ಐವರು ಹೆಂಡಿರ ಭೂಪ ಜಪಾನ್ ರಾಜನ ಬಂಧನ

ಬೆಂಗಳೂರು

       ರಂಗೋಲಿ ಹಾಕದಿರುವುದರಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಐವರು ಹೆಂಡಿರ ಭೂಪ ಜಪಾನ್ ರಾಜ ಸೇರಿ ಮೂವರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಕೆ.ಪಿ.ಅಗ್ರಹಾರ ಪೊಲೀಸರು 1 ಕೋಟಿ 2 ಲಕ್ಷ 57 ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

         ಜೆ.ಪಿ.ನಗರದ ಬೀಳೆಕಳ್ಳಿಯ ರಾಜ ಆಲಿಯಾಸ್ ಜಪಾನ್ ರಾಜ (40)ನ ಜೊತೆಗೆ ಆತನ ಸಹಚರರಾದ ನಾಗರಾಜ ಆಲಿಯಾಸ್ ಮತಿನಾಗ (24) ಮಲ್ಲೇಶ್ವರಂನ ಕಿರಣ್ ಕುಮಾರ್ (26)ನನ್ನು ಬಂಧಿಸಲಾಗಿದೆ. ಆರೋಪಿಗಳು ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ದೇವರ ಚಿಕ್ಕನಹಳ್ಳಿಯ ಜ್ಯೂವೆಲ ಅಂಗಡಿಯ ಮಾಲೀಕ ಸೈಯದ್ ಫಾರೂಕ್ ಹಾಗೂ ಮಾರಾಟಕ್ಕೆ ನೆರವಾಗುತ್ತಿದ್ದ ಜಯನಗರದ ನೀಲಮ್ಮ (70) ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ

          ಬಂಧಿತರಿಂದ 1 ಕೋಟಿ 2 ಲಕ್ಷ 57 ಸಾವಿರ ಮೌಲ್ಯದ 4 ಕೆ.ಜಿ. 77 ಗ್ರಾಂ ಚಿನ್ನ 1 ಕೆ.ಜಿ. 300 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು 44 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

          ಐವರು ಪತ್ನಿಯರನ್ನು ಹೊಂದಿದ್ದ ಜಪಾನ್ ರಾಜ ಐಷರಾಮಿ ಜೀವನ ನಡೆಸುತ್ತಿದ್ದ ಮೋಜು ಮಸ್ತಿಯ ಜೊತೆಗೆ ಯುವತಿಯರ ಶೋಕಿಗಾಗಿ ಕಳ್ಳತನಕ್ಕಿಳಿದಿದ್ದ ಮೊದಲಿಗೆ ಆಟೋ ಚಾಲಕನಾಗಿದ್ದ ಆತ 17 ವರ್ಷಕ್ಕೆ ಅಪರಾಧ ಜಗತ್ತಿಗೆ ಕಾಲಿಟ್ಟು ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಎಂದು ಹೇಳಿದರು.

ರಂಗೋಲಿ ಗುರುತು

            ಆರೋಪಿ ರಾಜ ಬೈಕ್ ನಲ್ಲಿ ಸುತ್ತಾಡುತ್ತಾ ಮನೆಗಳ ಮುಂದೆ ಬಿದ್ದಿರುವ ಪೇಪರ್ ಗಳು, ರಂಗೋಲೆ ಹಾಕದಿರುವುದು ಕಸ ಗುಡಿಸದಿರುವುದನ್ನು ಗಮನಿಸಿ ಮನೆಗೆ ಬೀಗ ಹಾಕದಿರುವುದನ್ನು ಪತ್ತೆ ಹಚ್ಚಿ ರಾತ್ರಿ ಹಗಲು ವೇಳೆ ಕಳ್ಳತನ ಕೃತ್ಯಕ್ಕಿಳಿಯುತ್ತಿದ್ದನು.
ಜರ್ಕಿನ್ ನಲ್ಲಿ ಕಬ್ಬಿಣದ ಆಯುಧವನ್ನು ಇಟ್ಟುಕೊಂಡು ಮನೆ ಹತ್ತಿರ ಯಾರು ಇಲ್ಲದಿರುವುದನ್ನು ನೋಡಿ ಬಾಗಿಲು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರೇ ಮತ್ತೊಬ್ಬ ಆರೋಪಿ ನಾಗರಾಜ ಹೊರಗಡೆ ಕಾಯುತ್ತಾ ನಿಲ್ಲುತ್ತಿದ್ದ, ಒಂದೊಂದು ಕಡೆಗಳಲ್ಲಿ ಆತನೇ ಜೊತೆಗೆ ಬಂದು ಕೃತ್ಯದಲ್ಲಿ ತೊಡಗುತ್ತಿದ್ದ. ಮತ್ತೊಬ್ಬ ಆರೋಪಿ ಇವರಿಬ್ಬರನ್ನು ಕಳವು ಮಾಡಿದ ನಂತರ ಆಟೋದಲ್ಲಿ ಕರೆದುಕೊಂಡು ಪರಾರಿಯಾಗುತ್ತಿದ್ದನು.

ಮಾಲೀಕನ ಸೆರೆ

           ಆರೋಪಿಗಳು ಕಳವು ಮಾಡಿದ್ದ ಚಿನ್ನಭರಣಗಳನ್ನು ಜಯನಗರದ ನೀಲಮ್ಮ (70) ಅವರ ಮೂಲಕ ಆಟಿಕಾ ಗೋಲ್ಡ್, ಸುಲ್ತಾನ್ ಗೋಲ್ಡ್, ಇನ್ನಿತರ ಕಂಪನಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಚಿನ್ನಾಭರಣ ಖರೀದಿಸುತ್ತಿದ್ದ ದೇವರ ಚಿಕ್ಕನಹಳ್ಳಿಯ ಜ್ಯೂವೆಲ ಅಂಗಡಿಯ ಮಾಲೀಕ ಸೈಯದ್ ಫಾರೂಕ್ ನನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಕೆ.ಪಿ.ಅಗ್ರಹಾರ ಪೊಲೀಸ್ ಇನ್ಸ್ ಪೆಕ್ಟರ್ ಮಂಜು ಮತ್ತವರ ತಂಡ ಬಂಧಿಸಿ ಕಾಮಾಕ್ಷಿ ಪಾಳ್ಯದ 4, ಜ್ಞಾನ ಭಾರತಿಯ 3, ವಿಜಯನಗರದ 4 ಮಾಗಡಿ ರಸ್ತೆ ಎಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೋಡಿಯ ತಲಾ 2 ಸೇರಿ ಹಗಲು ರಾತ್ರಿ ಕನ್ನಗಳವು ಮಾಡಿದ 44 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ರವಿ ಚನ್ನಣ್ಣನವರ್ ಅವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link