ಚಿತ್ರದುರ್ಗ:
ಸಮಾಜದಲ್ಲಿ ನಡೆಯುವ ಒಳ್ಳೆ ವಿಚಾರಗಳಿಗಿಂತ ಕೆಟ್ಟ ವಿಚಾರಗಳ ಕಡೆ ಯುವ ಪೀಳಿಗೆ ಹೆಚ್ಚು ಗಮನ ಕೊಡುತ್ತಿರುವುದು ನೋವಿನ ಸಂಗತಿ ಎಂದು ಯುವ ನ್ಯಾಯವಾದಿ ಪ್ರತಾಪ್‍ಜೋಗಿ ವಿಷಾಧಿಸಿದರು.
ನೆಹರು ಯುವ ಕೇಂದ್ರ, ಯುವ ಸಬಲೀರಕಣ ಮತ್ತು ಕ್ರೀಡಾ ಇಲಾಖೆ, ಶ್ರೀಮಾತೃಶ್ರಿ ಕಲಾ, ಸಾಂಸ್ಕøತಿಕ ಮತ್ತು ಕ್ರೀಡಾ ಯುವಕರ ಸಂಘ, ಶ್ರೀಮಾತೃಶ್ರೀ ಕೈಗಾರಿಕಾ ತರಬೇತಿ ಕೇಂದ್ರ, ಶ್ರೀರಾಮ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ದಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲ್ದಿ ಅವರು ಮಾತನಾಡಿದರು
ದೇಶದ ಯಾವುದೇ ಮೂಲೆಯಲ್ಲಾಗಲಿ ಅಪರಾಧಗಳು ನಡೆದಾಗ ದಿನವಿಡಿ ಮಾಧ್ಯಮಗಳಲ್ಲಿ ಬಿತ್ತರವಾಗುವುದು ಯುವ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಯಾವುದೇ ಕಾರಣಕ್ಕೂ ಯುವಕ/ಯುವತಿಯರು ಧೃತಿಗೆಡಬಾರದು. ಜಾತಿ ಧರ್ಮದ ಮೇಲೆಯೇ ಎಲ್ಲವೂ ನಡೆಯುವುದಾದರೆ ಯಾವ ಸಾಧನೆ ಮಾಡಲು ಆಗುವುದಿಲ್ಲ.
ಮೊದಲು ದೇಶಭಕ್ತಿ ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಯುವ ಮುಖಂಡ ಎನ್.ಜಿತೇಂದ್ರ ಹುಲಿಕುಂಟೆ ಯುವ ನಾಯಕತ್ವ ಮತ್ತು ಅದರ ಪಾತ್ರ ಎಂಬ ವಿಚಾರ ಕುರಿತು ಮಾತನಾಡುತ್ತ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಯುವ ನಾಯಕತ್ವ ದೇಶಕ್ಕೆ ಅಗತ್ಯ ಮತ್ತು ಅನಿವಾರ್ಯತೆಯಿದೆ.
ಕ್ರಿಕೇಟ್ ಆಟಗಾರರು, ಸಿನಿಮಾ ತಾರೆಯರನ್ನು ಯುವ ಜನಾಂಗ ರೋಲ್ ಮಾಡಲ್ ಆಗಿ ಮಾಡಿಕೊಳ್ಳುವ ಬದಲು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಗಾಂಧಿ, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್ ಇವರುಗಳು ನಿಮಗೆ ರೋಲ್ ಮಾಡಲ್ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಭಾರತೀಯರು ನಾವುಗಳೆಲ್ಲಾ ಒಂದೇ ಎನ್ನುವ ದೇಶಭಕ್ತಿಯನ್ನು ಮೊದಲು ಎಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ಭಾರತ ಶಾಂತಿ ಮತ್ತು ಸೌಹಾರ್ಧತೆಯಿಂದ ಇರುತ್ತದೆ ಎಂದರು.ಶ್ರೀಮಾತೃಶ್ರಿ ಕಲಾ ಸಾಂಸ್ಕತಿಕ ಮತ್ತು ಕ್ರೀಡಾ ಯುವಕರ ಸಂಘದ ರಾಜ್ಯಾಧ್ಯಕ್ಷ ವಿ.ಎಲ್.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮಾತೃಶ್ರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸಿ.ಎಂ.ಚಂದ್ರಶೇಖರ್, ಜಿಲ್ಲಾ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎ.ಚಿತ್ತಪ್ಪ ಯಾದವ್, ಪತ್ರಕರ್ತ ಮಾಲತೇಶ್ ಅರಸ್, ವೆಂಕಟೇಶ್, ಮಾತೃಶ್ರೀ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಿ.ಎಲ್.ಪ್ರವೀಣ್ ವೇದಿಕೆಯಲ್ಲಿದ್ದರು.ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ