ಸಮಾಜದಲ್ಲಿ ಗೌರವಯುತವಾದ ಏಕೈಕ ವೃತ್ತಿ ಎಂದರೆ ಶಿಕ್ಷಕರದ್ದು : ಬಿ.ಎನ್.ತಿಪ್ಪೇಸ್ವಾಮಿ

ಹಿರಿಯೂರು:

      ಸಮಾಜದಲ್ಲಿ ಗೌರವಯುತವಾದ ಏಕೈಕ ವೃತ್ತಿ ಎಂದರೆ ಶಿಕ್ಷಕರದ್ದು. ಜೀವನ ನಿರ್ವಹಣೆಗೆ ಹಲವಾರು ವೃತ್ತಿಗಳಿವೆ. ಆದರೆ ಶಿಕ್ಷಕರ ವೃತ್ತಿಯಲ್ಲಿ ಒಂದು ರೀತಿಯ ಆತ್ಮತೃಪ್ತಿಯಿದೆ ಎಂಬುದಾಗಿ ಗಿರೀಶವೀರಶೈವ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎನ್.ತಿಪ್ಪೇಸ್ವಾಮಿ ಹೇಳಿದರು.
ನಗರದ ಗಿರೀಶಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ತರಬೇತಿ ಮುಗಿಸಿದ ಶಿಕ್ಷಕರಾಗಿ ಹಮ್ಮಿಕೊಳ್ಳಲಾಗಿದ್ದ 2017-18ನೇ ಸಾಲಿನ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

         ಸಮಾಜದಲ್ಲಿ ಭಾವಿ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳು ನೀವು. ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವಂತಹ ಕೆಲಸವನ್ನು ಶಿಕ್ಷಕರು ಮಾತ್ರ ಮಾಡಲು ಸಾಧ್ಯ. ಬದುಕಲು ಯಾವುದೋ ಒಂದು ವೃತ್ತಿಬೇಕು ಎಂಬ ಮನೋಭಾವದಿಂದ ಕೆಸಲ ಮಾಡಿದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎಂದರು.

         ಪದವಿ ಪಡೆದ ನಂತರ ಬಿ.ಇಡಿ ವ್ಯಾಸಂಗಕ್ಕೆ ಬಂದಿರುವ ನೀವೇಲ್ಲಾ ಶಿಕ್ಷಕರಾಗಬೇಕೆಂಬ ಮಹದಾಸೆ ಹೊಂದಿದ್ದೀರಿ. ಶಿಕ್ಷಕರ ಕೆಲಸ ದೊರೆತ ಮೇಲೆ ನಿಮ್ಮ ಬದುಕು ವಿಧ್ಯಾರ್ಥಿಗಳಿಗೆ ಮುಡಿಪಾಗಿರಲಿ ಎಂಬುದಾಗಿ ಅವರು ಹೇಳಿದರು.

          ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷೆ ಸೌಭಾಗ್ಯವತಿದೇವರು, ನಾವು ಚಿಕ್ಕವರಿದ್ದಾಗ ಹೆಣ್ಣುಮಕ್ಕಳನ್ನು ಹೊರ ಊರುಗಳಿಗೆ ಓದಲು ಕಳಿಸುತ್ತಿರಲಿಲ್ಲ. ಈಗ ಗಾಮ್ರೀಣ ಪ್ರದೇಶದಲ್ಲು ಶಾಲಾ-ಕಾಲೇಜುಗಳಿದ್ದು, ಹೆಣ್ಣುಮಕ್ಕಳು ಉನ್ನತ ಪದವಿ ಪಡೆಯುವ ಮೂಲಕ ಭವಿಷ್ಯ ರೂಪಿಸಿಕೂಳ್ಳಿ’ ಎಂದರು.

        ಇದೇ ಸಂದರ್ಭದಲ್ಲಿ ಉಪನ್ಯಾಸಕ ನಿಜಲಿಂಗಪ್ಪ ವಿದ್ಯಾರ್ಥಿಗಳಿಗೆ ಪ್ರತಿಜ್ವಾವಿಧಿ ಬೋದಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಂ.ಎ.ಸುಧಾ, ಸಂಸ್ಥೆಯ ನಿರ್ದೇಶಕರಾದ ಎಂ.ವಿ. ಕಾಂತೇಶ್ವರ, ಜಿ.ಎಸ್. ಬಸವರಾಜ್ , ಎಚ್.ಆರ್. ತಿಪೇಸ್ವಾಮಿ, ಎಸ್.ಎಲ್.ರಘು, ಪಿ.ವೀರಣ್ಣ, ರಾಜೇಂದ್ರ ಪ್ರಸಾದ್, ಟಿ. ನಾಗರಾಜ್, ನಯೀಮುದೀನ್, ಪ್ರಕಾಶ್, ಮಲ್ಲಿಕ್ ಸಾಬ್, ಗಜೇಂದ್ರ ಇತರರು ಉಪಸ್ಥಿತರಿದ್ದರು. ಆರಂಭದಲ್ಲಿ ಸುಷ್ಮಾ ಪ್ರಾರ್ಥಿಸಿದರು. ವಿನೋದ ಸ್ವಾಗತಿಸಿ, ನೇತ್ರಾವತಿ ವಂದಿಸಿದರು. ಚಿತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link