ರೈತರಿಗೆ ಟಾರ್ಪಲ್ ವತರಣೆ

ತುರುವೇಕೆರೆ:

     ಸರ್ಕಾರ ನೀಡುತ್ತಿರುವ ಸಬ್ಸಿಡಿ ದರದ ಕೃಷಿ ಉಪಕರಣಗಳನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಸಂಪಿಗೆ ತಾಲೂಕು ಪಂಚಾಯಿತಿ ಸದಸ್ಯ ರವಿಕುಮಾರ್ ಸಲಹೆ ನೀಡಿದರು.

      ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ತಾಲೂಕು ಪಂಚಾಯಿತಿ ಅನುದಾನ, ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ಹತ್ತಾರು ರೈತರಿಗೆ ಕೃಷಿ ಉಪಕರಣಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

       ಈ ಬಾರಿ ‘ಗುಚ್ಛಗ್ರಾಮ’ ಯೋಜನೆಯಡಿ ಕುರುಬರಹಳ್ಳಿ ಬ್ಯಾಲ್ಯಾ ಕಾಲೋನಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿನ ಪರಿಶಿಷ್ಟ ಜಾತಿಯ ರೈತರು ಶೇ. 90 ರಷ್ಟು ರಿಯಾಯಿತಿ ದರದಲ್ಲಿ ಅಂದರೆ ಕೇವಲ 548 ರೂಪಾಯಿಗಳನ್ನು ಮಾತ್ರ ನೀಡಬೇಕಿದೆ. ಅವರಿಗೆ ಟಾರ್ಪಾಲ್, ಔಷಧಿ ಸಿಂಪಡಣಾ ಯಂತ್ರ, ದಾಸ್ತಾನು ಕಣಜಗಳನ್ನು ನೀಡಲಾಗುತ್ತಿದೆ. ರೈತರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕುಮಾರ್ ಹೇಳಿದರು.

      ರೈತರಾದ ಮಾಯಣ್ಣ, ತಾತಯ್ಯ, ವೆಂಕಟರಾಮಯ್ಯ, ಚಿಕ್ಕಮೂಡಲಯ್ಯ, ತಿರುಮಲಯ್ಯ, ಸಣ್ಣತಿಮ್ಮಯ್ಯ, ಮರಿಯಮ್ಮ, ಕರಿಯಪ್ಪ, ಹುಚ್ಚಮ್ಮ ರೈತರಿಗೆ ಕೃಷಿ ಉಪಕರಣಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಂಡಿನಶಿವರ ಸಹಾಯಕ ಕೃಷಿ ಅಧಿಕಾರಿ ಆರ್.ನಟರಾಜು ಮತ್ತು ರೈತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap