ತಿಪಟೂರು
ರಾಷ್ಟ್ರೀಯ ಹೆದ್ದಾರಿ-206ರ ರಸ್ತೆ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ರೈತರಿಗೆ ಸಮಾಧಾನಕರವಾಗುವಂತೆ, ನಷ್ಟವಾಗದಂತೆ ಪರಿಹಾರ ನೀಡಬೇಕು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ 206ರ ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿಯ ಮುಂದೆ ದಿನಾಂಕ : 11-01-208ರಿಂದ ರೈತರು ಧರಣಿ ನಡೆಸುತ್ತಿದ್ದಾರೆ.
‘ರಾಷ್ರ್ಟೀಯ ಹೆದ್ದಾರಿ-206 ಸಂತ್ರಸ್ತರ ಹೋರಾಟ ಸಮಿತಿ’ ಈ ಯೋಜನೆಯು 1 ಕಿ.ಮಿಗೆ 30 ಕೋಟಿ ಖರ್ಚುಮಾಡುತ್ತಿದ್ದು ಇದು ಬಂಡವಾಳಗಾರರ ಬೊಕ್ಕಸ ತುಂಬಿಸಿಕೊಳ್ಳಲು ಮಾತ್ರ ಅನುಕೂಲವಾಗಿದೆ. ಆದರೆ ಇದಕ್ಕಾಗಿ ರೈತರು ತಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಇದು ಕೇವಲ ಪಬ್ಲಿಕ್ ಪ್ರವೈಟ್ ಪ್ರಾಪರ್ಟಿ ಎಚಿದು ಮಾಡಿ ಇದರಿಂದ ಸಾವಿರಾರು ರೂಗಳನ್ನು ಟೋಲ್ ಮುಖಾಂತರ ಸಂಗ್ರಹಿಸುತ್ತಾರೆ.
ಆದರೆ ಇದಕ್ಕಾಗಿ ರೈತು ತಮ್ಮ ಹೊಲ-ಗದ್ದೆ, ತೋಟ-ತುಡಿಕೆ, ಮನೆ-ಮಠಗಳನ್ನು ಕಳೆದುಕೊಳ್ಳುತ್ತಿದ್ದು ಅವರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡದೆ ಕೇವಲ ಬಿಡಿಗಾಸನ್ನು ಭಿಕ್ಷೆಯಂತೆ ನೀಡುತ್ತಿದ್ದಾರೆ.ಇವರು ನೀಡುತ್ತಿರುವ ಭಿಕ್ಷೆ ನಮಗೆ ಬೇಕಾಗಿಲ್ಲವೆಂದು ಕಳೆದ 7 ದಿನಗಳಿಂದ ಎ.ಸಿ. ಕಛೇರಿಯ ಮುಂದೆ ಪೆಂಡಾಲ್ ನಿರ್ಮಿಸಿ ಅಲ್ಲಿಯೇ ಆಹಾರವನ್ನು ತಯಾರಿಸಿಕೊಂಡು ಸ್ಥಳದಲ್ಲೇ ಇದ್ದರು ಇದುವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲವೆಂದು ರೈತ ಮುಖಂಡರು ಆರೋಪಿಸಿದ್ದು ರೈತರು ಭಿಕ್ಷೆ ಬೇಡುತ್ತಿಲ್ಲ, ಬದಲಿಗೆ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳಬಾರದೆಂದು ತಮ್ಮ ಬರಬೇಕಾದ ಪರಿಹಾರವನ್ನು ಕೇಳುತ್ತಿದ್ದೇವೆ, ಸೂಕ್ತ ಪರಿಹಾರ ನೀಡಬೇಕು ಇಲ್ಲದಿದ್ದರೆ ನಮ್ಮ ಹೋರಾಟವನ್ನು ಮುಂದುವರೆಸಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಸ್ಯರುಗಳು ಒಕ್ಕೊರಲಿನಿಂದ ತಿಳಿಸಿದರು
ರೈತರ ಕಷ್ಟ ನಮ್ಮ ಕಷ್ಟವೆಂದು ವಿದ್ಯಾರ್ಥಿ ಸಂಘಟನೆಗಳ ಬೆಂಬಲ: ಈ ಧರಣಿಗೆ ರೈತರಮಕ್ಕಳಾದ ನಾವುಗಳು ನಮ್ಮವರ ಕಷ್ಟವನ್ನು ಅರಿತುಕೊಂಡು ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ಧರಣಿಗೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
