11.85 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ : ಶಾಸಕ ಸಿ.ಎಂ.ಉದಾಸಿ

ಹಾನಗಲ್ಲ:

      ತಾಲೂಕಿನಲ್ಲಿ ನಾಲ್ಕು ಹೊಸ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಒಟ್ಟು 11.85 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದ್ದಾರೆ, 

       ರವಿವಾರ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿ ನಡೆಯಲಿದ್ದು, ತಾಲೂಕಿನಲ್ಲಿ ಹರಿದ ವರದಾ ಮತ್ತು ಧರ್ಮಾ ನದಿ ನೀರು ಬಳಸಿಕೊಂಡು ಕೃಷಿ ಭೂಮಿ ನೀರಾವರಿಗೆ ಒಳಪಡಿಸುವ ಈ ಕಾಮಗಾರಿಗಳು ಅನೇಕ ವರ್ಷಗಳಿಂದ ಈ ಭಾಗದ ಕೃಷಿಕರ ಬೇಡಿಕೆಯಾಗಿತ್ತು ಎಂದರು.

       ತಾಲೂಕಿನ ಬ್ಯಾತನಾಳ ಗ್ರಾಮ ಭಾಗದ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಏತ ನೀರಾವರಿ ಯೋಜನೆ 383 ಲಕ್ಷ ಮೊತ್ತದಲ್ಲಿ, ಚಿಕ್ಕಹುಲ್ಲಾಳ ಗ್ರಾಮ ಸಮೀಪ ವರದಾ ನದಿ ನೀರು ಬಳಸಿಕೊಂಡು 219 ಲಕ್ಷದ ವೆಚ್ಚದಲ್ಲಿ ಏತ ನೀರಾವರಿ, ಮಕರವಳ್ಳಿ ಗ್ರಾಮ ಹತ್ತಿರ ವರದಾ ನದಿಯಿಂದ ನೀರೆತ್ತಿ ಕೃಷಿ ಭೂಮಿಗೆ ಹರಿಸುವ ಏತ ನೀರಾವರಿ ಯೋಜನೆಯು 362 ಲಕ್ಷ ವೆಚ್ಚದಲ್ಲಿ ಮತ್ತು ಲಕ್ಷ್ಮೀಪೂರ ಗ್ರಾಮ ಸಮೀಪ ಧರ್ಮಾ ನದಿ ನೀರು ಬಳಸಿ ನಿರ್ಮಾಣಗೊಳ್ಳುವ ಏತ ನೀರಾವರಿ ಯೋಜನೆಯು 221 ಲಕ್ಷದಲ್ಲಿ ಅನುಷ್ಠಾನಕ್ಕೆ ಬರಲಿವೆ ಎಂದು ಉದಾಸಿ ಹೇಳಿದರು.

      1 ಕೋಟಿ ವೆಚ್ಚದಲ್ಲಿ ಲಕ್ಷ್ಮೀಪೂರ ಗ್ರಾಮ ಸಮೀಪ ಧರ್ಮಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣದ ಕಾಮಗಾರಿಯು ಟೆಂಡರ್ ಹಂತದಲ್ಲಿದ್ದು, ತಾಲೂಕಿನ ನೀರಾವರಿ ಕ್ಷೇತ್ರ ವಿಸ್ತರಣೆಯ ಕಾರ್ಯದಲ್ಲಿ ಹಿಂದೆ ಬೀಳುವುದಿಲ್ಲ, ಆಧ್ಯತೆ ಮೇರೆಗೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬದ್ಧವಿರುವುದಾಗಿ ಸಿ.ಎಂ.ಉದಾಸಿ ಹೇಳಿದರು.

       ಜಿಲ್ಲೆಗೆ ಪ್ರತ್ಯೇಕ ನೀರಾವರಿ ವಿಭಾಗ: ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆ ಸೇರಿ ಸಣ್ಣ ನೀರಾವರಿ ಇಲಾಖೆಯ ವಿಭಾಗವು ಕಾರ್ಯನಿರ್ವಹಿಸುತ್ತದೆ, ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ನೀರಾವರಿ ಕಾಮಗಾರಿಗಳು ನಡೆಯುತ್ತಿವೆ, ಹೀಗಾಗಿ ಹಾವೇರಿ ಜಿಲ್ಲೆಗೆ ಪ್ರತ್ಯೇಕವಾಗಿ ಸಣ್ಣ ನೀರಾವರಿ ಇಲಾಖೆಯ ವಿಭಾಗವನ್ನು ತೆರೆಯಲಾಗುತ್ತಿದೆ ಎಂದು ಸಿ,ಎಂ.ಉದಾಸಿ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link