ಬಳ್ಳಾರಿ.
ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರು ಸಮಾಜಕ್ಕೆ ಕಾರ್ಯತತ್ವವನ್ನು ನೀಡಿದ ಮಹಾನ್ ವ್ಯಕ್ತಿ ಇವರ ವಚನಗಳು ಇಂದಿಗೂ ಅಮರ ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ., ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರರಂದು ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರು ಸೊನ್ನನಿಧಿ, ಪ್ರಸ್ತುತ ಸೋಲಾಪುರದಲ್ಲಿ ಅನೇಕ ದೇವಾಲಯ, ಕೆರೆಗಳನ್ನು ನಿರ್ಮಾಣ ಮಾಡಿದವರು. ಗುಡಿ ಗೋಪುರವನ್ನು ಕಟ್ಟಿಸಿ ಆದರ್ಶ ತೋರಿಸದವರು. ನಿರಂತರ ಧರ್ಮ, ಧ್ಯಾನ, ವಚನಗಳನ್ನು ಸಮಾಜಕ್ಕೆ ಕಾರ್ಯತತ್ವ ನೀಡಿದವರು. ಇಂತಹ ಶ್ರೇಷ್ಠ ಶರಣರನ್ನು ಪಡೆದಿದ್ದು, ಈ ನಾಡಿನ ಭಾಗ್ಯ ಎಂದರು.
ಗದಗ ಜಿಲ್ಲೆಯ ಗಜೇಂದ್ರಗಡದ ಸಾಹಿತಿಗಳಾದ ಪ್ರೊ.ಎಫ್.ಎಸ್.ಕರಿದುರುಗಣ್ಣನವರ್ ಅವರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರ ಆದರ್ಶಗಳು ಮತ್ತು ಜೀವನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ್ ಅವರು ಸ್ವಾಗತಿಸಿದರು.
ಈ ಸಮಾರಂಭದಲ್ಲಿ ಸಹಾಯಕ ಆಯುಕ್ತ ರಮೇಶ ಕೋನಾರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಡ್ರಗ್ಸ್ ಕಂಟ್ರೋಲರ್ ಅಧಿಕಾರಿ ನಾಗರಾಜ್, ರಾಜ್ಯಾಧ್ಯಕ್ಷರಾದ ವೈ.ಕೊಟ್ರೇಶ್, ಸಮಾಜದ ಮುಖಂಡರುಗಳಾದ ವಿ.ಮಹೇಶ್, ಮಲ್ಲಿಕಾರ್ಜುನ, ಕೊಟ್ರೇಶ್, ರಾಮಚಂದ್ರಯ್ಯ, ವಿ.ರಾಮುಲು, ಸುಂಕಣ್ಣ, ರಾಮಾಂಜಿನೇಯ, ಸಿರಿವಾರ ಹೊನ್ನೂರುಸ್ವಾಮಿ ಹಾಗೂ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ