ನಗರದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಪ್ರತಿಭಟನೆ

ಬೆಂಗಳೂರು

          ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018 ಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಲೈಂಗಿಕ ಅಲ್ಪಸಂಖ್ಯಾತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪುರಭವನದ ಮುಂಭಾಗ ಶುಕ್ರವಾರ ಸೇರಿದ ನೂರಾರು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟ ಕಾರ್ಯಕರ್ತರು ಲೈಂಗಿಕ ಕಾರ್ಯಕರ್ತರು, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ (ಟ್ರಾನ್ಸ್‍ಜೆಂಡರ್ ಪರ್ಸನ್ ಹಾಗೂ ಟ್ರಾಫಿಕಿಂಗ್ ಆಫ್ ಪರ್ಸನ್ಸ್) ಮಸೂದೆ 2018ಯನ್ನು ರದ್ದುಪಡಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

          ಲೈಂಗಿಕ ಅಲ್ಪಸಂಖ್ಯಾತರ ಸಲಹೆ ಪಡೆಯದೆ ಲೈಂಗಿಕ ಅಲ್ಪಸಂಖ್ಯಾತರ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಮಸೂದೆ ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್‍ವಸತಿ ಬಿಲ್‍ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.ಈಗ ರಾಜ್ಯಸಭೆಯಲ್ಲಿ ಮಂಡಿಸುವುದು ಬಾಕಿ ಇದೆ. ಬಿಲ್‍ಗಳನ್ನು ರಾಜ್ಯಸಭೆಯಲ್ಲಿ ಮಂಡಿಸದೆ ರಾಜ್ಯಸಭೆಯ ವಿಶೇಷ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದರು.

          ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018 ಅನ್ನು ಲೈಂಗಿಕ ಅಲ್ಪಸಂಖ್ಯಾತರ ಸಲಹೆ ಆಧರಿಸಿ ಮತ್ತೊಮ್ಮೆ ಮಂಡಿಸಬೇಕು. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್‍ವಸತಿ ಬಿಲ್ 2018 ಅನ್ನು ವಿಶೇಷ ಸಮಿತಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

          ಎರಡು ಮಸೂದೆಗಳಿಗೆ ಯಾವುದೇ ಲೈಂಗಿಕ ಅಲ್ಪಸಂಖ್ಯಾತರ ಸಲಹೆ, ಬೇಕು- ಬೇಡಗಳನ್ನು ಆಲಿಸದೆ ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿರುವುದು ಆತಂಕಕಾರಿಯಾಗಿದೆ.ಮಸೂದೆ ಹೇಳುವಂತೆ ಮೂರನೇ ವ್ಯಕ್ತಿ ತೃತೀಯ ಲಿಂಗಿಯೆಂದು ಸ್ಪಷ್ಟೀಕರಣ ನೀಡುವುದು ಎಷ್ಟು ಸರಿ. ಮುಖ್ಯವಾಗಿ ಸಮುದಾಯಕ್ಕೆ ಆರೋಗ್ಯ, ಶಿಕ್ಷಣ, ಉದ್ಯೋಗವನ್ನು ನೀಡಬೇಕು. ಸಮಾಜದಲ್ಲಿ ಘನತೆ ತರುವಂತಹ ಯೋಜನೆಗಳನ್ನು ರೂಪಿಸಬೇಕು. ಅದನ್ನು ಬಿಟ್ಟು ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದಿಂದ ದೂರವಿಡುವ ಕೆಲಸ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದರು.

         ನಮ್ಮ ದೇಹವನ್ನು ಪರಿಶೀಲಿಸೋಕೆ ಯಾರು ಅಧಿಕಾರ ಕೊಟ್ಟವರು.ಒಬ್ಬ ವ್ಯಕ್ತಿಯ ದೇಹ ಪರಿಶೀಲನೆಗೆ ಇಷ್ಟು ಹೇಯವಾದಂತಹ ಮಸೂದೆ ಸಹಕಾರಿಯಾದರೆ ಹೇಗೆ? ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳಿಗೆ ಬೆಲೆಯೇ ಇಲ್ಲವೇ ಪ್ರತಿಭಟನಾಕಾರರು ಪ್ರಶ್ನಿಸಿದರು
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap