ದೇಶದ ಅಭಿವೃದ್ದಿ ರಕ್ಷಣೆಗೆ ಮತ್ತೊಮ್ಮೆ ಮೋದಿ: ನಾರಾಯಣಸ್ವಾಮಿ

ಹೊಸದುರ್ಗ:

        ದೇಶಾದ್ಯಂತ ಎಲ್ಲ ಯುವಕರ ನಾಡಿ ಮಿಡಿತ ಮೋದಿ ಎಂದು ಕರೆಯುತ್ತಿದ್ದು ದೇಶದ ಅಭಿವೃದ್ದಿ ರಕ್ಷಣೆಗೆ ಮತ್ತೊಮ್ಮೆ ಮೋದಿ ಎಂದು ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ರಾಧ ಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

         ನರೇಂದ್ರ ಮೋದಿಯವರು ಈ ದೇಶದ ಅನೇಕ ದಲಿತರ, ಹಿಂದುಳಿದವರ, ಮೇಲ್ವಾರ್ಗದ ಸಮಸ್ಯೆಗಳಿಗೆ ಸ್ಪಂದಿಸಿದವರು. ಗಾರ್ಮೆಟ್ಸ್ ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 3 ಸಾವಿರ ಪೇಂಕ್ಷೇನ್ ವ್ಯವಸ್ಥೆ, ಈ ದೇಶದ ಜನಗಳಿಗೆ 10 ಕೋಟಿ ಚೌಚಾಲಯ ವ್ಯವಸ್ಥೆ, ಬಡವರಿಗೆ ಉಚಿತವಾಗಿ ಪಾಸ್, ಹದಿನೆಂಟು ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿದ್ದನ್ನು ಮೋದಿಯವರು ಎಲ್ಲಿಯೂ ಹೇಳಿಕೊಂಡಿಲ್ಲ ಎಂದರು.

         ನಿಮ್ಮ ಶಾಸಕರನ್ನು 25 ಸಾವಿರ ಮತದ ಹಂತದಿಂದ ಗೆಲ್ಲಿಸಿದ್ದೀರಾ, 5 ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಸ್ವತ್ವ ಆಡಳಿತ ನೀಡಿದ್ದೇವೆ, ಅದಕ್ಕಾಗಿ ಜನರ ಬಳಿ ಎದೆ ತಟ್ಟಿ ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಹೊಸದುರ್ಗದಲ್ಲಿ ಬಿಜೆಪಿ ಬರಬೇಕಾದರೆ ಹಗಲಿರುಳು ಕಾರ್ಯಕರ್ತರ ಸೇವೆಯಿಂದ ಬಂದಿದ್ದು. ಈ ಲೋಕಸಭಾ ಚುನಾವಣೆ ನಾರಾಯಣಸ್ವಾಮಿ, ಅಧ್ಯಕ್ಷರ, ಶಾಸಕರ ಚುನಾವಣೆಯಲ್ಲ ವಿಶ್ವ ಮಾತೆಯ ಸುಪುತ್ರನಿಗಾಗಿ ಚುನಾವಣೆ ಎಂದು ಹೇಳಿದರು.

         ವ್ಯಕ್ತಿ, ಪಕ್ಷ ಮುಖ್ಯವಲ್ಲ ಮೋದಿಗಾಗಿ ಬಿಜೆಪಿ ಎಂದು ಎಲ್ಲೆಡೆ ಕೇಳಿ ಬರುತ್ತಿದೆ. ಆದ್ದರಿಂದ ಮೋದಿಯವರ 5 ವರ್ಷಗಳ ಜನಪರ ಯೋಜನೆಗಳನ್ನು ಕಾರ್ಯಕರ್ತರು ಮತದಾರರಿಗೆ ಅರಿವು ಮೂಡಿಸಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದರು.
ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ ವಿಧಾನಸಭೆ ಚುನಾವಣೆಯ ಅಸೆಂಬ್ಲಿಯಲ್ಲಿ 92 ಸಾವಿರ ಹಂತದಿಂದ ಮತಗಳನ್ನು ಕೊಟ್ಟಿದ್ದೇವೆ ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ 70ರಷ್ಟು ಬಿಜೆಪಿ ಗೆಲುವಿಗೆ ಶ್ರಮಿಸೋಣ. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ಸಾರವನ್ನು ಸಾರೋಣ ಎಂದರು.

         ಮೋದಿಯವರ ಬಗ್ಗೆ ನಾವು ಹೇಳಬೇಕಾಗಿಲ್ಲ, ಪ್ರತಿಯೊಂದು ಹಳ್ಳಿಗಳಲ್ಲಿ 25ರಿಂದ 30 ಜನ ಯುವಕರು ಮೋದಿ ಆಗಿದ್ದಾರೆ. ಪಾಕಿಸ್ತಾನವನ್ನು ಸದೆ ಬಡೆಯಲು ಸರ್ಜಿಕಲ್ ಸ್ಟ್ರೈಕ್ ಮಾಡಿಸಿ ದೇಶದ ಸೈನಿಕರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವವರು ನರೇಂದ್ರ ಮೋದಿಯವರು. ದೇಶದ ಹಿಂದೂಸ್ತಾನ ಐಕ್ಯತೆಯ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕು ಎಂದರು.

          ಶಾಸಕ ಗೂಳಿಹಟ್ಟಿ ಡಿ ಶೇಖರ್ ಮಾತನಾಡಿ ನಾರಾಯಣಸ್ವಾಮಿಯವರು ಮಾತಿನಲ್ಲಿಯೂ, ಕೆಲಸದಲ್ಲಿಯೂ ಹುಲಿಯಾಳು ನಿಮ್ಮ ಕೆಲಸವು ಏನೇ ಇದ್ದರೂ ನಾನು ಬೇಕಾಗುವುದಿಲ್ಲ ನೀವೇ ಹೋಗಬಹುದು ಅವರು ನಿಮ್ಮ ಕೆಲಸಗಳನ್ನು ತಕ್ಷಣ ಮಾಡಿಕೊಡುತ್ತಾರೆ ಎಂದರು.

          ಹೊಸದುರ್ಗದಲ್ಲಿ 1 ಲಕ್ಷ 25 ಸಾವಿರ ಮತಗಳ ಹಂತದಿಂದ ಬಿಜೆಪಿ ಗೆಲ್ಲಿಸುತ್ತೇವೆಂದು ಮಾಜಿ ಸಿಎಂ ಯಡಿಯೂರಪ್ಪನವರಿಗೆ ಮಾತು ಕೊಟ್ಟಿದ್ದೇವೆ ಅದಕ್ಕಾಗಿ ನಿಮ್ಮ ಸಹಕಾರ ನಮಗೆ ನೀಡಬೇಕು. ಕಾರ್ಯಕರ್ತರಲ್ಲಿ ನಾನು ಮನವಿ ಮಾಡುತ್ತೇನೆ ಈ ಬಾರಿ ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಗೆ ಹೆಚ್ಚು ಅಧಿಕ ಮತಗಳ ಹಂತದಿಂದ ಗೆಲ್ಲಿಸೋಣ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಬಿಜೆಪಿಗೆ ನೀಡೋಣ ಎಂದು ಕಾರ್ಯಕರ್ತರಿಗೆ ಹೇಳಿದರು.

         ಇದೇ ವೇಳೆ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಿಟಿವಟ್ಟಿ ಲಕ್ಮಣ್, ಬಿಜೆಪಿ ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ್, ಗುರುಸ್ವಾಮಿ, ಅಜ್ಜಪ್ಪ, ಮಂಜುನಾಥ್, ಹಾಗೂ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರುಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link