ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರು ಪೈಪ್‍ಗೆ ಕನ್ನ 12ಕ್ಕೂ ಹೆಚ್ಚು ಅಕ್ರಮ ನಳಗಳ ಸಂಪರ್ಕ ಪತ್ತೆ

ಹಗರಿಬೊಮ್ಮನಹಳ್ಳಿ

     ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎನ್ನುವ ದೂರು ಒಂದು ಕಡೆ, ನೀರು ಸರಬರಾಜು ಆಗುತ್ತಿರುವ ಪೈಪ್‍ಲೈನ್‍ಗೆ ಕನ್ನ ಹಾಕಿ ಅಕ್ರಮವಾಗಿ ಇಷ್ಟುವರ್ಷ ನೀರು ಬಳಕೆಮಾಡಿಕೊಳ್ಳುತ್ತಿದ್ದ 12ಕ್ಕೂ ಹೆಚ್ಚು ಮನೆಗಳ ಕಳ್ಳತನ ಬಯಲಿಗೆ ಬಂದ ಘಟನೆ ಸೋಮವಾರ ಜರುಗಿತು.

     ತಾಲೂಕಿನ ಕಡಲಬಾಳು ಗ್ರಾ.ಪಂ.ವ್ಯಾಪ್ತಿಯ ಬ್ಯಾಲಾಳ್ ಗ್ರಾಮಕ್ಕೆ ನೀರು ಸರಬರಾಜು ಮಾಡಲು, ಪಟ್ಟಣದ ಸರ್ಕಾರಿ ಜೂನಿಯರ್ ಕಾಳೇಜ್ ಆವರಣದಲ್ಲಿ ಕೊರೆಸಲಾಗಿರುವ ಕೊಳವೆಬಾವಿಯಿಂದ, ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯ ಕಡಲಬಾಳು ಗ್ರಾಮಕ್ಕೆ ತೆರಳುವ ದಾರಿಯಲ್ಲಿ ಎಡಬದಿಯಲ್ಲಿ ನಿರ್ಮಾಣವಾಗಿರುವ ಹೊಸ ಹೌಸಿಂಗ್‍ಬೋರ್ಡ್ ಕಾಲೂನಿಯ ಮೂಲಕ ಪೈಪ್‍ಲೈನ್ ಆದು ಹೋಗಿದ್ದು, ಈ ಕಾಲೂನಿನ 12ಕ್ಕೂ ಹೆಚ್ಚು ಮನೆಗಳ ಮಾಲೀಕರು ಸರಬರಾಜು ಆಗುತ್ತಿದ್ದ ಪೈಪ್‍ಲೈನಿಂದ ಅಕ್ರಮವಾಗಿ ನೀರು ಕದಿಯುತ್ತಿದ್ದಾರೆ

      ಎನ್ನುವ ದೂರಿನ ಮೇರೆಗೆ ಕಾಲೂನಿಗೆ ಭೇಟಿ ನೀಡಿದ ಪಿಡಿಒ ಮಲ್ಲನಗೌಡ ಒಂದು ಬಾರಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಗ್ರಾ.ಪಂ.ಯಲ್ಲಿ ಕಾರ್ಯನಿರ್ವಹಿಸುತ್ತಿದ ಪಿಡಿಒ ರಾಘವೇಂದ್ರ ಕೂಡ ಇವರಿಗೆ ಎಚ್ಚರಿಕೆ ನೀಡಿದ್ದು ನೀವು ಪುರಸಭೆಯಿಂದ ನಳಗಳ ಸಂಪರ್ಕ ತೆಗೆದುಕೊಳ್ಳಿ ಎಂದಿದ್ದರು. ಆದರೂ ಮನೆಗಳ ಮಾಲೀಕರು ನಿರ್ಲಕ್ಷ್ಯದಿಂದ ವರ್ತಿಸಿ, ನೀರು ಕದಿಯುವುದನ್ನು ಬಿಡಲಿಲ್ಲ. ಇದು ನಿರಂತರ ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ಬ್ಯಾಲಾಳು ಗ್ರಾಮದ ಯುವಕರು ಆರೋಪಿಸುತ್ತಾರೆ.

ದೂರಿನ ಮೇರೆಗೆ ತನಿಖೆ: ಕಳೆದ ಎರಡು ವರ್ಷಗಳ ಹಿಂದೆ ಕಡಲಬಾಳು ಗ್ರಾ.ಪಂ.ಗೆ ವರ್ಗವಾಗಿ ಬಂದಿದ್ದ ಪಿ.ಡಿ.ಒ ಮಲ್ಲನಗೌಡ, ಅಕ್ರಮ ನಳಗಳ ಸಂಪರ್ಕ ಹೊಂದಿದವರಿಗೆ ಮುನ್ನೆಚ್ಚರಿಕೆ ನೀಡಿದ್ದರು. ಅಲ್ಲದೆ, ಯುವಕರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಕಾಲೂನಿಗೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಅಕ್ರಮವಾಗಿ ಸಂಪರ್ಕಹೊಂದಿದ್ದ ಎಚ್.ಅಕ್ಕಮ್ಮ, ರಾಘವೇಂದ್ರ, ನಿವೃತ್ತ ಕೆಇಬಿ ನೌಕರ ವೀರಣ್ಣ ಮತ್ತು ಪುರಸಭೆಯ ನೌಕರ ಭೀಮಪ್ಪ ವಾಸವಾಗಿದ್ದ ಮನೆಗಳು ಸೇರಿದಂತೆ ಅನೇಕ ಮನೆಗಳ ನಳಗಳನ್ನು ಪರಿಶೀಲನೆಮಾಡಿದಾಗ ಒಂದಿಚ್ಚು ದಪ್ಪದ ಪೈಪ್‍ಗಳ ಅಳವಡಿಕೆ ಬಯಲಿಗೆ ಬಂದಿತು.

     ಇದನ್ನು ಕಂಡ ಅಧಿಕಾರಿವರ್ಗ ಆಶ್ಚರ್ಯ ವ್ಯಕ್ತಪಡಿಸಿ, ಬ್ಯಾಲಾಳ್ ಗ್ರಾಮಕ್ಕೆ ನೀರಿಲ್ಲ ಎಂದು ಸಮಸ್ಯೆ ಎದುರುಸುತ್ತಿದ್ದರೆ, ಇವರು ಎರಡೆರಡು ಟ್ಯಾಂಕರ್ ತುಂಬುವಷ್ಟು ಸಂಪಗಳನ್ನು ಅಕ್ರಮವಾಗಿ ತುಂಬಿಕೊಂಡು ನಿಶ್ಚಿಂತೆಯಿಂದ ಇದ್ದಾರೆ ಎಂದು ಉಬ್ಬೇರಿಸಿದರು. ಅಕ್ರಮವಾಗಿ ಸಂಪರ್ಕಹೊಂದಿದ ನಳಗಳನ್ನು ಕಟ್‍ಮಾಡಿ ಮತ್ತೇ ಇದೇ ತಪ್ಪು ಮಾಡಿದರೆ ಮುಂದೆ ಉಗ್ರಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಪಿಡಿಒ ಮಲ್ಲನಗೌಡ ಎಚ್ಚರಿಸಿದರು. ಇಷ್ಟೇ ಅಲ್ಲದೆ, ಬ್ಯಾಲಾಳ್ ಗ್ರಾಮದ ಊರ ಹೊರಗೆ ವಾಸವಾಗಿರುವ ಕೆಲವರು ಮಲ್ಲಿಗೆ ತೋಟಕ್ಕೆ ನಳಗಳ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪಗಳು ಘಟನಾ ಸ್ಥಳದಲ್ಲಿ ಕೇಳಿಬಂದವು.

     ಈ ಸಂದರ್ಭದಲ್ಲಿ ಕಡಲಬಾಳು ಮತ್ತು ಬ್ಯಾಲಾಳ್ ಗ್ರಾಮಗಳ ಯುವ ಮುಖಂಡರಾದ ಕೆ.ರವಿ, ಆಟೋ ಹುಲುಗಪ್ಪ, ನಿಂಗಪ್ಪ, ವಿರುಪಾಕ್ಷಿ, ಎಂ.ರಾಮಪ್ಪ, ಮಲ್ಲಿಕಾರ್ಜುನ, ಮಂಜುನಾಥ ಮತ್ತು ಸಿಬ್ಬಂದಿಯವರು ಇದ್ದರು. ಇಷ್ಟು ವರ್ಷಗಳಿಂದ ಹೊಸ ಹೌಸಿಂಗ್‍ಬೋರ್ಡ್‍ನಲ್ಲಿ ವಾಸವಾಗಿರುವವರು ನೀರಿನ ಸಂಪರ್ಕ ಬಳಸುತ್ತಿದ್ದಾರೆ ಎಂದು ಪುರಸಭೆಯವರು ಪರಿಶೀಲನೆಮಾಡಿಲ್ಲ. ಕಡಲಬಾಳು ಗ್ರಾ.ಪಂ.ಯವರು ಮೊದಲೇ ಕ್ರಮ ಕೈಗೊಂಡಿಲ್ಲ ಎಂದು ಕರವೇ ಸದಸ್ಯ ಬ್ಯಾಲಾಳ್ ವಿಶ್ವನಾಥ ಸ್ವಾಮಿ ಆರೋಪಿಸಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link