ಬೆಂಗಳೂರು
ನಗರದಲ್ಲಿ ಆಟೋ ಚಾಲಕನೊಬ್ಬನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದು ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ.
ದಾಳಿ ನಡೆಸಿದ ಆಟೋ ಚಾಲಕ ಸುಬ್ರಮಣಿಯ ಖರೀದಿಸಿದ್ದ ವಿಲ್ಲಾ ನೋಡಿ ಐಟಿ ಅಧಿಕಾರಿಗಳೂ ಶಾಕ್ ಆಗಿದ್ದಾರೆ.ಆಟೋ ಚಾಲಕನಾಗಿದ್ದರೂ ಶ್ರೀಮಂತಿಕೆಯ ಜೀವನ ಸಾಗಿಸುತ್ತಾ ಅಕ್ರಮ ಆಸ್ತಿ-ಪಾಸ್ತಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಕಳೆದ ಏ. 16ರಂದು ಮೂವರು ಐಟಿ ಅಧಿಕಾರಿಗಳ ತಂಡ ವೈಟ್ ಫೀಲ್ಡ್‍ನ ಸುಬ್ರಮಣಿ ಐಷಾರಾಮಿ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಅಂದು ಬೆಳಗ್ಗೆ 10.30ಕ್ಕೆ ಬಂದ ಅಧಿಕಾರಿಗಳು ಮಧ್ಯಾಹ್ನ 2:30 ರವರೆಗೆ ದಾಖಲೆಗಳ ಪರಿಶೀಲನೆ ನಡೆಸಿ ದಾಖಲೆಗಳ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳಿಂದ ಸೂಚನೆ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್ ನೀಡಿ ತೆರಳಿದ್ದಾರೆ.
ಅಲ್ಲದೆ ಸಿಕ್ಕಿರುವ ದಾಖಲೆಗಳ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಿದ್ದಾರೆ.ಸುಬ್ರಮಣಿ ಅವರ ಬಳಿ ಶಾಸಕ ಅರವಿಂದ ಲಿಂಬಾವಳಿ ಅವರ ಜೊತೆಗಿನ ಪೋಟೋಗಳು ದೊರೆತಿವೆ.ಸುಬ್ರಮಣಿ ಮೇಲ್ಮೋಟಕ್ಕೆ ಆಟೋ ಚಾಲಕನಾಗಿ ಕರ್ತವ್ಯನಿರ್ವಹಿಸುತ್ತಿದ್ದು ಹಲವು ರಾಜಕಾರಣಿಗಳಿಗೆ ಆಪ್ತನಾಗಿದ್ದಾನೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ