ಹೊಳಲ್ಕೆರೆ:
ನಾನಾ ಜಾತಿ ಧರ್ಮಗಳಿಗೆ ಸೇರಿದ ಜನರಿಗೆ ಸಮಾನವಾದ ಹಕ್ಕು, ಕರ್ತವ್ಯಗಳನ್ನು ಒದಗಿಸಲಾಗಿದೆ. ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ವಿಶ್ವ ಮಾನವ ತತ್ವದ ಆಧಾರದ ಮೇಲೆ ಸಂವಿಧಾನವನ್ನು ರಚಿಸಿ 1950ನೇ ಜನವರಿ 26 ರಂದು ಸರ್ವತಂತ್ರ ಸ್ವಾತಂತ್ರ್ಯ ಗಣರಾಜ್ಯವಾಗಿ ಭಾರತ ಅಸ್ತಿತ್ವ ಪಡೆದಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪಟ್ಟಣದ ಕೊಟ್ರೆನಂಜಪ್ಪ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಬ್ರಿಟಿಷರ ಆಳ್ವಿಕೆಯಿಂದ ನಲುಗಿದ್ದ ಭಾರತಕ್ಕೆ ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ಮಹಾತ್ಮಗಾಂಧಿ ತಂದುಕೊಟ್ಟರು. ಇದು ಜಗತ್ತಿನ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ರಾಜ ಮಹಾರಾಜರ ಮತ್ತು ಬ್ರಿಟೀಷರ ಆಳ್ವಿಕೆಯನ್ನು ಅಂತ್ಯಗೊಳಿಸಿ ವಿಶಾಲ ಭಾರತವನ್ನು ಒಗ್ಗೂಡಿಸಿ ಹಲವು ಭಾಷೆ, ಧರ್ಮ, ಸಂಸ್ಕತಿಗಳನ್ನು ಏಕತೆಯಲ್ಲಿ ಕಾಣುವ ಸದುದ್ದೇಶದಿಂದ ಪ್ರಜಾಸತ್ತಾತ್ಮಕ ರಾಜ್ಯಾಡಳಿತ ವ್ಯವಸ್ಥೆ ಜಾರಿಗೆ ಬಂತು. ಸಂವಿಧಾನ ಸಮಿತಿ ರಚನಾ ಅಧ್ಯಕ್ಷರಾಗಿ ಕಾನೂನು ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೇಮಕ ಮಾಡಲಾಯಿತು. ಅಂದಿನಿಂದ ಇಡೀ ಭಾರತ ಒಚಿದೇ ಸಂವಿಧಾನದಡಿಯಲ್ಲಿ ಸೇರಿದೆ. ಈಬಗ್ಗೆ ಇಡೀ ವಿಶ್ವದ ಜನರು ಹೆಮ್ಮೆಪಡುವಚಿತಾಯಿತು.
ಸರ್ಕಾರಿ ಶಿಕ್ಷಕರು ಶಾಲೆಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಬೇಕು. ನಿಮಗೆ ಅನೇಕ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ. ಈ ಬಗ್ಗೆ ನೀವು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಅನ್ನ ನೀಡುವ ರೈತರು ಕಷ್ಟದಲ್ಲಿದ್ದಾರೆ ಅವರು ಅವರ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಶಿಕ್ಷಣ ನೀಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಆ ಮಕ್ಕಳನ್ನು ತಮ್ಮ ಮಕ್ಕಳು ಎಚಿದು ಅವರಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕರು ಒತ್ತಿ ಹೇಳಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ರೈತರ ಬೆಳೆಗಳಿಗೆ ನೀರಿಲ್ಲ. ಕಳೆದ 5 ವರ್ಷದಿಂದ ಮಳೆ ಸರಿಯಾಗಿ ಬೀಳದೆ ಬರಗಾಲವನ್ನು ಅನುಭವಿಸುತ್ತಿದ್ದಾರೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಶಾಶ್ವತವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಈಗಾಗಲೆ ತಾಲ್ಲೂಕಿನಲ್ಲಿ 100 ಕೆರೆಗಳಿಗೆ ನೀರನ್ನು ತುಂಬುವ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ ಈ ಕಾರ್ಯಕ್ರಮ ಯಶಸ್ವಿಯಾದರೆ ತಾಲ್ಲುಕಿನ ರೈತರು ನೆಮ್ಮದಿಯಿಚಿದ ಜೀವಿಸುತ್ತಾರೆ. ನಮ್ಮ ಮುಂದಿನ ಯೋಜನೆ ತಾಲ್ಲೂಕಿನಲ್ಲಿ ನೀರಿನ ಬವಣಿಯನ್ನು ತೀರಿಸುವುದೆ ಮುಖ್ಯ ಯೋಜನೆ ಎಂದು ಶಾಸಕರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಆದ ನೀಡಿದ ತಹಶೀಲ್ದಾರ್ ಕೆ.ನಾಗರಾಜ್ ಗಣರಾಜ್ಯೋತ್ಸವದ ಸಚಿದೇಶದಲ್ಲಿ ಮಾತನಾಡಿ ಹಿರಿಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ, ದೊರೆತಿದೆ. ನಾನಾ ಧರ್ಮಿಯರು ಶಾಂತಿ, ಸಂಯಮದಿಂದ ಬಾಳ್ವೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸಲು ಕೆಲವು ದುಷ್ಟ ಶಕ್ತಿಗಳು ಹವಣಿಸುತ್ತಿರುವುದು ಆತಂಕಕಾರಿ ಸಂಗತಿ ಎಂದು ವಿಷಾದಿಸಿದರು.
ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾದುದು ಭಾರತ, ಬುದ್ದ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧೀಜಿ ಅವರಂತಹ ಮಹಾನ್ ವ್ಯಕ್ತಿಗಳು ಜನಿಸಿದ ನೆಲದಲ್ಲಿ ಅಶಾಂತಿ ಮತ್ತು ಭಯದ ವಾತಾವರಣ ಸೃಷ್ಟಿ ಸರಿಯಲ್ಲ. ಹೀಗಾಗಿ ಜನತೆಯೂ ಸಹಕಾರವೋ ಅಗತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜು ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್, ತಾ.ಪಂ. ಸದಸ್ಯ ಪರಮೇಶ್ವರಪ್ಪ, ಪ.ಪಂ. ಸದಸ್ಯರುಗಳಾದ ಕೆ.ಸಿ.ರಮೇಶ್, ಹಬೀಬುರ್ ರಹಮಾನ್, ಮಾಜಿ ಜಿ.ಪಂ. ಸದಸ್ಯ ಎಲ್.ಬಿ.ರಾಜಶೇಖರ್, ತಾಲ್ಲೂಕು ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರಂಗಸ್ವಾಮಿ, ಗೌರವಾಧ್ಯಕ್ಷ ಬಸವರಾಜಯ್ಯ, ಇಓ ಮಹಾಂತೇಶ್, ಸಿಪಿಐ ಮಧು ಸುಧನ್, ಬಿಇಓ ಜಗದೀಶ್, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಆಂಗವಿಕಲ ಸ್ಪರ್ಧೇಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ, ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
