಪದ್ದತಿಗೆ ತಾಂತ್ರಿಕ ಮಾಹಿತಿಯನ್ನು ಕೃಷಿ ಇಲಾಖೆ ಮುಖೇನ ಒದಗಿಸಲಾಗುವುದು ಹಾಗೂ ಅಗತ್ಯವಾದ ಕೃಷಿ ಯಂತ್ರೋಪಕರಣಗಳನ್ನು ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಮುಖೇನ ಒದಗಿಸಲಾಗುವುದು ಎಂದು ತಿಳಿಸಿದರು.
ಸದರಿ ಪದ್ದತಿ ಅಳವಡಿಸಿಕೊಂಡಿದ್ದ ರೈತರಾದ ಶ್ರೀನಿವಾಸ ಬಿನ್ ಕೊನೇಗೌಡ ಮಾತನಾಡುತ್ತಾ ಕಡಿಮೆ ನೀರಿನ ಬಳಕೆಯಿಂದ ಭತ್ತದ ಬೆಳೆ ಬೆಳೆಯಬಹುದಾಗಿದ್ದು ಕಳೆ ನಿರ್ವಹಣೆ ಕೂಡ ಸರಳವಾಗಿದ್ದು ಎಲ್ಲಾ ರೈತರು ಅಳವಡಿಸಿಕೊಂಡರೆ ಹೆಚ್ಚಿನ ಪ್ರದೇಶದಲ್ಲಿ ಭತ್ತವನ್ನು ಬೆಳೆದು ರೈತರು ಹೆಚ್ಚಿನ ಲಾಭವನ್ನು ಪಡೆಯಬಹುದೆಂದು ನೆರೆದಿದ್ದ ರೈತರಿಗೆ ತಿಳಿಸಿದರು.
ಈ ಪದ್ದತಿಯ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಾದ ಶ್ರೀ ಮಹೇಶ್ ಸಂ ನೀಲಗಾರ್ ರವರು ನೀಡಿದರು ಹಾಗೂ ಉಸ್ತುವಾರಿಯನ್ನು ರೈತ ಸಂಪರ್ಕ ಕೆಂದ್ರದ ಮುಖ್ಯಸ್ಥರಾದ ಹೆಚ್. ಚನ್ನಕೇಶವಮೂರ್ತಿ ರವರು ವಹಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಬಿ.ಜಿ ಜಯಪ್ಪ , ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಕೆ ಆರ್ ಶ್ರೀನಿವಾಸ್ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ನಾಗರಾಜ್ ಹಾಜರಿದ್ದರು.