ಶಾಸಕರಿಂದ ಅಭಿವೃದ್ದಿಕಾಮಗಾರಿಗೆ ಭೂಮಿಪೂಜೆ

ಹೂವಿನಹಡಗಲಿ :

         ತಾಲೂಕಿನ ಸೋಗಿ ಗ್ರಾಮದಲ್ಲಿ ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರು 60 ಲಕ್ಷ ರೂ ವೆಚ್ಚದ ಗ್ರಾ.ಪಂ. ಕಛೇರಿ ಕಟ್ಟಡ ಕಾಮಗಾರಿ ಹಾಗೂ ಪದವಿ ಪೂರ್ವ ಕಾಲೇಜ್ ಬೋಧನಾ ಕೊಠಡಿ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

      ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೋಧನಾ ಕೊಠಡಿ ಹಾಗೂ ಶೌಚಾಲಯ ನಿರ್ಮಾಣವನ್ನು ಮಾಡುತ್ತಿರುವುದಾಗಿ ಹೇಳಿದರು.ಪದವಿ ಪೂರ್ವ ಕಾಲೇಜ್ ಈ ಹಿಂದೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಪ್ರಮಾಣದ ಕಾರಣವಾಗಿ ಸ್ಥಳಾಂತರಗೊಂಡಿತ್ತು, ಮರಳಿ ಸೋಗಿ ಗ್ರಾಮದಲ್ಲಿ ಕಾಲೇಜನ್ನು ಮುಂದುವರೆಸುವಂತೆ ಮಾಡಿದ್ದೇವೆ. ಅಲ್ಲದೇ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು

      ಸಂದರ್ಭದಲ್ಲಿ ಇಟ್ಟಿಗಿ ಬ್ಲಾಕ್ ಕಾಂಗೈ ಅಧ್ಯಕ್ಷರಾದ ಐಗೋಳ್ ಚಿದಾನಂದ, ಸೋಗಿ ಗ್ರಾ.ಪಂ ಅಧ್ಯಕ್ಷೆ ಜೆ.ಧನಲಕ್ಷ್ಮಿ ವಿರುಪಾಕ್ಷಪ್ಪ, ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಚಾರಸಮಿತಿ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಾರದ ಗೌಸ್‍ಮೊಹಿದ್ದೀನ್, ಡಿಸಿಸಿ ಸದಸ್ಯ ಬಸವನಗೌಡ ಪಾಟೀಲ್, ಜ್ಯೋತಿ ಮಲ್ಲಣ್ಣ, ಗಡ್ಡಿ ಬಸವರಾಜ, ಕೆ.ಪತ್ರೇಶ, ಕಾಲೇಜು ಅಭಿವೃದ್ದಿ ಅಧ್ಯಕ್ಷ ಮುಟಿಗಿ ಕೊಟ್ರೇಶ, ಕುರಿ ದೇವರಾಜ, ಚಂದ್ರಯ್ಯಸ್ವಾಮಿ, ಮೌನೇಶ.ಬಿ., ಪ್ರಕಾಶ್ ಮಲ್ಲನಕೇರಿ, ಜಿ.ಪಂ. ಎಇಇ ಹನುಮಂತಪ್ಪ, ಗುತ್ತಿಗೆದಾರರಾದ ದೊಡ್ಡಬಸಪ್ಪ, ಹೀರಾಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link