ಹಾವೇರಿ :
ಚುನಾವಣೆಯಲ್ಲಿ ಕಾಂಗ್ರೆಸ್ ನವರಿಂದ ದುಡ್ಡು ಹೊಡೆದು ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟರು.ನಾನು ಆಯ್ಕೆಯಾದ ನಂತರ ನಮ್ಮೆಲ್ಲ ಕೆಲಸಗಳಿಗೆ ಜಿಲ್ಲಾಧ್ಯಕ್ಷರಿಂದ ವಿರೋಧ ಉಂಟು ಮಾಡುತ್ತಾ ಬರುತ್ತಿದ್ದಾರೆ.ನಾನು ಗೆದ್ದ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಸಜ್ಜನ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಸ್ವಪಕ್ಷೀಯ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ವಿರುದ್ಧ ಶಾಸಕ ನೆಹರೂ ಓಲೇಕಾರ ಎಂದು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಕ್ಷದ ಕಾರ್ಯಕ್ರಮಗಳಿಗೆ ಫೋನ್ ಮಾಡಿ ಕರೆಯುವಷ್ಟು ಸೌಜನ್ಯವಿಲ್ಲ.ದಿಂಗಾಲೇಶ್ವರ ಸ್ವಾಮೀಜಿ ರಾಜಕಾರಣಕ್ಕೆ ಬರುವುದಿಲ್ಲ.ನಾವ್ಯಾರು ಸ್ವಾಮೀಜಿ ಅವರಿಗೆ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಹೇಳಿಲ್ಲ.ವಿನಾಕಾರಣ ಜಿಲ್ಲಾಧ್ಯಕ್ಷರು ಸ್ವಾಮೀಜಿ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ.ಸಜ್ಜನ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು.ಮತಿಭ್ರಮಣೆ ಆದವರಂತೆ ಮಾತನಾಡುವುದು ಬಿಟ್ಟು ಸರಿಯಾಗಿ ಮಾತನಾಡಬೇಕು.ನಾನು ಗೆದ್ದರೆ ಅವರ ಆಟ ನಡೆಯೋದಿಲ್ಲ ಅಂತಾ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದರು. ನಾನು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ.
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಶಾಸಕ ಓಲೇಕಾರ ಆರೋಪಿಸದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ