ಕೊಟ್ಟೂರು:
ಪಟ್ಟಣದ ದೇವಸ್ಥಾನದ ಎದುರಿಗಿರುವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಣಿಪಾಲ ಆರೋಗ್ಯ ಕಾರ್ಡ ಅಭಿಯಾನವನ್ನು ಬುಧವಾರದಂದು ಮಾರ್ಕೇಟಿಂಗ್ ವಿಭಾಗದ ಡಾ. ಮೋಹನ್‍ಶೆಟ್ಟಿ ಉದ್ಘಾಟಿಸಿ ಮಾತನಾಡಿದ ಅವರು ಈ ವರ್ಷ ಆರೋಗ್ಯ ಕಾರ್ಡಿನ ಜೊತೆಗೆ ಮಣಿಪಾಲ ದಂತ ಆರೋಗ್ಯ ಕಾರ್ಡನ್ನು ಉಚಿತವಾಗಿ ಕೊಡಲಾಗುವುದು ಎಂದರು.
ಕಸ್ತೂರಿ ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಸದಸ್ಯತ್ವದ ಶುಲ್ಕದ ರೂಪದಲ್ಲಿ ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಎಲ್ಲರು ಕೂಡಾ ಈ ಯೋಜನೆಯ ಸದಸ್ಯರಾಗಬಹುದು. ಈ ಕಾಡ್‍ನ್ನು ಕೇವಲ ಎರಡು ಅಥವಾ ಮೂರು ಬಾರಿ ಉಪಯೋಗಿಸಿದರೆ ತಾವು ವ್ಯಯಿಸಿರುವ ಹಣವನ್ನು ರಿಯಾಯಿತಿ ರೂಪದಲ್ಲಿ ಹಿಂಪಡೆಯಬಹುದು ಎಂದರು.
ಸದಸ್ಯತ್ವದ ಅಭಿಯಾನವು ಈಗಾಗಲೇ ಆರಂಭವಾಗಿದ್ದು 31 ಜುಲೈ 2019ಕ್ಕೆ ಮುಕ್ತಾಯವಾಗುತ್ತದೆ. 31 ಜುಲೈ 2019ರ ಒಳಗೆ ನೋಂದಾಯಿತರಾದ ಸದಸ್ಯರಿಗೆ 01 ಅಗಸ್ಟ್ 2019 ರಿಂದ ಆರಂಭಿಸಿ 31 ಜುಲೈ 2020ರವರೆಗೆ ಸೌಲಭ್ಯ ಲಭಿಸುತ್ತದೆ ಎಂದು ತಿಳಿಸಿದರು.
ರವಿಕಿರಣ ಪೈ ವ್ಯವಸ್ಥಾಪಕರು ಸೇವೆಗಳ ಬಗ್ಗೆ ಮಾತನಾಡುತ್ತಾ ಕೇವಲ 50% ಸಂದರ್ಶನ ಶುಲ್ಕ ಪಾವತಿಸಿ ನುರಿತ ಮತ್ತು ತಜ್ಞ ವೈದ್ಯರನ್ನು ವರ್ಷದಲ್ಲಿ ಎಷ್ಟು ಬಾರಿಯಾದರು ಭೇಟಿಯಾಗಬಹುದು. ಈ ಕಾರ್ಡಿನಿಂದ ಹೊರರೋಗಿಳಿಗೆ ಲಭಿಸುವ ಆಕರ್ಷಕ ಪ್ರಯೋಜಗಳಲ್ಲಿ ಒಂದು ಪ್ರಯೋಗಾಲಯ ಶುಲ್ಕದಲ್ಲಿ 25% ರಿಯಾತಿ ಇದ್ದು ರೋಗಿಗಳಿಗೆ ಇದರಿಂದ ಹೆಚ್ಚು ಪ್ರಯೋಜನ ಲಭಿಸುತ್ತದೆ.
ಜನರಲ್ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾವ ವಸ್ತುವನ್ನು ಹೊರತುಪಡಿಸಿ ಅವರ ಬಿಲ್ಲಿನ ಮೊತ್ತದ ಮೇಲೆ 25% ರವರೆಗೆ ರಿಯಾಯಿತಿ ಲಭ್ಯವಿದೆ. ಅಲ್ಲದೇ ಔಷದಿ ಚೀಟಿಯೊಂದಿಗೆ ಆಸ್ಪತ್ರೆ ಔಷಧಾಲಯದಲ್ಲಿ ಖರೀದಿಸುವ ಔಷದಿಗಳ ಮೇಲೆ 10% ರವರೆಗೆ ರಿಯಾಯಿತಿ ದೊರೆಯುತ್ತದೆ ಎಂದರು.
ಡಾ. ಕೊಟ್ರೇಶ ಮಾತನಾಡಿ ಒಬ್ಬರಿಗೆ ಸದಸ್ಯತ್ವದ ಶುಲ್ಕ ರೂ. 250/- ಆಗಿದು, ಕುಟುಂಬ ಕಾರ್ಡಿಗೆ ರೂ. 500/- ಆಗಿರುತ್ತದೆ, ಕುಟುಂಬ ಎಂದರೆ ಕಾರ್ಡ್‍ದಾರರು ಪತಿ/ಪತ್ನಿ ಮತ್ತು 25 ವರ್ಷದ ಒಳಗಿನ ಮದುವೆಯಾಗದ ಮತ್ತು ಅವಲಂಬಿತ ಮಕ್ಕಳು. ಪ್ರಾಥಮಿಕ ಕಾರ್ಡದಾರರ ಹೆತ್ತವರನ್ನು ಮತ್ತು ಅತ್ತೆ ಮಾವ ಈ ಯೋಜನೆಯಡಿ ತರಬೇಕೆಂದರೆ ಕೌಟುಂಬಿಕ 1 ಕಾರ್ಡ್ ರೂ. 650 ಹಾಗೂ ಇಬ್ಬರೂ ಪೋಷಕರಿಗೆ ಕೌಟುಂಬಿಕ 2 ಕಾರ್ಡ್ ರೂ. 850/- ಶುಲ್ಕ ಅನ್ವಯವಾಗುತ್ತದೆ. ನವೀಕರಣ ಮಾಡಿಸುವ ಕಾರ್ಡುಗಳಿಗೆ ಸದಸ್ಯತ್ವ ಶುಲ್ಕ ಒಬ್ಬರಿಗೆ ರೂ. 220/- ಕುಟುಂಬಕ್ಕೆ ರೂ.460/- ಕೌಟುಂಬಬಿಕ 1 ಕಾರ್ಡ್ ರೂ. 560/- ಕವಟುಂಬಿಕ 2 ಕಾರ್ಡ್ ರೂ. 660/- ಶುಲ್ಕ ಅನ್ವಯವಾಗುತ್ತದೆ ಎಂದು ಹೇಳಿದರು.
ಇದೀಗ ಕೊಟ್ಟೂರಿನಲ್ಲಿ ಒಂದು ವರ್ಷದಿಂದ ಮಣಿಪಾಲ ಆಸ್ಪತ್ರೆಯ ಸೇವಾ ಹಾಗೂ ಚಿಕಿತ್ಸೆ ಇತರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಡಾ. ಕೊಟ್ರೇಶ್ ಸ್ವಸ್ತಿಕ್ ಕೊಟ್ಟೂರೇಶ್ವರ ಹಿರೇಮಠದ ದೇವಸ್ಥಾನ ಮುಂಭಾಗ ಇಲ್ಲಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗುವವರಿಗೆ ಮುಂಗಡ ನೊಂದಣೆಯ ವ್ಯವಸ್ಥೆಯನ್ನು ಕಲ್ಪಿಸಿತ್ತಿದ್ದಾರೆ. ಇದರ ಸದುಪಯೋಗವನ್ನು ಕಾರ್ಡ್‍ದಾರರು ಪಡೆಯಲು ತಿಳಿಸಿಲಾಗಿದೆ.
ಈ ಸಂದರ್ಭದಲ್ಲಿ ಎಂ.ಎಂ.ಜೆ.ಸ್ವರೂಪಾನಂದ ವಕೀಲರು ಕೊಟ್ಟೂರು, ಪಟ್ಟಣ ಪಂಚಾಯಿತಿ ಸದಸ್ಯರು ಈಶ್ವರಗೌಡ್ರು , ದೇವರಮನಿ ಕರಿಯಪ್ಪ ಚಿಕ್ಕೇನೆಕೊಪ್ಪ ಶಿವಶರಣರ ಬಳಗ ಕೊಟ್ಟೂರು, ಡಾ. ಮರುಳಸಿದ್ದನಗೌಡ್ರು ಮುಂತಾದವರು ಉಪಸ್ಥಿತರಿದ್ದರು. ಡಾ. ಕೊಟ್ರೇಶಿ ಸ್ವಾಗತಿಸಿ ವಂದಿಸಿದರು.