ಸಿರುಗುಪ್ಪ :
ಡಾ.ಸರ್ವಪಲ್ಲೆ ರಾಧಕೃಷ್ಣನ್‍ರವರು ಆದರ್ಶ ಶಿಕ್ಷಕರಾಗಿ, ರಾಷ್ಟ್ರಪತಿ ಪದವಿಯ ಮೂಲಕ ಶಿಕ್ಷಕ ಸಮುದಾಯಕ್ಕೆ ಮೆರಗನ್ನು ತಂದು ಕೊಟ್ಟು ಶಿಕ್ಷಕರ ಘನತೆಯನ್ನು ಹೆಚ್ಚಿಸಿದ್ದಾರೆ, ಪ್ರತಿಯೊಬ್ಬರ ಶಿಕ್ಷಕರು ಅವರ ಜೀವನ ತತ್ವ ಸಾಧನೆಗಳನ್ನು ಅಳವಡಿಸಿಕೊಂಡು ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ ತಮ್ಮಿಂದಾಗಬೇಕು, ಗುರುವಿನ ಸ್ಥಾನ ಮಹತ್ವಾದಾಗಿದೆ ಎಂದು ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಶ್ರೀಅಭಿನವ ಮಹಾಂತ ಮಹಾಸ್ವಾಮಿಗಳು ತಿಳಿಸಿದರು.
ನಗರದ ಎವಿಎಸ್ ಸಭಾಂಗಣದಲ್ಲಿ ಸಿರುಗುಪ್ಪ ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 130ನೇ ಜನ್ಮದಿನೋತ್ಸವದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾನುವಾರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ.ಸರ್ವಫಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು
ಗುರು ಬಸವ ಮಠದ ಬಸವಭೂಷಣ ಸ್ವಾಮಿ, ಬಿ.ಇ.ಒ.ಪಿ.ಡಿ.ಭಜಂತ್ರಿ, ಕ.ರಾ.ಪ್ರಾ.ಶಾ.ಶಿ.ಸಂ.ರಾಜ್ಯ ಉಪಾಧ್ಯಕ್ಷ ಅರುಣಾ ಪ್ರತಾಪ್ ರೆಡ್ಡಿ ಮಾತನಾಡಿದರು.
ತಾಲೂಕಿನ ವಿವಿಧ ಗ್ರಾಮಗಳ ಅನುದಾನ ರಹಿತ ಶಾಲೆಗಳ ಆದರ್ಶ ಶಿಕ್ಷಕ ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಿ.ತಾ.ಅ.ರ.ಖಾ.ಶಾ.ಆ.ಮಂ.ಒ.ತಾ.ಅಧ್ಯಕ್ಷ ಎಲಿಗಾರ ವೆಂಕಟೇಶ್,ಉಪಾಧ್ಯಕ್ಷೆ ಬಿ.ರಂಗಮ್ಮ, ನಗರಸಭೆ ಅಧ್ಯಕ್ಷೆ ಸವಿತಾ ಅರುಣಾ ಪ್ರತಾಪ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್ .ಗೋಪಾಲ್, ಕಾರ್ಯದರ್ಶಿ ಬಸವರೆಡ್ಡಿ, ಮುಖಂಡರಾದ ಪಂಪಾನಗೌಡ, ದಮ್ಮೂರು ಮಲ್ಲಿಕಾರ್ಜುನ, ಆರ್.ಬಸವಲಿಂಗಪ್ಪ, ಹೆಚ್.ಎಂ.ವೀರಭದ್ರ ಶರ್ಮಾ, ಆಮಿನ್ ಸಾಬ್, ಮಲ್ಲಿಕಾರ್ಜುನ, ಹನುಮಂತಪ್ಪ, ಗೋಪಾಲರಾವ್, ಪಾರ್ವತೀಶ ಗೌಡ, ಲಿಂಗನಗೌಡ, ದೊಡ್ಡನಗೌಡ, ರಾಶೇಖರ ರೆಡ್ಡಿ, ಸೇರಿದಂತೆ ಶಿಕ್ಷಕರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ